ಕಲಬುರಗಿ: ಸೆ. 27: ಕಲ್ಯಾಣ ಕರ್ನಾಟಕದ ಪ್ರವಾಸೋದ್ಯಮ ಅಭಿವೃದ್ಧಿಗೆ ಈ ಭಾಗದ ಸಂಪನ್ಮೂಲ ವ್ಯಕ್ತಿಗಳ ಸದ್ಬಳಕೆ ಆಗಬೇಕು ಎಂದು ಹವ್ಯಾಸಿ ಪ್ರವಾಸಿಗರ ಮಾರ್ಗದರ್ಶಿ ಬಳಗದ ಗೌರವ ಕಾರ್ಯದರ್ಶಿ ಬಿ.ಎಂ. ರಾವೂರ್ ಅವರು ಒತ್ತಾಯಿಸಿದರು.
ಮಂಗಳವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವರ್ಷ ವಿಶ್ವ ಪ್ರವಾಸೋದ್ಯಮ ದಿನದಂದು ಪ್ರವಾಸೋದ್ಯಮ ಮತ್ತು ಹಸಿರು ಹೂಡಿಕೆಗಳು ಆಚರಣೆಯ್ನು ಜಿಲ್ಲೆಯ ಐತಿಹಾಸಿಕ ತಾಣಗಳು ಕಲ್ಲರಳಿ ಹೂವಾಗಿ… ಗುಲಬರ್ಗ ಹೂ ಸುವಾಸನೆ ಸವಿಯುವ ತಾಣಗಳನ್ನಾಗಿ ಮಾಡುತ್ತಿರುವುದು ಸ್ವಾಗತಾರ್ಹ ಎಂದರು.
ಕಲ್ಯಾಣ ಕರ್ನಾಟಕ ಪ್ರವಾಸೋದ್ಯಮ ಸಲಹಾ ಸಮಿತಿ ಸಭೆ ಕರೆಯಲಾಗಿದೆ. ಕಲಬುರ್ಗಿ, ಬೀದರ್, ಯಾದಗಿರಿ, ಕೊಪ್ಪಳ್, ರಾಯಚೂರು ಎಲ್ಲ ಜಿಲ್ಲಾ ಕೇಂದ್ರಗಳಲ್ಲಿನ ಸಮಿತಿಯಲ್ಲಿರುವ ಎಲ್ಲ ಸದಸ್ಯರು, ಹವ್ಯಾಸಿ ಮಾರ್ಗದರ್ಶಿ ಬಳಗದ ಪದಾಧಿಕಾರಿಗಳು, ಸ್ಥಳೀಯ ಐತಿಹಾಸಿಕ ಛಾಯಾಚಿತ್ರಗಾರರು, ಐತಿಹಾಸಿಕ ಸ್ಮಾರಕಗಳ ಲೇಖನ ಬರಹಗಾರರನ್ನು ಸಾಹಿತಿಗಳ, ಟೂರ್ಸ್ ಆಂಡ್ ಟ್ರಾವೆಲ್ಸ್, ಹೊಟೇಲ್, ಲಾಡ್ಜ್ ಮಾಲಿಕರು, ಪ್ರವಾಸಿ ಟ್ಯಾಕ್ಸಿ ಅಸೋಸಿಯೇಷನ್, ಆಸಕ್ತ ಸಂಘ ಸಂಸ್ಥೆಗಳ ಪದಾಧಿಕಾರಿಗಳೊಂದಗೆ ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಸಭೆ ಕರೆಯದೇ ಮಲತಾಯಿ ಧೋರಣೆ ಅನುಸರಿಸಿದ್ದಾರೆ ಎಂದು ಅವರು ದೂರಿದರು.
