ಕಲ್ಯಾಣ ಕರ್ನಾಟಕದ ಸರಕಾರಿ ಪದವಿ ಕಾಲೇಜು ಅಧ್ಯಾಪಕರ ಬೇಡಿಕೆ ಈಡೇರಿಸಲು ಆಗ್ರಹಿಸಿ ಮನವಿ

ಕಲಬುರಗಿ,ನ.25: ಕರ್ನಾಟಕ ಸರಕಾರದ ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಲ್ಯಾಣ ಕರ್ನಾಟಕ ಪ್ರದೇಶದ ಅಧ್ಯಾಪಕರ ಶೈಕ್ಷಣಿಕಗಳನ್ನು ಈಡೇರಿಸಬೇಕೆಂದು ಹೈದ್ರಾಬಾದ ಕರ್ನಾಟಕ ಸರಕಾರಿ ಕಾಲೇಜು ಅಧ್ಯಾಪಕರ ಸಂಘವು ಆಯುಕ್ತರಲ್ಲಿ ಆಗ್ರಹಿಸುತ್ತದೆ.
ಈಗಾಗಲೇ ಇಲಾಖೆಯಲ್ಲಿ ಉನ್ನತ ಶಿಕ್ಷಣದ ಸುಧಾರಣೆಗೆ ಹಲವು ಕಾನೂನು ಕ್ರಮಗಳನ್ನು ಕೈಗೊಂಡಿರುವುದನ್ನು ಅಧ್ಯಾಪಕರ ಸಂಘವು ಸ್ವಾಗತಿಸುತ್ತದೆ. ಜೊತೆಗೆ ಅಧ್ಯಾಪಕರ ಬಹು ದಿನಗಳಿಂದ ನೆನೆಗುದಿಗೆ ಬಿದ್ದಿರುವ ಇನ್ನೂ ಕೆಲವು ಶೈಕ್ಷಣಿಕ ಮತ್ತು ಸೇವಾ ಸಮಸ್ಯೆಗಳನ್ನು ಬಗೆಹರಿಸಿ, ಉನ್ನತ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ಸೂಕ್ತ ಕ್ರಮ ಕೈಗೊಳ್ಳಲು ಸರಕಾರ ಮುಂದಾಗಬೇಕೆಂದು ಉನ್ನತ ಶಿಕ್ಷಣ ಇಲಾಖೆಯ ಆಯುಕ್ತರಲ್ಲಿ ಹೈದ್ರಾಬಾದ ಕರ್ನಾಟಕ ಸರಕಾರಿ ಕಾಲೇಜು ಅಧ್ಯಾಪಕರ ಸಂಘವು ಈ ಮೂಲಕ ಮನವಿ ಮಾಡುತ್ತದೆ .
ಅಧ್ಯಾಪಕರ ಪ್ರಮುಖ ಸೇವಾ ಮತ್ತು ಶೈಕ್ಷಣಿಕ ಬೇಡಿಕೆಗಳು:
ಪ್ರಸ್ತುತ ಶೈಕ್ಷಣಿಕ ವರ್ಷದ ಆರಂಭದಲ್ಲೇ ಅಧ್ಯಾಪಕರ ವರ್ಗಾವಣೆಗೆ ಕೌನ್ಸೆಲಿಂಗ್‍ನ್ನು ಕಲಬುರಗಿಯಲ್ಲೆ ನಡೆಸಬೇಕು.ಸಂವಿಧಾನದ 371(ಜೆ) ಕಲಂ ಅನ್ವಯ ಕಾಲೇಜು ಶಿಕ್ಷಣ ಇಲಾಖೆಯಲ್ಲಿ ‘ಸ್ಥಳೀಯ ವೃಂದ’ ರಚಿಸಬೇಕು.ಅಧ್ಯಾಪಕರುಗಳ ಕುಂದು-ಕೊರತೆಗಳನ್ನು ನಿವಾರಿಸಲು ಸಂವಿಧಾನದ‘371(ಜೆ) ಸೆಲ್’ನ್ನು ಕಲಬುರಗಿಯಲ್ಲಿ ಪ್ರಾರಂಭಿಸಬೇಕು.
ವರ್ಗಾವಣೆ ಪ್ರಕ್ರಿಯೆಯಲ್ಲಿ ಕಲ್ಯಾಣ ಕರ್ನಾಟಕವನ್ನು ಹೊರತುಪಡಿಸಿ(ಖಔಏ) ರಾಜ್ಯದ ಇನ್ನೂಳಿದ ಎಲ್ಲಾ ಜಿಲ್ಲೆಗಳಲ್ಲಿ ಶೇ.8ರಷ್ಟು ಮೀಸಲಾತಿ ಜಾರಿಗೊಳಿಸಬೇಕು.ಸೇವಾ ಹಿರಿತನದ ಆಧಾರದ ಮೇಲೆ ಅರ್ಹ ಸಹಾಯಕ ಅಧ್ಯಾಪಕರಿಗೆ ಸಹ ಪ್ರಾಧ್ಯಾಪಕ ಹಾಗೂ ಪ್ರಾಧ್ಯಾಪಕರ ಹುದ್ದೆಗಳಿಗೆ ಶೀಘ್ರವೇ ಮುಂಬಡ್ತಿ ನೀಡಬೇಕು.ಅಧ್ಯಾಪಕರ ವಿವಿಧ ಹಂತದ ಎಜಿಪಿಗಳನ್ನು ಶೀಘ್ರವೇ ಮಂಜೂರು ಮಾಡಬೇಕು.
