ಕಲ್ಯಾಣ ಕರ್ನಾಟಕದ ಪ್ರಣಾಳಿಕೆ ಅಭಿಯಾನಕ್ಕೆ ಗುತ್ತೇದಾರ್ ಭರವಸೆ

ಕಲಬುರಗಿ,ಮಾ.31: ಕಲ್ಯಾಣ ಕರ್ನಾಟಕ ಪ್ರದೇಶದ ಸರ್ವಾಂಗೀಣ ರಚನ್ಮಾಕ ಪ್ರಗತಿಗಾಗಿ ಮತ್ತು ಸಂವಿಧಾನದ 371(ಜೇ) ಕಲಂ ತಿದ್ದುಪಡಿಯ ಪರಿಣಾಮಕಾರಿ ಅನುಷ್ಠಾನಕ್ಕೆ ರಾಷ್ಠ್ರೀಯ ಪಕ್ಷಗಳು ಮತ್ತು ಪ್ರಾದೇಶಿಕ ಪಕ್ಷಗಳು ಬರುವ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ತಮ್ಮ ತಮ್ಮ ಪ್ರಣಾಳಿಕೆಯಲ್ಲಿ ಸೇರಿಸಲು ಒತ್ತಾಯಿಸಿ ಕಲ್ಯಾಣ ಕರ್ನಾಟಕ ಜನಪರ ಸಂಘರ್ಷ ಸಮಿತಿಯ ವತಿಯಿಂದ ಹಮ್ಮಿಕೊಂಡ ಕಲ್ಯಾಣದ ಕಲ್ಯಾಣಕ್ಕೆ ರಾಜಕೀಯ ಪಕ್ಷಗಳ ಕಡೆ ನಡೆ ಅಭಿಯಾನದಂತೆ ಶುಕ್ರವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್ ಪಕ್ಷದ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಜಗದೇವ್ ಗುತ್ತೇದಾರ್ ಅವರು ಕಾಂಗ್ರೆಸ್ ಪಕ್ಷ ಕಲ್ಯಾಣ ಕರ್ನಾಟಕದ ಅಭಿವೃದಿಗೆ ರಾಜಕೀಯ ಇಚ್ಛಾಶಕ್ತಿ ಮತ್ತು ಬದ್ದತೆ ಪ್ರದರ್ಶಿಸುವುದಾಗಿ ಸಮಿತಿಯ ಮುಂಖಡರಿಗೆ ಭರವಸೆ ನೀಡಿದರು.
ಸಮಿತಿಯ ಅಧ್ಯಕ್ಷ ಲಕ್ಷ್ಮಣ್ ದಸ್ತಿ ಅವರ ನೇತೃತ್ವದಲ್ಲಿ ಹಮ್ಮಿಕೊಂಡ ಅಭಿಯಾನದಂತೆ ಕಾಂಗ್ರೆಸ್ ಪಕ್ಷದ ಜಿಲ್ಲಾ ಕಚೇರಿಗೆ ಭೇಟಿ ನೀಡಿ ಕಲ್ಯಾಣ ಕರ್ನಾಟಕದ ಮತ್ತು ಜಿಲ್ಲೆ ಸೇರಿದಂತೆ ಮಹಾನಗರದ ರಚನ್ಮಾಕ ಪ್ರಗತಿಗೆ ಸಂಬಂದಿಸಿದ 31 ಅಂಶಗಳ ಪ್ರಸ್ಥಾವನೆಯನ್ನು ಕಾಂಗ್ರೇಸ್ ಪಕ್ಷದ ಪ್ರಣಾಳಿಕೆಯಲ್ಲಿ ಸೇರಿಸಲು ಸಮಿತಿಯ ನಿಯೋಗ ಜಿಲ್ಲಾ ಅಧ್ಯಕ್ಷ ಜಗದೇವ್ ಗುತ್ತೇದರ್ ಅವರಿಗೆ ಪ್ರಸ್ಥಾವನೆ ಸಲ್ಲಿಸಿದರು.
ಅದಕ್ಕೆ ಪ್ರತಿಕ್ರಿಯಿಸಿದ ಗುತ್ತೇದಾರ್ ಅವರು, ಸಮಿತಿಯ ಮುಖಂಡರೊದಿಗೆ ವಿವರವಾಗಿ ಚರ್ಚಿಸಿ ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಸಮಿತಿ ಸಲ್ಲಿಸಿದ ಕಲ್ಯಾಣ ಕರ್ನಾಟಕದ ಅಬಿವೃಧಿಯ ವಿಷಯಗಳು ಸೇರಿಸುವುದಲ್ಲದೇ ಅವುಗಳ ಅನುಷ್ಠಾನಕ್ಕೆ ಕ್ರಮ ಕೈಗೊಳಲ್ಲು ತಮ್ಮ ಪಕ್ಷ ಬದ್ದವಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸಮಿತಿಯ ಮುಖಂಡರಾದ ಮನೀಷ ಜಾಜು, ಲಿಂಗರಾಜ ಸಿರಗಾಪೂರ, ಡಾ.ಮಾಜಿದದಾಗಿ, ಜ್ಞಾನಮಿತ್ರ ಸಾಮವೆಲ್, ಅಬ್ದುಲ್‍ರಹಿಮ, ಶ್ರೀಕಾಂತ, ಅಸ್ಲಂ ಚೌಂಗೆ, ಸಾಬೀರ ಅಲಿ, ಮೆಹೆತಾಬ ಖಾನ್, ಮಹೆಬೂಬ ಅಲಿ, ಶಾಂತಪ್ಪ ಕಾರಭಾಸಗಿ, ಮಲ್ಲಿನಾಥ್ ಸಂಗಶೆಟ್ಟಿ, ಬಾಬುರಾವ್ ಗಂವಾರ್ ಮುಂತಾದವರು ಉಪಸ್ಥಿತರಿದ್ದರು.