ಲಿಂಗಸುಗೂರು.ಏ.೨೮- ಕಲ್ಯಾಣ ಕರ್ನಾಟಕದ ಭಾಗದಲ್ಲಿ ಬಹುಸಂಖ್ಯಾತ ಸಮುದಾಯದ ಜನರಾದ ಎಡಗೈ ಸಮುದಾಯಕ್ಕೆ ಸೇರಿದ ನಾಯಕರಿಗೆ ಕಾಂಗ್ರೆಸ್ ಪಕ್ಷವು ಟಿಕೆಟ್ ನೀಡದೆ ದಲಿತ ಮಾದಿಗ ಸಮುದಾಯವನ್ನು ತುಳಿಯುತ್ತಾ ಬರುತ್ತಿರುವುದು ಖಂಡನಿಯವಾಗಿದೆ ಎಂದು ಜೆಡಿಎಸ್ ಕಾರ್ಯಾಧ್ಯಕ್ಷ ಮಾಜಿ ಸಚಿವ ಹನುಮಂತಪ್ಪ ಆಲ್ಕೋಡ ಇವರು ಇಂದು ಜೆಡಿಎಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸೋಲು ಖಚಿತ ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ಹರಿಹಾಯ್ದರು.
ಬಿಜೆಪಿ ಕಾಂಗ್ರೆಸ್ ಪಕ್ಷವು ಒಂದು ನಾಣ್ಯದ ಎರಡು ಮುಖಗಳು ಎರಡು ಪಕ್ಷಗಳು ದಲಿತರಿಗೆ ರಾಜಕೀಯ ಅಧಿಕಾರ ನಡೆಸಲು ಬಿಡುವುದಿಲ್ಲ. ಈ ಪಕ್ಷಗಳಲ್ಲಿರುವ ರಾಜಕಾರಣಿಗಳು ಬ್ರಿಟಿಷ್ ಆಡಳಿತ ನಡೆಸುವ ಮೂಲಕ ಅಂಧಕಾರದ ಅಧಿಕಾರ ಆಡಳಿತ ನಡೆಸುತ್ತಿದ್ದಾರೆ ಎಂದು ಬಿಜೆಪಿ ಕಾಂಗ್ರೆಸ್ ಪಕ್ಷದ ವಿರುದ್ಧ ಹನುಮಂತಪ್ಪ ಆಲ್ಕೋಡ ವಾಗ್ದಾಳಿ ನಡೆಸಿದರು.
ಲಿಂಗಸುಗೂರು ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್ ಬಿಜೆಪಿ ಅಭ್ಯರ್ಥಿಗಳು ದುಡ್ಡಿನ ಮೂಲಕ ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ ಇಬ್ಬರು ನಾಯಕರು ಕ್ಷೇತ್ರದ ಜನರಿಗೆ ಕುಡಿಯುವ ನೀರು ಕೊಡಲು ಆಗದೆ ಹೋದರು ಪರವಾಗಿಲ್ಲ ಆದರೆ ಇವರಿಬ್ಬರಿಗೆ ರಾಜಕೀಯ ಅಧಿಕಾರ ಹಿಡಿಯಲು ಹರಸಾಹಸ ಪಡುತ್ತಿದ್ದಾರೆ ಎಂದು ಹೇಳಿದರು.
ರಾಜ್ಯದಲ್ಲಿ ಮತ್ತೊಮ್ಮೆ ಜೆಡಿಎಸ್ ಪಕ್ಷವು ಸರ್ಕಾರ ರಚನೆ ಮಾಡುವುದು ಖಚಿತ ಕುಮಾರಸ್ವಾಮಿ ಇವರ ಸಾಧನೆ ಗಳು ಕ್ಷೇತ್ರದ ಜನರು ಮಾತನಾಡುತ್ತಿದ್ದಾರೆ ಎಂದರು ಇಗಾಗಿ ಲಿಂಗಸುಗೂರು ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿ ಸಿದ್ದು ವೈ ಬಂಡಿ ಗೆಲುವು ಖಚಿತ ಎಂದು ಹೇಳಿದರು.