ಕಲ್ಯಾಣ ಕರ್ನಾಟಕ ವಿಭಾಗ ವ್ಯಾಪ್ತಿಯ ಐತಿಹಾಸಿಕ ಸ್ಮಾರಕಗಳು, ಧಾರ್ಮಿಕ ಆಧ್ಯಾತ್ಮಿಕ, ಶೈಕ್ಷಣಿಕ. ವನ್ಯಧಾಮ, ಆರೋಗ್ಯ ಕ್ಷೇತ್ರ, ಕೈಗಾರಿಕೆ, ಭೇಟಿ ನೀಡುವ ಪ್ರವಾಸಿಗರಿಗೆ ಕಲೆ, ಸಾಹಿತ್ಯ, ಸಾಂಸ್ಕøತಿಕ ಸ್ವದೇಶಿ-ವೀದೇಶಿ ಪ್ರವಾಸಿಗರಿಗೆ ಆಕರ್ಷಿಸುವ ನಿಟ್ಟಿನಲ್ಲಿ ಈ ಪ್ರವಾಸಿ ತಾಣಗಳಲ್ಲಿ ಮೂಲಭೂತ ತಾತ್ಕಾಲಿಕ ಸೌಲಭ್ಯ ಜೊತೆಗೆ ಪ್ರವಾಸಿ ತಾಣಗಳ ಪ್ರಚಾರ ಪ್ರಸಾರ ಹಾಗೂ ಮಾಹಿತಿ ಮಾರ್ಗದರ್ಶನ ಕೈಪಿಡಿ, ಇತರೆ ಸೇವ ಕಾರ್ಯಕ್ಕೆ ಅನಾನುಕೂಲತೆಗೆ ಸಂಬಂಧಿಸಿದ ಪ್ರವಾಸೋದ್ಯಮ ಇಲಾಖೆ ಹಾಗೂ ಪ್ರಾಚ್ಯವಸ್ತು ಇಲಾಖಾ ಅಧಿಕಾರಿಗಳ ಸಮನ್ವಯದ ಕೊರತೆ, ನಿರ್ಲಕ್ಷತನ ಹಾಗೂ ಜಾಣ ಮೌನವು ಖಂಡನೀಯ ಎಂದು ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ನಗರದಲ್ಲಿ ವಿಶ್ವ ಪ್ರಸಿದ್ದ ಬಹುಮನಿ ಕೋಟೆಯ ಜಾಮಾ ಮಸೀದಿ, ದಾಸೋಹಿ ಶರಣಬಸವೇಶ್ವರ್ ದೇವಸ್ಥಾನ, ಸೂಫಿಸಂತ್ ಖಾಜಾ ಬಂದೇನವಾಜ್, ಬುದ್ಧವಿಹಾರ, ಚರ್ಚ್, ಜೈನ್ ಮಂದಿರ, ಗುರುದ್ವಾರ, ಮಳಖೇಡದ ಕೋಟೆ, ತೀರ್ಥಂಕರು ಟೀಕಾಚಾರ್ಯರ ಮಠi, ಗಾಣಗಾಪೂರದ ದತ್ತಾತ್ರೇಯ್ ದೇವಸ್ಥಾನ, ನಾಗಾವಿ, ಸನ್ನತಿ, ಕಾಳಗಿ, ಮರತೂರಿನ ಮಿತಾಕ್ಷರ ಶಾಸನ, ಎತ್ತಿಪೋತಾ ನಿಸರ್ಗ ತಾಣ, ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸೇರ್ಪಡೆಗೆ ಯೂನೆಸ್ಕೊ ಸಮಿತಿಗೆ ಪ್ರಸ್ತಾವನೆ ಸಲ್ಲಿಸಲು ಮೀನಾಮೇಷ ಎನಿಸಲಾಗುತ್ತಿದೆ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಅಷ್ಟೆ ಅಲ್ಲ ಜನಪ್ರಿಯವಲ್ಲದ ಅವಕಾಶ ವಂಚಿತ ಸ್ಮಾರಕಗಳು ಪಾರಂಪರಿಕ ಪಟ್ಟಿಯಿಂದ ಕೈಬಿಟ್ಟಿರುವುದಕ್ಕೆ, ಸೂಫಿ ಸಂತ, ಶರಣರ ದಾಸರ ತೀರ್ಥಂಕರ ಮಹಾಪುರುಷರ ಕ್ಷೇತ್ರಗಳ ಬಗ್ಗೆ ತಾರತಮ್ಮ ಮಾಡುತ್ತದೆ. ಏಕೆ? ಈ ಸ್ಮಾರಕಗಳ ಬಗ್ಗೆ ಮಾಹಿತಿಯ ಕೊರತೆಯಿಂದಾಗಿ ಪ್ರವಾಸಿಗರಿಗೆ ಸಮಗ್ರ ಮಾಹಿತಿ ಸಿಗುತ್ತಿಲ್ಲ. ಮತ್ತು ಈ ಜಿಲ್ಲೆಯ ಸ್ಥಳಗಳ ಬಗ್ಗೆ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಪ್ರಾಚ್ಯವಸ್ತು ಇಲಾಖಾ ಅಧಿಕಾರಿಗಳ ಜಾಣ ಮೌನ, ಹಾಗೂ ಜಿಲ್ಲಾಡಳಿತ ಯಾವ ಸೂಕ್ತ ಕ್ರಮ ಕೈಗೊಳ್ಳದೆ ಕೇವಲ ಈ ದಿನ ಆಚರಣೆಗೆ ಮಾತ್ರ ಸಿಮಿತವಾಗಿದೆ ಎಂದು ಅವರು ಟೀಕಿಸಿದರು.
