
ಕಲಬುರಗಿ,ಆ.23- ಉಚ್ಚ ನ್ಯಾಯಾಲಯವು ಕಲ್ಯಾಣ
ಕರ್ನಾಟಕದ ಸುತ್ತೋಲೆಯನ್ನು ಎತ್ತಿ ಹಿಡಿದಿರುವುದು ನ್ಯಾಯಕ್ಕೆ ಸಂದ ಗೌರವವಾಗಿದ್ದು, ನ್ಯಾಯಾಲಯದ ತೀರ್ಪನ್ನು ವಿಧಾನ ಪರಿಷತ ಸದಸ್ಯ ಶಶೀಲ ಜಿ.ನಮೋಶೀ ಅವರು ಸ್ವಾಗತಿಸಿದ್ದಾರೆ.
ಕೆಪಿಟಿಸಿಎಲ್‍ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿಗಾಗಿ ಕರೆಯಲಾಗಿತ್ತು ಅದರಲ್ಲಿ 371(ಜೆ) ಗೆ ಸಂಬಂಧಪಟ್ಟಂತೆ ದಿನಾಂಕ:01.02.2022ರ ಸುತ್ತೋಲೆಯ ಪ್ರಕಾರ ಆಯ್ಕೆ ಪಟ್ಟಿಯನ್ನು ತಯಾರಿಸಿ ಪ್ರ್ತಕಟಿಸಲಾಗಿತು ನಾನ್ ಎಚ್.ಕೆ ಅಭ್ಯರ್ಥಿಗಳು ಇದನ್ನು ಪ್ರಶ್ನಿಸಿ ನ್ಯಾಯಾಲದಲ್ಲಿ ದಾವೆಯನ್ನು ಹೂಡಿದರು.
ನ್ಯಾಯಾಲದಲ್ಲಿ ಮಾನ್ಯ ಎಎಜಿ ರವರು ಎಚ್‍ಕೆ 2013, 201, 2020. ರ ಆದೇಶಗಳನ್ನು ವಿವರಿಸಿದರು. ಈ ಆದೇಶಗಳಿಂದ ಎಚ್‍ಕೆ ಅಭ್ಯರ್ಥಿಗಳನ್ನು ಸ್ಥಳೀಯ ವೃಂದಕ್ಕೆ ಸೀಮಿತಗೊಳಿಸಿದರೆ ಮೂಲಭೂತ ಹಕ್ಕುಗಳಾದ ಆರ್ಟಿಕಲ್ 14.16.ಕ್ಕೆ ದಕ್ಕೆ ಬರುವುದಾಗಿ ತಿಳಿಸಿದರು ಕೊನೆಯದಾಗಿ 1.2.2023 ಆದೇಶದಿಂದ ಹಿಂದಿನ ಆದೇಶಗಳ ತಪ್ಪುಗಳನ್ನು ಸರಿಪಡಿಸುವ ಪ್ರಯತ್ನ ಮಾಡಲಾಗಿದೆ ಎಂದು ವಾದಿಸಿದರು.
ಅದರಂತೆ ರಿವೈಜ್ಡ್ ಲಿಸ್ಟ್ ಮತ್ತು ಫೈನಲ್ ಲಿಸ್ಟ್ ಬಿಡುಗಡೆ ಮಾಡಿದ್ದಾರೆ. ಅದರಿಂದ ಇಲ್ಲಿ ಲಿಸ್ಟನಲ್ಲಿ ಕೈಬಿಟ್ಟಿರುವ ಅಭ್ಯರ್ಥಿಗಳ ಪ್ರಶ್ನೆ ಬರುವುದಿಲ್ಲ ಬದಲಾಗಿ 1.2.2023 ರ ಆದೇಶದ ಸಿಂಧುತ್ವ ಪರಿಗಣಿಸಬೇಕು ಎಂದರು.
ಕೊನೆಯಲ್ಲಿ ರಿವೈಜ್ಡ್ ಲಿಸ್ಟ ಫೈನಲ್ ಲಿಸ್ಟ್ 2013 ಎಚ್.ಕೆ ಆದೇಶಕ್ಕೂ ಮೊದಲು ಎಚ್.ಕೆ ಅಭ್ಯಾರ್ಥಿಗಳು ಇಡೀ ಕರ್ನಾಟಕದಲ್ಲಿ ನೇಮಕಾತಿ ಆಗಬಹುದಿತ್ತು, ಆದರೆ ಈ ಆದೇಶ ಬಂದ ಮೇಲೆ ಕೆಲವು ಎಚ್.ಕೆ. ಜಿಲ್ಲೆಗಳಿಗೆ ಅಭ್ಯರ್ಥಿಗಳನ್ನು ಸೀಮಿತಗೊಳಿಸಿದರೆ ಅದು ಮೂಲಭೂತ ಹಕ್ಕಿನ 14.16. ರ ಉಲ್ಲಂಘನೆ ಮತ್ತು ಹೊಸ ಆದೇಶದಿಂದ ಅಭ್ಯರ್ಥಿಗಳನ್ನು ಸೀಮಿತಗೊಳಿಸಲು ಸಾದ್ಯವಾದರೆ ಹೊಸ ಆದೇಶದ ಪ್ರಶ್ನರ್ಥಕ ಆದ್ದರಿಂದ ಎರಡು ವೃಂದದಲ್ಲಿ ಅವಕಾಶ ಕಲ್ಪಿಸಲು ಕಾನೂನು ಮಾಡಲಾಗಿದೆ.
ಮಾನ್ಯ ಹೈಕೋರ್ಟ್ ದಿನಾಂಕ : 1/2/2023 ಕಲ್ಯಾಣ ಕರ್ನಾಟಕ ಸುತ್ತೋಲೆ ಯನ್ನು ಎತ್ತಿ ಹಿಡಿದ್ದು ಅರ್ಜಿದಾರಾರ ವಾದವನ್ನು ವಜಾಗೊಂಡಿರುತ್ತದೆ ಎಂದು ತಿಳಿದು ಬಂದಿದ್ದು ಘನ ನ್ಯಾಯಾಲಯದ ತೀರ್ಪಿನ್ನು ಎಂಎಲ್‍ಸಿ ಶಶೀಲ ನಮೋಶಿ ಅವರು ಸ್ವಾಗತಿಸಿದ್ದಾರೆ.