ಮಾದಿಗರ ನಡೆ ಜೆಡಿಎಸ್ ಕಡೆ ಎಂದು ಮಾದಿಗ ಸಾಮಾಜದ ಯುವಕರಿಗೆ ಕರೆ ನೀಡಿದರು
ಕಾಂಗ್ರೆಸ್ ಪಕ್ಷವು ಈ ಕ್ಷೇತ್ರದಲ್ಲಿ ಮೂಲ ಅಸ್ಪುಶ್ಯರಿಗೆ ಎಡಗೈ ಸಮುದಾಯಕ್ಕೆ ಟಿಕೆಟ್ ನೀಡದೆ ಮಾಹ ದ್ರೋಹ ಬಗೆದು ಮೂಲ ಅಸ್ಪುಶ್ಯರನ್ನು ರಾಜಕೀಯವಾಗಿ ತುಳಿಯುತ್ತಾ, ಬರುತ್ತಿರುವುದು ನಿಜಕ್ಕೂ ದುರಂತವೇ ಸರಿ ಎಂಬುದು ಮಾರ್ಮಿಕವಾಗಿ ನುಡಿದರು.
ಲಿಂಗಸುಗೂರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸೋಲು ಖಚಿತ ಏಕೆಂದರೆ ಈ ತಾಲೂಕಿನಲ್ಲಿ ಇರುವ ಮಾದಿಗರ ಓಟು ಬಹುತೇಕ ಕಾಂಗ್ರೆಸ್ ಪಕ್ಷಕ್ಕೆ ಬಂಡಾಯದ ಬಾವುಟ ಹಾರಿಸುವ ಮುಖಾಂತರ ಜೆಡಿಎಸ್ ಪಕ್ಷದ ಅಭ್ಯರ್ಥಿ ಗೆಲುವಿಗಾಗಿ ಮಾದಿಗ ಸಮುದಾಯ ಜನರು ಓಟು ಹಾಕಬೇಕು ಎಂದರು.
ರುದ್ರಯ್ಯನವರ ಡೋಂಗಿ ರಾಜಕೀಯಕ್ಕೆ ಕ್ಷೇತ್ರದ ಜನರು ಯಾರು ಮರಳು ಆಗಬಾರದು ಚನ್ನಪಟ್ಟಣ ತಾಲ್ಲೂಕಿನ ರುದ್ರಯ್ಯ ಇವರಿಗೆ ಮಾದಿಗರ ಓಟು ಹಾಕಬಾರದು ಎಂದರು ಇವರಿಗೆ ರಾಜಕೀಯ ಗಂದ ಗಾಳಿ ಗೊತ್ತಿಲ್ಲದ ನಾಯಕನಿಗೆ ಎಡಗೈ ಜನರ ಸಭೆ ನಡೆಸಿ ಮಂಕುಬೂದಿ ಎರಚಿ ಸಾಚಾ ಎಂದು ಹೇಳಿಕೊಳ್ಳುವ ರುದ್ರಯ್ಯ ಇವರು ಅಧಿಕಾರಿ ರಾಜಕಾರಣ ಮಾಡುವ ನಾಯಕನಲ್ಲ ಎಂದು ಮಾಜಿ ಸಚಿವ ಹನುಮಂತಪ್ಪ ಆಲ್ಕೋಡ ರವರು ರುದ್ರಯ್ಯ ಇವರ ವಿರುದ್ಧ ಕುಟುಕಿದರು.
ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಮಹಾಂತೇಶ ಪಾಟೀಲ, ಅತ್ತನೂರ ಸಿದ್ದು ವೈ. ಬಂಡಿ, ಜೆಡಿಎಸ್ ತಾಲೂಕು ಅಧ್ಯಕ್ಷ ಬಸವರಾಜ ಮಾಕಾಪುರ, ಯುವ ಘಟಕದ ಅಧ್ಯಕ್ಷ ಇಮ್ತಿಯಾಜ್ ಪಾಶ, ಮುದಗಲ್ ಜೆಡಿಎಸ್ ಪಕ್ಷದ ಅಧ್ಯಕ್ಷರು, ಜೆಡಿಎಸ್ ಪಕ್ಷದ ಯುವ ನಾಯಕರಾದ ಇಬ್ರಾಹಿಂ ಗ್ಯಾರಂಟಿ, ದಾದಾ ಸಾಹೇಬ್ ಟೇಲರ್, ಯಲ್ಲಪ್ಪ ಗೊರೆಬಾಳ, ಜಂಬಣ್ಣ ದೊಡ್ಡಮನಿ, ಅಶೋಕ್ ಸೇರಿದಂತೆ ಇತರರು ಉಪಸ್ಥಿತರಿದ್ದರು.