ಕಲ್ಯಾಣ ಕರ್ನಾಟಕ ಉತ್ಸವಕ್ಕೆ ತೆರಳುವ ವಾಹನಗಳಿಗೆ ಮಾರ್ಗ ನಿಗದಿ:ಸೂಕ್ತ ಪೊಲೀಸ್ ಬಂದೋಬಸ್ತ್

ಕಲಬುರಗಿ:ಫೆ.23: ಫೆ. 24ರಿಂದ ಮೂರು ದಿನಗಳ ಕಾಲ ನಡೆಯುವಕಲ್ಯಾಣಕರ್ನಾಟಕಉತ್ಸವದ ಹಿನ್ನೆಲೆಯಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್, ಸಂಚಾರ ಹಾಗೂ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಕಲಬುರಗಿ ನಗರ ಪೊಲೀಸ್ ಆಯುಕ್ತ ಚೇತನ್ ಆರ್. ಅವರು ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಾಲುಕ್ಯಗೇಟ್ ಮೂಲಕ ಆಗಮನ ಹಾಗೂ ರಾಷ್ಟ್ರಕೂಟಗೇಟ್ ಮೂಲಕ ನಿರ್ಗಮನಕ್ಕೆ ಅವಕಾಶ ನೀಡಲಾಗಿದೆ.
ಉತ್ಸವಕ್ಕೆ ಆಗಮಿಸುವ ಸಾರ್ವಜನಿಕರು ತಮ್ಮ ದ್ವಿಚಕ್ರ ಇತರೆ ವಾಹನಗಳನು ್ನಕುಸನೂರು ರಸ್ತೆ ಮಾರ್ಗವಾಗಿ ಗುಲ್ಬರ್ಗಾ ವಿಶ್ವವಿದ್ಯಾಲಯ ಪಕ್ಕದ ಪ್ರೆಸ್‍ಕ್ಲಬ್ ಪಕ್ಕದ ಖಾಲಿ ಜಾಗದಲ್ಲಿ ಪಾರ್ಕ್ ಮಾಡಬೇಕು ಎಂದು ತಿಳಿಸಿದರು.
ಕಲ್ಯಾಣ ಕರ್ನಾಟಕ ಉತ್ಸವದ ಕಾರ್ಯಕ್ರಮಕ್ಕೆ ಹೊರಗಡೆಯ ಜಿಲ್ಲೆಗಳಿಂದ ಹಾಗೂ ತಾಲ್ಲೂಕುಗಳಿಂದ ಬರುವಂತಹ ಕೆ.ಎಸ್.ಆರ್.ಟಿ.ಸಿ ಬಸ್ಸುಗಳು ನ್ಯೂ ಆರ್.ಟಿ.ಓ ಕ್ರಾಸ್ ಮುಖಾಂತರ ಕುಸನೂರ ರಸ್ತೆಯ ಪ್ರೆಸ್ ಕ್ಲಬ್ ಸುರಕ್ಷಾ ಆಸ್ಪತ್ರೆ ಮುಂದುಗಡೆ ಇರುವ ಬಯಲು ಪ್ರದೇಶದಲ್ಲಿ ಬಸ್‍ಗಳನ್ನು ಪಾಕಿರ್ಂಗ್ ಮಾಡುವುದು.
ಕಲಬುರಗಿ ನಗರದ ಸಾರ್ವಜನಿಕರು ತಮ್ಮ ತಮ್ಮ ದ್ವಿಚಕ್ರ ವಾಹನ ಮತ್ತು ನಾಲ್ಕು ಚಕ್ರ ವಾಹನಗಳನ್ನು ಹೊಸ ಆರ್.ಟಿ.ಓ ಕ್ರಾಸ್ ಮುಖಾಂತರ ಕುಸನೂರ ರಸ್ತೆ ಪ್ರೆಸ್ ಕ್ಲಬ್ ಹತ್ತಿರ ಸುರಕ್ಷಾ ಆಸ್ಪತ್ರೆ ಮುಂದುಗಡೆ ಇರುವ ಬಯಲು ಪ್ರದೇಶದಲ್ಲಿ ವಾಹನಗಳನ್ನು ಪಾಕಿರ್ಂಗ್ ಮಾಡುವುದು.