ಅಧ್ಯಾಪಕರಿಗೆ ಎಜಿಪಿ ಮಂಜೂರು ಮಾಡುವಾಗ ಆರ್ಥಿಕ ಸೌಲಭ್ಯ ಹಾಗೂ ಸೇವಾ ಸೌಲಭ್ಯ ಒಂದೇ ಎಂದು ಪರಿಗಣಿಸಬಾರದು ಇದರಿಂದ ಅಧ್ಯಾಪಕರಿಗೆ ಅನ್ಯಾಯವಾಗುತ್ತದೆ.2003ನೇ ಬ್ಯಾಚಿನ ಅಧ್ಯಾಪಕರ ಫಟ್‍ಮೆಂಟ್ ಬೆನಿಪಿಟ್‍ನ್ನು ಕೊಡಿಸುವುದು.2006,2008 ಮತ್ತು 2017 ರಲ್ಲಿ ನೇಮಕಗೊಂಡ ಅಧ್ಯಾಪಕರ ಸೇವಾ ಸಮಸ್ಯೆಗಳನ್ನು ಪರಿಹರಿಸುವುದು.
2016ರ ನಂತರ ಪಿಎಚ್.ಡಿ ಪೂರೈಸಿದ ಅಧ್ಯಾಪಕರಿಗೆ ತಕ್ಷಣವೇ ವೇತನ ಬಡ್ತಿಯನ್ನು ನೀಡಬೇಕು.ಸಹಾಯಕ ಪ್ರಾಧ್ಯಾಪಕರುಗಳ ಸೇವಾ ಹಿರಿತನದ ಆಧಾರದ ಮೇಲೆ ಸಹ ಪ್ರಾಧ್ಯಾಪಕರಾಗಿ ವೃತ್ತಿ ಪದೋನ್ನತಿ ಪಡೆಯಲು ಪಿಎಚ್.ಡಿ ಕಡ್ಡಾಯಗೊಳಿಸಿರುವುದನ್ನು ಮುಂದಿನ ಮೂರು ವರ್ಷದವರೆಗೆ ವಿನಾಯ್ತಿ ನೀಡಬೇಕು.ಎನ್ ಪಿ ಎಸ್ ರದ್ದುಪಡಿಸಿ ಹಳೆ ಪಿಂಚಣಿ ಪದ್ದತಿಯನ್ನು ಮರು ಜಾರಿಗೊಳಿಸಬೇಕು.
ಈಗಾಗಲೇ ಸಂದರ್ಶನ ಪೂರೈಸಿದ ಸಹ ಪ್ರಾಧ್ಯಾಪಕರುಗಳಿಗೆ ಪ್ರಾಧ್ಯಾಪಕರ ಅಂತಿಮ ಪಟ್ಟಿಯನ್ನು ಪ್ರಕಟಿಸಬೇಕು.ಗ್ರಂಥಪಾಲಕರ,ದೈಹಿಕ ಹಾಗೂ ಸಾಂಸ್ಕøತಿ ನಿರ್ದೇಶಕರುಗಳ ಪದನಾಮದ ಪರಿವರ್ತನೆ ಮಾಡಬೇಕು.ಕಾಲೇಜುಗಳಲ್ಲಿ ಕಾಯಂ ಪ್ರಾಂಶುಪಾಲರನ್ನು ನೇಮಕ ಮಾಡಬೇಕು.ಅಧ್ಯಾಪಕರ ನಿವೃತ್ತಿ ವಯಸ್ಸನ್ನು ಯುಜಿಸಿ ಪ್ರಕಾರ 62ಕ್ಕೆ ಹೆಚ್ಚಿಸಲು ಇಲಾಖೆಯು ಕಾನೂನು ಕ್ರಮ ಕೈಗೊಳ್ಳುವುದು.
ಅಧ್ಯಾಪಕರ ಸಂಘದ ವಿಭಾಗೀಯ ಅಧ್ಯಕ್ಷರಾದ ಡಾ.ಶರಣಪ್ಪ ಸೈದಾಪೂರ ಅವರ ನೇತೃತ್ವದಲ್ಲಿ ನಿಯೋಗದ ಮೂಲಕ ಗುಲಬರ್ಗಾದ ಪ್ರಾದೇಶಿಕ ಕೇಂದ್ರದ ಜಂಟಿ ನಿರ್ದೇಶಕರಾದ ಶ್ರೀ ಸಂಜಯ ಕುಮಾರ ಪಟ್ಟಣಕರ್ ಅವರ ಮುಖಾಂತರ ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರು ಬೆಂಗಳೂರು ಅವರಿಗೆ ಇಂದು ಮನವಿ ಸಲ್ಲಿಸಲಾಯಿತು. ಸಂಘದ ಪದಾಧಿಕಾರಿಗಳಾದ ಡಾ.ಚಿನ್ನಾ ಆಶಪ್ಪ, ಡಾ.ಮಲ್ಲಿಕಾರ್ಜುನ ಶೆಟ್ಟಿ, ಡಾ.ಶರಣಪ್ಪ ಗುಂಡಗುರ್ತಿ ,ಪ್ರೊ.ಹರ್ಷವರ್ಧನರೆಡ್ಡಿ ಪಾಟೀಲ್, ಡಾ.ಬಲಭೀಮ ಸಾಂಗ್ಲಿ ಇತರರು ಉಪಸ್ಥಿತರಿದ್ದರು.