ಕಲ್ಯಾಣ ಕರ್ನಾಟಕ ಉತ್ಸವ ಆಚರಣೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.17: ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಆವರಣದಲ್ಲಿ ಇಂದು ಕಲ್ಯಾಣ ಕರ್ನಾಟಕ ಉತ್ಸವವನ್ನು ಗಾಂಧಿಜಿ ಮತ್ತು ಸರದಾರ್ ವಲ್ಲಬಾಯಿ ಪಟೇಲ್ ಇವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ರಾಷ್ಟ್ರಧ್ವಜಾರೋಹಣ ಮಾಡುವುದರೊಂದಿಗೆ ಆಚರಿಸಲಾಯಿತು.
ಈವೇಳೆ,ಸಂಸ್ಥೆಯಅಧ್ಯಕ್ಷರಾದ ಸಿ.ಶ್ರೀನಿವಾಸರಾವ್,ಗೌರವಕಾರ್ಯದರ್ಶಿ ಗಳಾದ ಯಶ್‍ವಂತ್‍ರಾಜ್ ನಾಗಿರೆಡ್ಡಿ, ಹಿರಿಯ ಉಪಾಧ್ಯಕ್ಷರಾದ ಬಿ.ಮಹಾರುದ್ರಗೌಡ ಇನ್ನೋರ್ವ ಉಪಾಧ್ಯಕ್ಷರಗಳಾದ ಎ.ಮಂಜುನಾಥ್, ಕೆ.ಸಿ.ಸುರೇಶ ಬಾಬು, ಜಂಟಿ ಕಾರ್ಯದರ್ಶಿಗಳಾದ, ಎಸ್.ದೊಡ್ಡನಗೌಡ,ಉಪಸಮಿತಿಗಳ ಚೇರ್‍ಮನ್‍ಗಳು, ಕಾರ್ಯಕಾರಿ ಸಮಿತಿ ಸದಸ್ಯರು, ವಿಶೇಷ ಆಹ್ವಾನಿತರು ಮತ್ತು ವಿಶೇಷ ಸಮನ್ವಯ ಸಮಿತಿ ಸದಸ್ಯರು ಉಪಸ್ಥಿತರಿದ್ದರು.