ನಗರದಿಂದ ಕಾರ್ಯಕ್ರಮಕ್ಕೆ ಬರುವ ಸಾರ್ವಜನಿಕರಿಗಾಗಿ ನಗರದ ಕೆ.ಎಸ್.ಆರ್.ಟಿ.ಸಿ ವತಿಯಿಂದ ಬಸ್ಸುಗಳ ವ್ಯವಸ್ಥೆ ಮಾಡಿದ್ದು, ಸದರಿ ಬಸ್ಸುಗಳು ಕಾರ್ಯಕ್ರಮದ ಹತ್ತಿರ ಹೋಗುವ ವ್ಯವಸ್ಥೆ ಇರುತ್ತದೆ.
ಅಂಬೇಡ್ಕರ್ ಭವನಕ್ಕೆ ಬರುವ ಸಾರ್ವಜನಿಕರು ವಿಶ್ವವಿದ್ಯಾಲಯದ 1 ನೇ ಚಾಲುಕ್ಯ ಗೇಟ್ ಮುಖಾಂತರ ಬಂದು ಮುಂದೆ ಬರುವ ಕಚ್ಚಾ ರಸ್ತೆಯ ಮುಖಾಂತರ ಬಲಕ್ಕೆ ತಿರುಗಿ ಅಂಬೇಡ್ಕರ್ ಭವನಕ್ಕೆ ಬರುವುದು, ಭವನದ ಪಕ್ಕದಲ್ಲಿರುವ ಖಾಲಿ ಸ್ಥಳದಲ್ಲಿ ವಾಹನಗಳ ಪಾಕಿರ್ಂಗ್ ಮಾಡುವುದು.
ಬಯಲು ರಂಗ ಮಂದಿರ, ವಿಶ್ವವಿದ್ಯಾಲಯ ಮೈದಾನ, ವಿಶ್ವವಿದ್ಯಾಲಯ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಬರುವ ಸಾರ್ವಜನಿಕರು ವಿಶ್ವವಿದ್ಯಾಲಯದ 1 ನೇ ಗೇಟ್ ಮುಖಾಂತರ ಬಂದು ಆಡಳಿತ ಭವನದ ವೃತ್ತದ ಎಡಕ್ಕೆ ತಿರುಗಿ ಬಯಲು ರಂಗ ಮಂದಿರ ಹತ್ತಿರ ಇರುವ ಖಾಲಿ ಸ್ಥಳದಲ್ಲಿ ವಾಹನ ಪಾಕಿರ್ಂಗ್ ಮಾಡುವುದು.
ಪ್ರತಿದಿನ ಸಾಯಂಕಾಲ 5 ಗಂಟೆಯಿಂದ ಕಾರ್ಯಕ್ರಮ ಮುಗಿಯುವವರೆಗೆ ಹೊಸ ಆರ್.ಟಿ.ಓ ಕ್ರಾಸ್‍ದಿಂದ ಕುಸನೂರ ವರೆಗೆ ಸಾರ್ವಜನಿಕರ ಸುಗಮ ಸಂಚಾರ ಹಿತದೃಷ್ಟಿಯಿಂದ ಸದರಿ ರಸ್ತೆಯನ್ನು ಏಕಮುಖ ರಸ್ತೆ (ಒನ್‍ವೇ) ಅಂತಾ ಪರಿಗಣಿಸಲಾಗಿದೆ. (ನ್ಯೂ ಆರ್.ಟಿ.ಓ ಕ್ರಾಸ್‍ದಿಂದ ಕುಸನೂರ ಕಡೆ ಹೋಗುವುದು ಮಾತ್ರ)
ಕುಸನೂರ ಮತ್ತು ಅದರಾಚೆ ಇರುವ ಗ್ರಾಮದ ಸಾರ್ವಜನಿಕರು ಸಾಯಂಕಾಲ 5 ಗಂಟೆಯಿಂದ ನಗರದ ಕಡೆ ಬರುವ ಸಾರ್ವಜನಿಕರು ಕುಸನೂರ ಹತ್ತಿರ ಇರುವ ಬುದ್ಧವಿಹಾರ ಗೇಟ್ ಮುಖಾಂತರ ಬಂದು ಅಶೋಕ ದ್ವಾರದ ಮುಖಾಂತರ ಸೇಡಂ ರಸ್ತೆಗೆ ಬರುವುದು.
