ಕಲ್ಯಾಣ ಕರ್ನಾಟಕ ಆರ್ಥಿಕವಾಗಿಯೂ ಸ್ವಾವಲಂಭನೆಯಾಗಬೇಕು=ಅಶೋಕ ಜೀರೆ

ಹೊಸಪೇಟೆ ಮಾ22: ಕಲ್ಯಾಣ ಕರ್ನಾಟಕದ ಪ್ರತಿಯೊಬ್ಬರು ಆರ್ಥಿಕ ಸ್ವಾವಲಂಭನೆಯಾಗಬೇಕು ಆಮೂಲಕ ಹೈದ್ರಾಬಾದ್ ಕರ್ನಾಟಕ ಹಿಂದುಳಿದ ಪ್ರದೇಶ ಎಂಬ ಹಣ್ಣೆಪಟ್ಟಿಯಿಂದ ಹೊರಬರಬೇಕು ಎಂಬ ಬಸವರಾಜ ಪಾಟೀಲ್ ಸೇಡಂ ಆಸೆಯಕ್ಕೆ ನಾವೆಲ್ಲಾ ಕೈಜೊಡಿಸಬೇಕಿದೆ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಶೋಕ ಜೀರೆ ಹೇಳಿದರು.
ಸ್ಥಳೀಯ ಜೆಪಿ ಭವನದಲ್ಲಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘ, ವಿಕಾಸ ಅಕಾಡೆಮಿ ಕಲಬುರಗಿ ಸ್ಥಳೀಯ ವಾಹಿನಿ ಸಂಸ್ಥೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಹೊಲಿಗೆ ಪರಿಣಿತರ ಹಾಗೂ ಪ್ರಗತಿ ಕೇಂದ್ರಗಳ ಪ್ರಮುಖರ ಎರಡುದಿನಗಳ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆ ಸ್ವಾವಲಂಭಿಯಾದರೆ ಸಮಾಜವೂ ಸ್ವಾವಲಂಭಿಯಾಗುತ್ತದೆ, ಈ ಹಿನ್ನೆಲೆಯಲ್ಲಿಯೆ ಮಹಿಳೆಯರಿಗೆ ಸ್ವಾವಲಂಬನೆಯ ತರಬೇತಿಗಳನ್ನು ನೀಡಲು ವಿಕಾಸ ಅಕಾಡೆಮಿ ಮುಂದಾಗಿದೆ, ಮಹಿಳೆಯರು ತರಬೇತಿಗಳನ್ನು ಪಡೆದು ಸ್ವಂತ ಉದ್ಯೋಮವನ್ನು ಆರಂಭಿಸಬಹುದು. ಕೌಶಲ್ಯಯುತ ತರಬೇತಿಯಿಂದ ಇಂದಿನ ಸ್ಪರ್ಧಾತ್ಮಕ ಕೆಲಸಗಳನ್ನು ಪಡೆಯಲು ಸಹಕಾರಿಯಾಗುತ್ತದೆ ಎಂದರು.
ಸಂಘದ ಆಡಳಿತ ಮಂಡಳಿಯ ಸದಸ್ಯ ಬಾಬುಲಾಲ್ ಜೈನ್ ಮಾತನಾಡಿ ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿ ಸಂಘ ಉತ್ಸುಕವಾಗಿದೆ, ಹೆಚ್ಚು ಹೆಚ್ಚು ಪ್ರಯೋಜನ ಪಡೆದಂತೆ ಸಂಘದ ಎಲ್ಲಾ ಯೋಜನೆಗಳನ್ನು ಈ ಭಾಗದಲ್ಲಿಯೂ ಅನುಷ್ಠಾನಕ್ಕೆ ತರಲು ಸಿದ್ಧ, ಒಟ್ಟಾರೆ ಕಲ್ಯಾಣ ಕರ್ನಾಟಕದ ಪ್ರತಿಯೊಬ್ಬರು ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಪ್ರಗತಿ ಕಾಣಬೇಕೇಂಬುದು ನಮ್ಮ ಕನಸು ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ವಾಹಿನಿ ಸಂಸ್ಥೆಯ ಅಧ್ಯಕ್ಷ ಶಿವಕುಮಾರ ತರಬೇತಿಯಲ್ಲಿ ಪ್ರತಿಯೊಬ್ಬರು ಸಕ್ರೀಯವಾಗಿ ಪಾಲ್ಗೊಳ್ಳಬೇಕು ಎಲ್ಲರ ಸಹಕಾರದಿಂದ ಮುಂದಿನ ದಿನಗಳಲ್ಲಿಯೂ ಉತ್ತಮ ತರಬೇತಿ ಆಯೋಜಿಸಲು ಅನುಕೂಲವಾಗಲಿದೆ ಎಂದರು.
ಸಂಸ್ಥೆಯ ಎರಡು ದಿನಗಳ ತರಬೇತಿಯಲ್ಲಿ ನೂರಾರು ಮಹಿಳೆಯರು ಹೊಲಿಗೆ ಪರಿಣಿತ ಹಾಗೂ ಪ್ರಗತಿ ಕೇಂದ್ರಗಳ ತರಬೇತಿ ಪಡೆಯಲು ಆಗಮಿಸಿದ್ದರು. ಸಂಸ್ಥೆಯ ಶಿವಕುಮಾರ ಕಟ್ಟಮನಿ ಕಾರ್ಯಕ್ರಮ ನಿರ್ವಹಿಸಿದ್ದರು.