
ಕಲಬುರಗಿ,ಫೆ.23:ಕಲ್ಯಾಣ ಕರ್ನಾಟಕ ಉತ್ಸವ-2023ರ ಅಂಗವಾಗಿ ಇದೇ ಫೆಬ್ರವರಿ 24 ರಿಂದ 26 ರವರೆಗೆ ಮೂರು ದಿನಗಳ ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿರುವ ಪ್ರಧಾನ ವೇದಿಕೆಯಲ್ಲಿ ವಿವಿಧ ಕಲಾವಿದರಿಂದ ಸಾಂಸ್ಕøತಿಕ, ಸುಗಮ ಸಂಗೀತ, ನೃತ್ಯರೂಪಕ, ಕನ್ನಡ ಮತ್ತು ಹಿಂದಿ ರಸಮಂಜರಿ ಹಾಗೂ ಸಂಗೀತ ವೈವಿಧ್ಯ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಫೆಬ್ರವರಿ 24ರಂದು: ಅಂದು ಮಧ್ಯಾಹ್ನ 3 ರಿಂದ ಸಂಜೆ 4 ಗಂಟೆಯವರೆಗೆ ಸ್ಥಳೀಯ ಕಲಾವದರಿಂದ ಸಾಂಸ್ಕøತಿಕ ಕಾರ್ಯಕ್ರಮ, ಸಂಜೆ 4 ರಿಂದ ಸಂಜೆ 4.30 ಗಂಟೆಯವರೆಗೆ ಕಲಬುರಗಿಯ ಮಾಲಾಶ್ರೀ ಕಣವಿ ಇವರಿಂದ ಸುಗಮ ಸಂಗೀತ ಕಾರ್ಯಕ್ರಮ, ಸಂಜೆ 5.30 ರಿಂದ ಸಂಜೆ 6 ಗಂಟೆಯವರೆಗೆ ಓರಿಸ್ಸಾ ಪ್ರಿನ್ಸ್ ಡಾನ್ಸ್ ಗ್ರೂಪ್‍ದಿಂದ ನೃತ್ಯ ರೂಪಕ, ಸಂಜೆ 6 ರಿಂದ ರಾತ್ರಿ 8 ಗಂಟೆಯವರೆಗೆ ಬೆಂಗಳೂರಿನ ವಿಜಯ ಪ್ರಕಾಶ ಮತ್ತು ತಂಡದಿಂದ ಕನ್ನಡ ರಸಮಂಜರಿ ಹಾಗೂ ರಾತ್ರಿ 8 ರಿಂದ ರಾತ್ರಿ 10 ಗಂಟೆಯವರೆಗೆ ಮುಂಬಯಿನ ಸಲೀಮ್ ಸುಲೇಮಾನ್ ಮತ್ತು ತಂಡದಿಂದ ಹಿಂದಿ ರಸಮಂಜರಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಫೆಬ್ರವರಿ 25 ರಂದು: ಅಂದು ಮಧ್ಯಾಹ್ನ 3 ರಿಂದ ಸಂಜೆ 4 ಗಂಟೆಯವರೆಗೆ ಸ್ಥಳೀಯ ಕಲಾವಿದರಿಂದ ಸಾಂಸ್ಕøತಿಕ ಕಾರ್ಯಕ್ರಮಗಳು, ಸಂಜೆ 4 ರಿಂದ ಸಂಜೆ 4.30 ಗಂಟೆಯವರೆಗೆ ಬೀದರ ವೀರ ಸಮರ್ಥ ಇವರಿಂದ ಕನ್ನಡ ರಸಮಂಜರಿ, ಸಂಜೆ 4.30 ರಿಂದ ಸಂಜೆ 5 ಗಂಟೆಯವರೆಗೆ ಬೆಂಗಳೂರಿನ ಆಕ್ಸೀಜನ್-2 ತಂಡದಿಂದ ನೃತ್ಯ ರೂಪಕ ಕಾರ್ಯಕ್ರಮ, ಸಂಜೆ 5 ರಿಂದ ಸಂಜೆ 7 ಗಂಟೆಯವರೆಗೆ ಬೆಂಗಳೂರಿನ ಅರ್ಜುನ್ ಜನ್ಯ ಮತ್ತು ತಂಡದಿಂದ ಸಂಗೀತ ವೈವಿಧ್ಯ ಹಾಗೂ ಸಂಜೆ 7 ರಿಂದ ರಾತ್ರಿ 9 ಗಂಟೆಯವರೆಗೆ ಮುಂಬಯಿನ ಶಾನ್ ಮತ್ತು ತಂಡದಿಂದ ಹಿಂದಿ ರಸಮಂಜರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಫೆಬ್ರವರಿ 26 ರಂದು: ಅಂದು ಮಧ್ಯಾಹ್ನ 3 ರಿಂದ ಸಂಜೆ 4 ಗಂಟೆಯವರೆಗೆ ಸ್ಥಳೀಯ ಕಲಾವಿದರಿಂದ ಸಾಂಸ್ಕøತಿಕ ಕಾರ್ಯಕ್ರಮ, ಸಂಜೆ 5 ರಿಂದ ಸಂಜೆ 5.30 ಗಂಟೆಯವರೆಗೆ ಕಲಬುರಗಿಯ ಸೀಮಾ ಪಾಟೀಲ ಮತ್ತು ವೃಂದದಿಂದ ಸುಗಮ ಸಂಗೀತ, ಸಂಜೆ 5.30 ರಿಂದ ಸಂಜೆ 6 ಗಂಟೆಯವರೆಗೆ ಮುಂಬಯಿ ಎಂ.ಜೆ.-5 ಡಾನ್ಸ್ ಇವರಿಂದ ನೃತ್ಯ ರೂಪಕ, ಸಂಜೆ 6 ರಿಂದ ರಾತ್ರಿ 8 ಗಂಟೆಯವರೆಗೆ ಬೆಂಗಳೂರಿನ ಅನನ್ಯ ಭಟ್ ಹಾಗೂ ತಂಡದವರಿಂದ ಸಂಗೀತ ವೈವಿಧ್ಯ ಕಾರ್ಯಕ್ರಮ, ರಾತ್ರಿ 8 ರಿಂದ 8.15 ಗಂಟೆಯವರೆಗೆ ಪ್ರಹ್ಲಾದ್ ಆಚಾರ್ಯ ಇವರಿಂದ ಶ್ಯಾಡೋ ಪ್ರದರ್ಶನ ಹಾಗೂ ರಾತ್ರಿ 8.15 ರಿಂದ ರಾತ್ರಿ 10 ಗಂಟೆಯವರೆಗೆ ಮುಂಬಯಿನ ಸೋನು ನಿಗಮ ಮತ್ತು ತಂಡದಿಂದ ಹಿಂದಿ ರಸಮಂಜರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು.
ಹೂ ಮತ್ತು ಹಣ್ಣುಗಳ ಪ್ರದರ್ಶನ, ಸಿರಿಧಾನ್ಯ ಮೇಳ, ಐತಿಹಾಸಿಕ/ ಪಾರಂಪರಿಕ ಮೇಳ, ಎಸ್.ಹೆಚ್.ಜಿ. ಪ್ರದರ್ಶನ ಮತ್ತು ಮಾರಾಟ, ಚಿತ್ರಕಲಾ ಶಿಬಿರ, ಶಿಲ್ಪಕಲಾ ಶಿಬಿರ, ಆಹಾರ ಮೇಳ, ಪುಸ್ತಕ ಮೇಳ, ಚಿಣ್ಣರ ಪ್ರದೇಶ, ಜಲ ಕ್ರೀಡೆ, ಹಾಟ್ ಏರ್ ಬಲೂನ್, ಗಾಳಿಪಟ ಉತ್ಸವ ಹಾಗೂ ಮತ್ಸ್ಯ ಮೇಳಗಳು ಕಲ್ಯಾಣ ಕರ್ನಾಟಕ ಉತ್ಸವದ ಮುಖ್ಯ ಆಕರ್ಷಣೀಯಗಳಾಗಿವೆ.