ನಗರದ ಕೆ.ಎಸ್.ಆರ್.ಟಿ.ಸಿ ಬಸ್ಸುಗಳು ವಿಶ್ವವಿದ್ಯಾಲಯದ ಚಾಲುಕ್ಯ ಗೇಟ್ -1 ರ ಮುಖಾಂತರ ಬಂದು ಬಸವೇಶ್ವರ ವೃತ್ತದಿಂದ ಬಲಕ್ಕೆ ತಿರುಗಿ ಅಂಬೇಡ್ಕರ್ ವೃತ್ತದ ಹತ್ತಿರ ಬರುವ ಕೃμÁ್ಣ ಹಾಸ್ಟೇಲ್ ಎದರುಗಡೆ ಇರುವ ಖಾಲಿ ಜಾಗದಲ್ಲಿ ಪಾಕಿರ್ಂಗ್ ಮಾಡಿ, ಅಲ್ಲಿಂದ ಸಾರ್ವಜನಿಕರನ್ನು ಕರೆದುಕೊಂಡು ಹೋಗುವುದು.
ಪ್ರೆಸ್ ಕ್ಲಬ್ ಹತ್ತಿರ ಪಾಕಿರ್ಂಗ್ ಮಾಡಿದ ವಾಹನಗಳನ್ನು ಕಾರ್ಯಕ್ರಮ ಮುಗಿಸಿಕೊಂಡು ಕುಸನೂರ ಹತ್ತಿರ ಇರುವ ಬುದ್ಧವಿಹಾರ ಅಶೋಕ ದ್ವಾರದ ಮುಖಾಂತರ ಸೇಡಂ ರಸ್ತೆಗೆ ಹೋಗುವುದು ಎಂದು ಅವರು ತಿಳಿಸಿದರು.
ಐದು ಹಂತಗಳಲ್ಲಿ ಕಾನೂನು ಸುವವ್ಯಸ್ಥೆ ಮಾಡಲು ಡಿಸಿಪಿ ನೇತೃತ್ವದಲ್ಲಿ ಬಂದೋಬಸ್ತ್ ಮಾಡಲಾಗಿದೆ. ಕೆಲ ಸಿಬ್ಬಂದಿ ಮಫ್ತಿನಲ್ಲಿದ್ದು ಸರಗಳ್ಳತನ, ವಾಹನ ಕಳವು ಮುಂತಾದವುಗಳ ಮೇಲೆ ನಿಗಾವಹಿಸಲಿದ್ದಾರೆ. ಹೋಮ್ ಗಾರ್ಡ್‍ಗಳ ಸೇವೆಯನ್ನು ಕೂಡ ಬಳಸಿಕೊಳ್ಳಲಾಗುತ್ತಿದೆ ಎಂದರು.
700 ಕ್ಕೂ ಅಧಿಕ ಪೆÇಲೀಸ್ ಸಿಬ್ಬಂದಿ ಹಾಗೂ 250 ಹೋಮ್‍ಗಾರ್ಡ್‍ಗಳನ್ನು ನಿಯೋಜಿಸಲಾಗಿದೆ.ಜತೆಗೆಒಂದು ಪೆÇಲೀಸ್‍ಔಟ್ ಪೆÇೀಸ್ಟ್‍ಕೂಡ ಸ್ಥಾಪಿಸಲಾಗುತ್ತದೆಎಂದರು.
ಪತ್ರಿಕಾಗೋಷ್ಠೀಯಲ್ಲಿ ಡಿಸಿಪಿಗಳಾದ ಅಡ್ಡೂರು ಶ್ರೀನಿವಾಸಲು ಹಾಗೂ ಚಂದ್ರಪ್ಪ ಅವರು ಇದ್ದರು.