ಕಲ್ಯಾಣ ಕರ್ನಾಟಕ ಉತ್ಸವ ಅಭಿವೃದ್ಧಿ ಉತ್ಸವಾಗಬೇಕು:- ದರೂರು ಶಾಂತನಗೌಡ


ಸಂಜೆವಾಣಿ ವಾರ್ತೆ
ಬಳ್ಳಾರಿ, ಸೆ.17:ನಗರದ ಪ್ರತಿಷ್ಠಿತ ವೀ.ವಿ.ಸಂಘದ ವೀರಶೈವ ಕಾಲೇಜಿನಲ್ಲಿಂದು ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂಧರ್ಭದಲ್ಲಿ ಧ್ವಜಾರೋಹಣ ಮಾಡಿ ಮಾತನಾಡಿದ ವೀ.ವಿ.ಸಂಘದ ಸಹ ಕಾರ್ಯದರ್ಶಿಗಳು ಮತ್ತು ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ದರೂರು ಶಾಂತನಗೌಡರು ರವರು ನೂರಾರು ವರ್ಷಗಳಿಂದ ಹೈದ್ರಾಬಾದ್ ನಿಜಾಮರ ಆಳ್ವಿಕೆಗೊಳಪಟ್ಟು  ನಮ್ಮ ಜನತೆ ಸಂಕಷ್ಟ ಅನುಭವಿಸುತ್ತಿದ್ದರು. ದೇಶಕ್ಕೆ ಸ್ವಾತಂತ್ರ್ಯ ದೊರೆತರೂ ಈ ಭಾಗದ ಜನತೆಗೆ ಅದನ್ನು ಸಂಭ್ರಮಿಸುವ ಆವಕಾಶ ದೊರೆಯದೆ ನಿಜಾಮನ ದಾಸ್ಯದಲ್ಲಿಯೇ ಇರುವಂತಾಗಿತ್ತು. ಅಂದಿನ ಸ್ವತಂತ್ರ ಭಾರತದ ಪ್ರಥಮ ಗೃಹ ಮಂತ್ರಿಗಳಾಗಿದ್ದ ಶ್ರೀ ಸರ್ದಾರ್ ವಲ್ಲಭಭಾಯಿ ಪಟೇಲ್‍ರವರು ಭಾರತೀಯ ಸೈನ್ಯದೊಂದಿಗೆ ಮುತ್ತಿಗೆ ಹಾಕಿ ನಿಜಾಮನ ಆಳ್ವಿಕೆಯಲ್ಲಿದ್ದ ಹೈದ್ರಾಬಾದ್ ಸಂಸ್ಥಾನವನ್ನು ಭಾರತ ಒಕ್ಕೂಟಕ್ಕೆ ಸೇರಿಸಿದ್ದು ನಮಗೆ ನಿಜಾರ್ಥದಲ್ಲಿ ಸ್ವಾತಂತ್ರ್ಯ ದೊರಕಲು ಕಾರಣವಾಯಿತು ಎಂದರು. ಅಲ್ಲದೆ ಇತ್ತೀಚೆಗೆ ಭಾರತ ಸರ್ಕಾರ ಕಲ್ಯಾಣ ಕರ್ನಾಟಕಕ್ಕೆ 371 (ಜೆ) ಸೌಲಭ್ಯವನ್ನು ಕಲ್ಪಿಸಿದ್ದು ಇದರ ಸೌಲಭ್ಯವನ್ನು ಪಡೆದು ಎಲ್ಲರೂ ಜೀವನದಲ್ಲಿ ಉನ್ನತಿಯನ್ನು ಹೊಂದಲು ಶ್ರಮಿಸಬೇಕು ಎಂದು ತಿಳಿಸಿದರು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಪದವಿ ಮತ್ತು ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿ ಸದಸ್ಯರುಗಳಾದ ಶಿವಾ ರಮೇಶ್, ಗಂಗಾವತಿ ವೀರೇಶ್, ಕರೇಗೌಡರು, .ಡಿ.ವಿಶ್ವನಾಥ, ಎಸ್.ವೆಂಕಟೇಶ ಗೌಡ, ಪಟ್ಟಣಶೆಟ್ಟಿ ಪಂಪಾಪತಿ ಮತ್ತು  ವೀರನಗೌಡ ಇವರು ಭಾಗವಹಿಸಿದ್ದರು.
ವೀರಶೈವ ಪದವಿ ಕಾಲೇಜಿನ ಪ್ರಭಾರಿ ಪ್ರಾಂಶುಪಾಲರಾದ ಡಾ ಡಿ.ನಾಗೇಶ್ ಶಾಸ್ರ್ತೀ ಮತ್ತು  ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ  ಪಿ.ಎಸ್.ಗೌತಮ್‍ರವರು ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂಧಿ, ಎನ್.ಸಿ.ಸಿ, ಎನ್.ಎಸ್.ಎಸ್ ಮತ್ತು ಮಹಾವಿದ್ಯಾಲಯದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶರಣಬಸವ ಬಿರಾದರ್ ಸ್ವಾಗತಿಸಿದರು, ಡಾ.ಕವಿತ ಸಂಗನಗೌಡ.ಎಂ ವಂದಿಸಿದರು. ಡಾ.ಜಿ.ಶ್ಯಾಮೂರ್ತಿ ರವರು ಕಾರ್ಯಕ್ರಮವನ್ನು ನಿರೂಪಿಸಿದರು.