
ಕಲಬುರಗಿ:ಸೆ. 07: ಕಲ್ಯಾಣ ಕರ್ನಾಟಕ ಉತ್ಸವ ಮತ್ತು 371 ಜೆ ಕಾಯಿದೆ ಜಾರಿಯಾಗಿ 10 ವರ್ಷ ತುಂಬುತ್ತಿರುವ ಹಿನ್ನಲೆಯಲ್ಲಿ ಈ ಭಾರಿ ಕಲ್ಯಾಣ ಕರ್ನಾಟಕ ಉತ್ಸವು 3 ದಿನಗಳ ಅರ್ಥಪೂರ್ಣ ಆಚರಿಸಲು ನಿರ್ಧರಿಸಲಾಗಿದೆ ಎಂದು ಶಿಕ್ಷಣ ಇಲಾಖೆ ಅಪರ ಆಯುಕ್ತ ಡಾ. ಆಕಾಶ ಎಸ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಗುರುವಾರದಂದು ರಂಗಾಯಣ ಆಡಳಿತ ಕಚೇರಿಯಲ್ಲಿ ಜರುಗಿದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ಕಲ್ಯಾಣ ಕರ್ನಾಟಕ ಉತ್ಸವು ಮೂರು ದಿನಗಳವರೆಗೆ ಆಚರಣೆ ಮಾಡುವ ಕುರಿತು 15,16, ಹಾಗೂ 17 ರಂದು ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ದಿನಾಚರಣೆ ಅದ್ದೂರಿಯಾಗಿ ಆಚರಿಸಲು ಅಧಿಕಾರಿಗಳಿಗೆ ಸೂಚಿಸಿದಲ್ಲದೇ ಇದೇ ಸೆಪ್ಟೆಂಬರ್ 16 ರಂದು ಚಿತ್ರ ಸಂತೆ ಕಾರ್ಯಕ್ರಮ ಬೆಳಿಗ್ಗೆ 8 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಆಯೋಜಿಸಲಾಗುವುದು ಎಂದರು.
ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಯ ಚಿತ್ರಕಲಾವಿದರನ್ನು ಗುರುತಿಸಲು ಅರ್ಜಿಗಳನ್ನು ಕರೆಯಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ರಂಗಾಯಣ ಆಡಳಿತಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಉಪಸಮಿತಿ ರಚಿಸಲಾಯಿತು. ಈ ಸಮಿತಿಯಲ್ಲಿ ಐದು ಸಂಸ್ಥೆಗಳ ಪ್ರತಿನಿಧಿಗಳ ಒಳಗೊಂಡಂತೆ ಸಮಿತಿ ರಚಿಸಲಾಯಿತು. ಕಲಬುರಗಿ ಜಿಲ್ಲೆಯೊಂದಿಗೆ ಉಳಿದ ಜಿಲ್ಲಾ ಕಲಾವಿದರು ಮತ್ತು ಈ ಉತ್ಸವಕ್ಕೆ ಆಹ್ವಾನಿಸಲು ಸಲಹೆ ನೀಡಿದರು. ಚಿತ್ರ ಸಂತೆ ನಡೆಯುವ ಸ್ಥಳ ಹತ್ತಿರ ಕಲಾವಿದರಿಂದ ಚಿತ್ರಬಿಡಿಸುವ ವ್ಯವಸ್ಥೆ ಮಾಡಲು ಕಲಾವಿದರು ಕೋರಿದರು.
ಈ ಸಂಬಂಧ ಸುತ್ತೋಲೆ ಹೊರಡಿಸಿರುವ ಅವರು ಚಿತ್ರಕಲೆ ಸ್ಪರ್ಧೆಗಳು ಕಲ್ಯಾಣ ಕರ್ನಾಟಕ ವೈಶಿಷ್ಠತೆ ಮತ್ತು ಪ್ರಬಂಧ ಸ್ಪರ್ಧೆಗಳು ಏರ್ಪಡಿಸಲು ಪ್ರಥಮ, ದ್ವಿತೀಯ, ತೃತೀಯ ಬಂದವರಿಗೆ ಪ್ರಶಸ್ತಿ ಪತ್ರಗಳನ್ನು ನೀಡಿ ಸನ್ಮಾನ ಮಾಡಲು ಅವರು ಚಿತ್ರಕಲಾವಿದರು ಸಭೆಯಲ್ಲಿ ತಿಳಿಸಿದರು
ಅವರು ಚಿತ್ರ ಸಂತೆ ಬದಲಾಗಿ ಚಿತ್ರೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲು ಸಭೆಯಲ್ಲಿ ಕಲಾವಿದರು ಸಲಹೆ ಸೂಚನೆಗಳನ್ನು ನೀಡಿದರು.ಮಳೆಗಾಲ ಆಗಿರುವುದರಿಂದ ಮಹಾನಗರ ಪಾಲಿಕೆ ಮುಂಭಾಗದಲ್ಲಿ ಅಥವಾ ಕನ್ನಡ ಭವನ ಸಭಾಂಗಣದಲ್ಲಿ ಚಿತ್ರೋತ್ಸವನ್ನು ಏರ್ಪಡಿಸಲು ತಮ್ಮ ತಮ್ಮ ಸಲಹೆ ಸೂಚನೆಗಳನ್ನು ನೀಡಿದ ಅಲ್ಲದೆ 10ಘಿ10 ಮಳಿಗೆಗಳನ್ನು ಸಿದ್ಧಪಡಿಸಿ ಅಚ್ಚುಕಟ್ಟಾಗಿ ಪ್ರದರ್ಶನ ಏರ್ಪಡಿಸಬೇಕೆಂದರು.
ಸಭೆಯಲ್ಲಿ ಪ್ರೋಬೇಷನರ್ ಐ.ಎ.ಎಸ್. ಅಧಿಕಾರಿ ಗಜಾನನ ಬಾಳೆ ರಂಗಾಯಣ ಆಡಾಳಿತಾಧಿಕಾರಿ ಜಗದೀಶ್ವರಿ ಅ ನಾಸಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ದತ್ತಪ್ಪ ಸಾಗನೂರ, ಹಿರಿಯ ಚಿತ್ರ ಕಲಾವಿದರು ಬಸವರಾಜ ಜಾನಿ, ಶರಣಬಸವೇಶ್ವರ ವಿಶ್ಯವಿದ್ಯಾಲಯ ಫೈನ್ ಆರ್ಟ ಮುಖ್ಯಸ್ಥರಾದ ಡಾ. ಎಸ್. ಎಂ. ನಿಲಾ. ಕಲಾವಿದರು ಮತ್ತು ಸಂಶೋಧಕರಾದ ರೆಹಮಾನ ಪಾಟೇಲ , ಮಂಜುಳಾ ಬಿ ಜಾನಿ ಅನೇಕ ಕಲಾವಿದರು ಭಾಗವಹಿಸಿದ್ದರು.