ಕಲ್ಯಾಣ ಕರ್ನಾಟಕ ಉತ್ಸವ ಆಚರಣೆ

ಸಿರವಾರ.ಸೆ.17- ಕ-ಕ ಭಾಗವು ಶೈಕ್ಷಣಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಅಭಿವೃದ್ದಿಯಾಗುವ ಮೂಲಕ ಹಿಂದುಳಿದವರು ಎಂಬ ಕೀಳರಿಮೆ ತೊಡೆದು ಹಾಕೋಣ ಎಂದು ಪ.ಪಂ ಮುಖ್ಯಾದಿಕಾರಿ ಕೆ.ಮುನಿಸ್ವಾಮಿ ಹೇಳಿದರು.
ಪಟ್ಟಣ ಪಂಚಾಯತಿಯಲ್ಲಿ ಇಂದು ಬೆಳಗ್ಗೆ ಕಲ್ಯಾಣ ಕರ್ನಾಟಕ ಉತ್ಸವ ಅಂಗವಾಗಿ ಸರ್ದಾರ ವಲ್ಲಾಬಾಯಿ ಪಟೇಲ್‌ರ ಭಾವಚಿತ್ರಕ್ಕೆ ಪೂಜೆಸಲ್ಲಿಸಿ ದ್ವಜಾರೋಹಣ ಮಾಡುವ ಮೂಲಕ ಕಲ್ಯಾಣ ಕರ್ನಾಟಕ ಉತ್ಸವವನ್ನು ಹಾಗೂ ವಿಶ್ವಕರ್ಮ ಜಯಂತಿಯನ್ನು ಆಚರಣೆ ಮಾಡಿ ಮಾತನಾಡಿ ಹಿಂದಿನ ಹೈ-ಕ ಪ್ರಧೇಶವು 1 ವರ್ಷ ಒಂದು ತಿಂಗಳು 2 ದಿನಗಳ ನಂತರ ಸ್ವಾತಂತ್ರಗೊಳುವಲ್ಲಿ ವಲ್ಲಾಬಾಯಿ ಪಟೇಲರ ಶ್ರಮ ಅಧಿಕವಾಗಿದೆ.
ಈ ಭಾಗದಲ್ಲಿ ಸ್ವಾತಂತ್ರ ಹೊಂದಲು ಶ್ರಮಿಸಿದ ಎಲ್ಲಾ ಮಹಾನಿಯರನ್ನು ನೆನೆಯೊಣ. ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಕೊಡಿಸುವ ಮೂಲಕ ಶೈಕ್ಷಣಿಕವಾಗಿ, ಸರ್ಕಾರಿ ಸೌಲಭ್ಯಗಳನ್ನು ಪಡೆಯುವ ಮೂಲಕ ಆರ್ಥಿಕವಾಗಿ, ಮಿಸಲಾತಿಯಿಂದ ರಾಜಕೀಯವಾಗಿ ಅಭಿವೃದ್ದಿಯಾಗಿ ಹಿಂದುಳಿದ ಪ್ರಧೇಶ ಎಂಬ ಹಣೆ ಪಟ್ಟಿಯನ್ನು ತೊಡೆದು ಹಾಕೊಣ ಎಂದರು.
ಪ.ಪಂ ಸದಸ್ಯರಾದ ಸಂದೀಪ್ ಪಾಟೀಲ್ ಹಾಗೂ ಕೃಷ್ಣ ನಾಯಕ, ಎಪಿಎಂಸಿ ನಾಮನಿರ್ಧೆಶಕ ಹೆಚ್.ಕೆ.ಅಮರೇಶ ಮಾತನಾಡಿ 72 ವರ್ಷಗಳ ಹಿಂದೆ ದೇಶ ಸ್ವಾತಂತ್ರ್ಯವಾಗಿ ಸಂಭ್ರಮಸುತ್ತಿದ್ದರೆ ನಮ್ಮ ಭಾಗದ 5 ಜಿಲ್ಲೆಗಳ ಜನರಿಗೆ ಮಾತ್ರ ಈ ಸಂಭ್ರಮ ಮಾತ್ರ ಇದ್ದಿಲ್ಲ, ಅಂದಿನ ಕೇಂದ್ರ ಗೃಹ ಮಂತ್ರಿ ಸರ್ಧಾರ ವಲ್ಲಾಬಾಯಿ ಪಟೇಲ್ ಅವರ ಜವಬ್ದಾರಿಯಿಂದಾಗಿ ಭಾರತ ಒಕ್ಕೂಟ ವ್ಯವಸ್ಥೆಗೆ ಹೈದ್ರಾಬಾದ್ ನಿಜಾಮರಿಂದ ನಮ್ಮ ಭಾಗವನ್ನು ಬಿಡುಗಡೆ ಗೊಳಿಸುವ ಮೂಲಕ 1 ವರ್ಷ 1 ತಿಂಗಳು 2 ದಿನಗಳ ನಂತರ ಹೈ-ಕ ಭಾಗ ಸ್ವಾತಂತ್ರ್ಯವಾಯಿತು. ಈ ಭಾಗದ ಸ್ವಾತಂತ್ರ್ಯಗೊಳಿಸಲು ಅನೇಕರ ಶ್ರಮ, ತ್ಯಾಗ, ಬಲಿದಾನವನ್ನು ಮಾಡಿದ್ದಾರೆ. ಇಂತಹ ಹಬ್ಬವು ಕೇವಲ ದ್ವಜಾರೋಹಣಕ್ಕೆ ಮಾತ್ರ ಸಿಮಿತ ಗೊಳಿಸಿಕೊಳಿಸಿರುವುದು ದುರಾದುಷ್ಟಕರವಾಗಿದೆ ಎಂದರು.
ಈ ಸಂದರ್ಭದಲ್ಲಿ ಸದಸ್ಯರಾದ ಇರ್ಪಾನ್, ಮುಖಂಡರಾದ ಮಲ್ಲಪ್ಪ,ಮಾರ್ಕಪ್ಪ, ಸಮುದಾಯ ಸಂಘಟನಾಧಿಕಾರಿ ಹಂಪಯ್ಯ ಲಕ್ಷ್ಮೀ ಸಿಬ್ಬಂದಿ ವರ್ಗ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.