ಕಲ್ಯಾಣ ಕರ್ನಾಟಕ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಮುಖ್ಯವಾಗಿದೆ:ಕ್ಯಾತನಾಳ

ಸೈದಾಪುರ:ಸೆ.19:ಕಲ್ಯಾಣ ಕರ್ನಾಟಕ ಸಮಗ್ರ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಮುಖ್ಯವಾಗಿದೆ ಎಂದು ಜಿಲ್ಲಾ ವಿಕಾಸ ಅಕಾಡೆಮಿಯ ಸಂಚಾಲಕ, ಮಾಜಿ ಎಂಪಿಎಂಸಿ ಅಧ್ಯಕ್ಷ ಭೀಮಣ್ಣಗೌಡ ಕ್ಯಾತ್ನಾಳ ಅವರು ಅಭಿಪ್ರಾಯಪಟ್ಟರು.
ಪಟ್ಟಣದಲ್ಲಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕøತಿಕ ಸಂಘದ ವತಿಯಿಂದ, ಕಲ್ಯಾಣ ಕರ್ನಾಟಕ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಹಿಳೆ ಅಬಲೆಯಲ್ಲ ಸಬಲೆಯಾಗಿದ್ದಾಳೆ. ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿಯೂ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಮಹಿಳೆಯರನ್ನು ಪ್ರೋತ್ಸಾಹಿಸುವುದು ಮುಖ್ಯವಾಗಿದೆ. ಸಂಘದ ಅಧ್ಯಕ್ಷರು ಕಲ್ಯಾಣ ಕರ್ನಾಟಕದ ಕನಸುಗಾರರಾದ ಬಸವರಾಜ ಪಾಟೀಲ ಸೇಡಂ ಅವರ ಕಾರ್ಯ ನಮಗೆ ಸದಾ ಸ್ಪೂರ್ತಿಯಾಗಿದೆ. ಅವರ ಮಾರ್ಗದರ್ಶನ ಪ್ರತಿಯೊಬ್ಬರು ಪಡೆಯಬೇಕು ಮತ್ತು ಅರಿತುಕೊಳ್ಳಬೇಕು. ಅಂದಾಗ ನಾವು ಇನ್ನೊಬ್ಬರಿಗೆ ನೀಡುವವರಾಗುತ್ತೇವೆ ಎಂದು ಹೇಳಿದರು. ಇದಕ್ಕೂ ಮುಂಚೆ ಪ್ರಗತಿ ಮತ್ತು ಕೌಶಲ್ಯ ಕೇಂದ್ರದ ಮಕ್ಕಳು, ಮಹಿಳೆಯರಿಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಿಲಾಯಿತು.
ಈ ಸಂದರ್ಭದಲ್ಲಿ ಸಂಘದ ತಾಲ್ಲೂಕು ಸಂಚಾಲಕ ಭೀಮಣ್ಣ ಬಿ. ವಡವಟ್, ಸ್ವಾಮಿ ವಿವೇಕಾನಂದ ತರುಣ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಕಮಲ ಎಮ್ ಕುಲಕರ್ಣಿ, ಪ್ರಗತಿ ಕೇಂದ್ರದ ನಿರ್ವಾಹಕಿ ದೀಪ ಮಹೇಶ, ಆರತಿ ಎಸ್ ದೇಸಾಯಿ ಸೇರಿದಂತೆ ಇತರರಿದ್ದರು.
ವಿವಿಧಡೆ ಕ.ಕ. ಉತ್ಸವ ಆಚರಣೆ: ಸೈದಾಪುರ ವಲಯದ ಕೊಂಡಾಪುರ, ಬಾಡಿಯಾಲ, ಸಂಗವಾರ, ಬಾಲಛೇಡ್, ರಾಂಪೂರ.ಕೆ, ಹೆಗ್ಗಣಗೇರಾ, ಬೆಳಗುಂದಿ, ಆನೂರು.ಕೆ, ಭೀಮನಹಳ್ಳಿ, ಗೊಂದಡಗಿ ಆನೂರು.ಬಿ, ಶೆಟ್ಟಿಹಳ್ಳಿ ಸೇರಿದಂತೆ ಸಂಘದ ಒಟ್ಟು 28 ಪ್ರಗತಿ ಕೇಂದ್ರ , 5 ಕೌಶಲ್ಯ ಕೇಂದ್ರಗಳಲ್ಲಿ ಕಲ್ಯಾಣ ಕರ್ನಾಟಕ ಉತ್ಸವವನ್ನು ಆಚರಣೆ ಮಾಡಲಾಯಿತು.