ವಿಶ್ವ ಪ್ರವಾಸೋದ್ಯಮ ದಿನವನ್ನು ಕೇವಲ ಆಚರಣೆಗೆ ಸೀಮಿತೆಗೊಳಿಸದೇ ಈ ಭಾಗದ ಇತಿಹಾಸ ಸಮಿತಿ ಹಾಗೂ ಜಿಲ್ಲಾ ಪ್ರವಾಸೋದ್ಯಮ ಸಮಿತಿಯು ಐತಿಹಾಸಿಕ ವಿಷಯಗಳ ಸಂಪನ್ಮೂಲ ವ್ಯಕ್ತಿಗಳು, ಸ್ಮಾರಕಗಳ ಹವ್ಯಾಸಿ ಛಾಯ ಚಿತ್ರಕಾರರು ಹಾಗೂ ಪೂರಕ ಸ್ವ-ಉದ್ಯೋಗಿಳ ಸಂಘ ಮತ್ತು ಸಂಸ್ಥೆ ಪದಾಧಿಕಾರಿಗಳ ಸಮಾಲೋಚನೆ ಸಭೆಗಳಿಗೆ ಆಹ್ವಾನ ನೀಡಬೇಕು ಎಂದು ಅವರು ಒತ್ತಾಯಿಸಿದರು.
ರಾಜ್ಯದ ಪ್ರವಾಸೋದ್ಯಮ ಸಚಿವರು ಜಿಲ್ಲೆಯ ಸ್ಮಾರಕಗಳಿಗೆ ಭೇಟಿ ನೀಡುವ ಮೂಲಕ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಬೇಕು. ಪ್ರಸ್ತುತ ಸರ್ಕಾರ ಮಹೀಳೆಯರಿಗೆ ಉಚಿತ ಬಸ್ ಪ್ರಯಾಣ ಮಾದರಿಯಂತೆ ಹವ್ಯಾಸಿ ಛಾಯ ಚಿತ್ರಗಾರರು, ಹವ್ಯಾಸಿ ಪ್ರವಾಸಿ ಲೇಖಕರು ಹಾಗೂ ಹವ್ಯಾಸಿ ಪ್ರವಾಸಿಗರು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ – ಪ್ರಶಿಕ್ಷಣಾರ್ಥಿಗಳಿಗೆ ಜೊತೆಗೂಡಿ, ಐತಿಹಾಸಿಕ ಪ್ರವಾಸಿ ತಾಣಗಳು, ಸ್ಮಾರಕಗಳು ನೋಡಲು ಮತ್ತು ನಿಸರ್ಗ ಸೌಂದರ್ಯ ಸವಿಯಲು ಪುನಃ ಏಳು ದಿನಗಳ ಸ್ವತಂತ್ರ ಟಿಕೆಟ್ ಬಸ್ ಪ್ರಯಾಣಕ್ಕೆ ಪುನಃ 2007ರಲ್ಲಿನ ಯೋಜನೆಯನ್ನು ಆರಂಭಿಸಿ ಕರ್ನಾಟಕ ರಾಜ್ಯದ ವ್ಯಾಪ್ತಿಯೊಳಗೆ ಅವಕಾಶ ನೀಡಬೇಕೆಂದು ಅವರು ಆಗ್ರಹಿಸಿದರು.
