ಕಲ್ಯಾಣ ಕರ್ನಾಟಕ ಉತ್ಸವ, ವಿಶ್ವಕರ್ಮ ಜಯಂತಿ ಪೂರ್ವ ಸಿದ್ದತಾ ಸಭೆ

ಚಿಂಚೋಳಿ,ಸೆ.12- ತಹಸಿಲ್ ಕಾರ್ಯಾಲಯದಲ್ಲಿ ಸೇರಿದ ಕಲ್ಯಾಣ ಕರ್ನಾಟಕ ಉತ್ಸವ ಹಾಗೂ ವಿಶ್ವಕರ್ಮ ಜಯಂತಿ ಆಚರಣೆಯ ಪೂರ್ವಭಾವಿ ಸಭೆಯಲ್ಲಿ ಗ್ರೇಡ್ 2 ತಹಶೀಲ್ದಾರ್ ವೆಂಕಟೇಶ ದುರ್ಗನ ಅವರು ಮಾತನಾಡಿ, ಇದೇ ಸೆಪ್ಟೆಂಬರ್ 17 ನೇ ತಾರೀಖ್ ರಂದು ಕಲ್ಯಾಣ ಕರ್ನಾಟಕ ಉತ್ಸವ ಹಾಗೂ ವಿಶ್ವಕರ್ಮ ಜಯಂತಿದ್ದು ತಾಲೂಕಿನ ವಿವಿಧ ಇಲಾಖೆಯಲ್ಲಿ ಅಂದು ಬೆಳಗ್ಗೆ 8.30 ಒಳಗಾಗಿ ತಮ್ಮ ತಮ್ಮ ಕಚೇರಿಯಲ್ಲಿ ಧ್ವಜಾರೋಹಣ ಮಾಡಿಕೊಂಡು 9 ಗಂಟೆಗೆ ತಹಸಿಲ್ ಕಾರ್ಯಾಲಯದಲ್ಲಿ ಕಾರ್ಯಕ್ರಮ ಪಾಲ್ಗೊಳ್ಳಬೇಕೆಂದು ಹೇಳಿದರು.
ಈ ಸಭೆಯಲ್ಲಿ ಕಲಂ 371(ಜೆ) ತಿದ್ದುಪಡಿ ಹೋರಾಟಗಾರರ ದಿವಂಗತ ವೈಜನಾಥ್ ಪಾಟೀಲ್ ಅವರ ಭಾವಚಿತ್ರವನ್ನು ಇಟ್ಟು ಪೂಜೆ ಮಾಡಬೇಕೆಂದು ಸಭೆಯಲ್ಲಿ ಪಾಲ್ಗೊಂಡವರು ಒತ್ತಾಯ ಮಾಡಿದರು ಅದಕ್ಕೆ ಗ್ರೇಡ್ 2 ತಹಶೀಲ್ದಾರ್ ಅವರು ಸಭೆಯ ನಡುವಳಿಯನ್ನು ಜಿಲ್ಲಾಧಿಕಾರಿಗಳಿಗೆ ನಾವು ಕಳಿಸುತ್ತೇವೆ ಜಿಲ್ಲಾಧಿಕಾರಿಗಳ ಅನುಮೋದನೆ ನೀಡಿದ್ದಾರೆ ನಾವು ಆ ಪ್ರಕಾರ ಮಾಡಬೇಕಾಗುತ್ತದೆ ಎಂದು ಹೇಳಿದರು.
ಸಭೆಯಲ್ಲಿ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶಂಕರ ರಾಠೋಡ, ತಾಲೂಕ ಆರೋಗ್ಯ ಇಲಾಖೆ ಅಧಿಕಾರಿಗಳಾದ ಮಹಮ್ಮದ ಗಫರ್, ಮಲ್ಲಿಕಾರ್ಜುನ್ ಪಲಮೂರ್, ಸುರೇಶ್ ದೇಶಪಾಂಡೆ, ಮಂಜೂರ ಅಹಮದ್, ಭೀಮರೆಡ್ಡಿ, ಮತ್ತು ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ರಾಜಕೀಯ ಮುಖಂಡರು ಇದ್ದರು.