
ಮಾನ್ವಿ,ಮಾ.೦೬- ಕಲ್ಯಾಣ ಕರ್ನಾಟಕ ಪ್ರಾಥಮಿಕ ಹಾಗೂ ಪ್ರೌಢಶಾಲೆ ಅತಿಥಿ ಶಿಕ್ಷಕರ ಸಂಘಕ್ಕೆ ನೂತನ ಪದಾಧಿಕಾರಿಗಳನ್ನು ಅಧ್ಯಕ್ಷ ದುರಗಪ್ಪ ಅಮರಾವತಿ ನೇಮಕಗೊಳಿಸಿ ಆದೇಶ ಹೊರಡಿಸಿದರು.
ಇಂದು ಪಟ್ಟಣದ ಅಲ್ ಫುರ್ ಖಾನ್ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ನಡೆದ ಕಲ್ಯಾಣ ಕರ್ನಾಟಕ ಪ್ರಾಥಮಿಕ ಹಾಗೂ ಪ್ರೌಢಶಾಲೆ ಅತಿಥಿ ಶಿಕ್ಷಕರ ಸಂಘದ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ
ಸಂಘದ ಗೌರವಧ್ಯಕ್ಷರನ್ನಾಗಿ ಕೆ.ಭೀಮರಾಯ ಕಲ್ಲೂರು, ತಾಲೂಕ ಪ್ರಧಾನ ಕಾರ್ಯದರ್ಶಿಯಾಗಿ ನವೀನ್ ಕುಮಾರ, ಉಪಾಧ್ಯಕ್ಷರಾಗಿ ಗೋವಿಂದರಾಜ, ಶ್ವೇತಾ ಮಾನ್ವಿ, ದುರುಗಪ್ಪ ದೋತರಬಂಡಿ, ನಾಗರಾಜ ಬಾಗಲವಾಡ, ನಾಗರಾಜ ಪಾತಪೂರು, ಸಹ ಕಾರ್ಯದರ್ಶಿಯಾಗಿ ರಾಜು ಎಂ.ಸಿರವಾರ,ಮಂಜುನಾಥ ಹಣಗಿ, ಪಿ.ಶಾಂತಮೂರ್ತಿ, ಖಜಾಂಚಿಯಾಗಿ ಸವಿತಾ ಗಂಗಾಧರ ಮಠ,ಸಂಘಟನಾ ಕಾರ್ಯದರ್ಶಿಯಾಗಿ ಅನ್ನಪೂರ್ಣ ಚಾಗಬಾವಿ, ವಿಶ್ವನಾಥ ಕೊರವಿ, ರವಿಚಂದ್ರ ಇವರನ್ನು ಪದಾಧಿಕಾರಿಗಳಾಗಿ ನೇಮಕಗೊಳಿಸಿ ನಂತರ ಮಾತನಾಡಿದ ಅವರು, ರಾಜ್ಯಾದ್ಯಂತ ಕಾರ್ಯನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರ ನ್ಯಾಯಯುತ ಬೇಡಿಕೆಗಳಾದ ವೇತನ ಹೆಚ್ಚಳ, ಸೇವಾ ಭದ್ರತೆ, ಮಹಿಳಾ ಅತಿಥಿ ಶಿಕ್ಷಕರಗೆ ವೇತನ ಸಹಿತ ಹೆರಿಗೆ ರಜೆ ಸೇರಿದಂತೆ ಇತರೆ ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಡುವ ನಿಟ್ಟಿನಲ್ಲಿ ಸಂಘಟನಾತ್ಮಕವಾಗಿ ಕಾರ್ಯಪ್ರೌರುತ್ತರಾಗುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಸಂಘದ ಸದಸ್ಯರು ಸಲಹೆಗಾರರಾದ ರಾಜಶೇಖರ ಎಚ್, ಮೌಲಸಾಬ್ ದೋತರಬಂಡಿ, ಶ್ಯಾಮ, ಸುನೀಲ್ ಕವಿತಾಳ, ರಾಜು, ಭಾಗ್ಯಲಕ್ಷ್ಮೀ, ಶಶಿಕಲಾ, ತ್ರಿವೇಣಿ, ಕಾಶಿನಾಥ ಕಾತರಕಿ,ಮುರಳಿಮೋಹನ್, ರವೀಂದ್ರ, ಹುಸೇನಪ್ಪ, ಸಿದ್ದಮ್ಮ, ನಾಗಮ್ಮ,ಮಂಜುಳಾ, ಪಾರ್ವತಿ, ಪ್ರಾಣೇಶ ಸೇರಿದಂತೆ ಅನೇಕರಿದ್ದರು.