ಕಲ್ಯಾಣ ಕರ್ನಾಟಕ ಅಭಿವೃದ್ಧಿಯ ಹರಿಕಾರ ಡಾ. ಮಲ್ಲಿಕಾರ್ಜುನ ಖರ್ಗೆ

ಅಫಜಲಪುರ:ಜು.22: ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸಿದ ಹಿರಿಯ ಮುತ್ಸದ್ದಿ ರಾಜಕಾರಣಿಯಾಗಿ ಎಐಸಿಸಿ ಅಧ್ಯಕ್ಷರಾದ ಡಾ.ಮಲ್ಲಿಕಾರ್ಜುನ ಖರ್ಗೆ ಅವರಿಗೆ ದೇವರು ಇನ್ನಷ್ಟು ಆಯುರಾರೋಗ್ಯ ನೀಡಿ ಕಾಪಾಡಲಿ ಎಂದು ಕಾಂಗ್ರೆಸ್ ಮುಖಂಡ ಡಾ. ಸಂಜೀವಕುಮಾರ ಪಾಟೀಲ್ ತಿಳಿಸಿದರು.
ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಡಾ.ಮಲ್ಲಿಕಾರ್ಜುನ ಖರ್ಗೆರವರ 81ನೇ ಹುಟ್ಟು ಹಬ್ಬದ ಅಂಗವಾಗಿ ಕೇಕ್ ಕತ್ತರಿಸುವ ಮೂಲಕ ಆಚರಣೆ ಮಾಡಿ ಮಾತನಾಡಿದ ಅವರು, ಖರ್ಗೆ ಸಾಹೇಬರು ಅಧಿಕಾರಕ್ಕೆ ಹಂಬಲಿಸದ ಮತ್ತು ಪಕ್ಷ ನಿಷ್ಠೆ ಬಿಡದ, ರಾಷ್ಟ್ರೀಯ ನಾಯಕರಾಗಿ ಬೆಳೆದ ಪ್ರಭುದ್ಧ ರಾಜಕಾರಣಿಯಾಗಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಧೃವತಾರೆಯಾಗಿ ಮಿಂಚಿದ ಕಲ್ಯಾಣ ಕರ್ನಾಟಕದ ಏಕೈಕ ನಾಯಕರಾಗಿದ್ದಾರೆ. ನಮ್ಮ ಭಾಗಕ್ಕೆ 371(ಜೆ) ವಿಶೇಷ ಕೊಡುಗೆ ನೀಡಿದ್ದಾರೆ. ಇಎ???ಸಿ, ಮೆಡಿಕಲ್ ಕಾಲೇಜ್, ದಂತ ವಿಜ್ಞಾನ ಮಹಾವಿದ್ಯಾಲಯ, ಪ್ಯಾರಾ ಮೆಡಿಕಲ್, ನಸಿರ್ಂಗ್ ಮತ್ತು ಫಾರ್ಮಸಿ ಕಾಲೇಜು, ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯ, ವಿಮಾನ ನಿಲ್ದಾಣ, ರೈಲ್ವೆ ಸಚಿವರಾಗಿದ್ದ ಸಂದರ್ಭದಲ್ಲಿ ಕರ್ನಾಟಕಕ್ಕೆ 22 ಹೊಸ ರೈಲುಗಳನ್ನು ಒದಗಿಸಿದ್ದಾರೆ. ಹೀಗೆ ಹತ್ತು ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ ಎಂದು ಬಣ್ಣಿಸಿದರು.
ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶರಣು ಕುಂಬಾರ ಮಾತನಾಡಿ, ಡಾ.ಮಲ್ಲಿಕಾರ್ಜುನ ಖರ್ಗೆಯವರು ಓರ್ವ ದಿಟ್ಟ, ಛಲಗಾರ ನಾಯಕರು. ಏನೇ ಆಗಲಿ ಅವರು ಹಿಡಿದ ಕೆಲಸವನ್ನು ಮಾಡದೇ ಬಿಡುವವರಲ್ಲ. ಕಲ್ಯಾಣ ಕರ್ನಾಟಕ ಭಾಗಕ್ಕೆ ಅನುಕೂಲ ಮಾಡಿಕೊಡಬೇಕೆಂದು ಗಟ್ಟಿಯಾಗಿ ನಿಂತುಕೊಂಡಿದ್ದರಿಂದಲೇ ಸಂವಿಧಾನ 371(ಜೆ) ತಿದ್ದುಪಡಿ ಆಯಿತು. ಇಂದಿಗೂ ಈ ಭಾಗದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ ಪೂಜಾರಿ, ಮಹಾದೇವಗೌಡ ಕರೂಟಿ, ಚಂದ್ರಶೇಖರ್ ಕರಜಗಿ, ರಾಜಶೇಖರ್ ಪಾಟೀಲ್,ಸಿದ್ದಣ್ಣಗೌಡ ಪಾಟೀಲ್, ಜ್ಞಾನೇಶ್ವರಿ ಪಾಟೀಲ್, ದುಂಡಪ್ಪ ಜಮಾದಾರ, ಮಲ್ಲಿಕಾರ್ಜುನ ಖರ್ಗೆ ಅತನೂರ, ಶಿವು ಪದಕಿ, ಕಂಟೆಪ್ಪ ಬಳೂರ್ಗಿ, ಮಹೇಶ ಆಲೇಗಾಂವ, ನಾಗಪ್ಪ ಆರೇಕರ, ಭಾಗಣ್ಣ ಕಟ್ಟಿಮನಿ, ಗುರುಶಾಂತ ಡಾಂಗೆ, ನಾಗರಾಜ ರಾಂಪೂರೆ, ಅಶೋಕ ದೊಡ್ಮನಿ, ಶಿವು ಸಿಂಗೆ, ಮಾಜೀದ್ ಪಟೇಲ್, ಮಹಾಲಿಂಗ ಅಂಗಡಿ, ತಿಪ್ಪಣ್ಣ ಗಾಡಿವಡ್ಡರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.