ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ: ಛಾಯಾಚಿತ್ರಗಳ ಪ್ರದರ್ಶನ

ಕಲಬುರಗಿ,ಸೆ.18: ನಗರದ ಕನ್ನಡ ಭವನದಲ್ಲಿ ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವದ ನಿಮಿತ್ಯ ನವ ಕಲ್ಯಾಣ ಕರ್ನಾಟಕ ವಿಡಿಯೋ ಮತ್ತು ಫೋಟೋಗ್ರಾಫರ್ ಅಸೋಶಿಯೇಶನ್ ಆಶ್ರಯದಲ್ಲಿ ಛಾಯಾಚಿತ್ರಗಳ ಪ್ರದರ್ಶನ-2023 ಜರುಗಿತು.
ಉದ್ಘಾಟನೆಯನ್ನು ರಾಜ್ಯ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ ಅವರು ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ನೆರವೇರಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಜಯಕುಮಾರ್ ಪಾಟೀಲ್ ತೇಗಲತಿಪ್ಪಿ, ಹೋರಾಟಗಾರ ಲಕ್ಷ್ಮಣ್ ದಸ್ತಿ ಅವರು ಉಪಸ್ಥಿತರಿದ್ದರು.
ನೇತೃತ್ವವನ್ನು ಅಸೋಶಿಯೇಶನ್ ಅಧ್ಯಕ್ಷ ಆನಂದ್ ನರೋಣಾ, ರಾಜು ಎಸ್.ಕೆ., ಅವರು ವಹಿಸಿದ್ದರು. ಇದೇ ಸಂದರ್ಭದಲ್ಲಿ ಹಿರಿಯ ಛಾಯಾಗ್ರಾಹಕ ತುಳಸಿದಾಸ್ ಮಹೇಂದ್ರಕರ್, ವಿಜಯಕುಮಾರ್ ಪುರಾಣಿಕಮಠ್, ಚನ್ನಬಸವರಾಜ್ ಸ್ವಾಮಿ ಅವರಿಗೆ ಸನ್ಮಾನಿಸಾಯಿತು. ಸಂಘದ ಪದಾಧಿಕಾರಿಗಳು, ಮಹೇಶ್ ನೆಲ್ಲೂರು, ಶಿವಶರಣ್ ಎಸ್. ಡೊಣ್ಣೂರಕರ್, ಶರಣಗೌಡ, ಸಿದ್ದಣ್ಣ, ಶಿವರಾಜ್ ಸ್ವಾಮಿ, ಸುರೇಶ್ ಕಟ್ಟಿಮನಿ, ಮಹೇಶ್, ಪ್ರವೀಣಕುಮಾರ್ ಪಾಟೀಲ್, ರಾಜಶೇಖರ್, ಖಾಜಾ ಪಟೇಲ್, ರಾಜಶೇಖರ್, ಹಿರಿಯ ಹೋರಾಟಗಾರರು ಪಾಲ್ಗೊಂಡಿದ್ದರು.