2010ರಲ್ಲಿನ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಪ್ರವಾಸೋದ್ಯಮ ಅಭಿವೃದಿಗೆ ಸಭೆ ಸೇರಿ, ಸಭೆಯ ನಡುವಳಿ ಜಾರಿಗೆ ತರಲಿಲ್ಲ. 2020-2025ರ ಪ್ರವಾಸೋದ್ಯಮ ನೀತಿ ಜಾರಿಗೆ ಬರಲಿಲ್ಲ. ಪ್ರವಾಸೋದ್ಯಮ ಸಲಹಾ ಸಮಿತಿ ಸಭೆಗೆ ಕರೆಯಲಿಲ್ಲ ಎಂದು ಆರೋಪಿಸಿದ ಅವರು, ಈ ಎಲ್ಲ ಕಾಋಣಗಳಿಂದಾಗಿ ಈ ಭಾಗದ ಐತಿಹಾಸಿಕ ಸ್ಮಾರಕಗಳ ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಈ ಭಾಗದ ಸ್ಮಾರಕಗಳ ಮಾಹಿತಿ ಮಾರ್ಗದರ್ಶನ ನೀಡಲು ಹೆಲ್ಫ ಡೆಸ್ಕ ಸ್ಥಾಪಿಸುವಂತೆ, ಪ್ರವಾಸಿ ಸ್ಥಳಗಳಲ್ಲಿ ಪೂರ್ಣ ಮಾಹಿತುಯುಳ್ಳ ನಾಮ ಫಲಕ ಹಾಕುವಂತೆ, ಪ್ರವಾಸಿಗರ ವ್ಯವಸ್ಥೆಗಾಗಿ ಯಾತ್ರಿಕ ನಿವಾಸ ಕೇಂದ್ರಗಳಲ್ಲಿ ರಿಯಾಯತಿ ದರದಲ್ಲಿ ಕೊಠಡಿ ಕಲ್ಪಿಸುವಂತೆ, ನಗರದ ರೈಲು ನಿಲ್ದಾಣ ಹತ್ತಿರ ಐ.ಬಿ ಅತಿಥಿಗೃಹಗಳ ಆವರಣದಲ್ಲಿ ಪ್ರವಾಸಿಗರಿಗೆ ಡಾರಮೆಟರಿ ತಾತ್ಕಾಲಿಕ ವಸತಿಗಾಗಿ ಕಟ್ಟಡ ನಿರ್ಮಾಣ ಮಾಡುವಂತೆ, ನಗರದ ದರ್ಶನಕ್ಕೆ ಆಗಮಿಸುವ ಬಸ್ಸು,ಕಾರು, ಪ್ರವಾಸಿಗರಿಗೆ ಓಡಾಡಲು ಸಂಚಾರ ನಿಯಂತ್ರಣ ನಿರ್ಬಂದವಿದೆ ಅದನ್ನು ಸರಳಿಕರಣಗೊಳಿಸುವಂತೆ ಅವರು ಒತ್ತಾಯಿಸಿದರು.
ಹಂಪಿ ಉತ್ಸವ ದಸರಾ ಉತ್ಸವ ಮಾದರಿಯಂತೆ ಕಲ್ಯಾಣ ಕರ್ನಾಟಕ ಚಾಲುಕ್ಯರ- ಕಲಬುರ್ಗಿ ಬಹುಮನಿ-ಮಾನ್ಯಖೇಟ್ ಉತ್ಸವ ಆರಂಭಿಸುವಂತೆ, ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಉಪನ್ಯಾಸ ಮಾಲೆ-ಪ್ರವಾಸಿ ಮಾಹಿತಿ ಮಾರ್ಗದರ್ಶನ ಜಾಗೃತಿ ಮೂಡಿಸುವಂತೆ ಅವರು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಗೌರವಾಧ್ಯಕ್ಷ ನಾರಾಯಣ್ ಎಂ. ಜೋಶಿ ಅವರು ಉಪಸ್ಥಿತರಿದ್ದರು.