ಕಲ್ಯಾಣ ಕರ್ನಾಟಕದ ಪ್ರಗತಿಗೆ ಕೃತಿ ಸಂಕೇತ: ಪ್ರೊ. ಅಗಸರ್

ಕಲಬುರಗಿ:ಮಾ.18: ಕಲ್ಯಾಣ ಕರ್ನಾಟಕದ ಅಭಿವೃದ್ಧಿಯ ಕನಸುಗಳನ್ನು ಹೊತ್ತು ಅನೇಕ ಪ್ರಗತಿಪರ ಕಾರ್ಯಗಳು ಮೌನವಾಗಿ ನಡೆಯುತ್ತಿದ್ದು ಇದರ ಭಾಗವಾಗಿ ಆಕಾಶವಾಣಿಯು “ಸ್ವಾತಂತ್ರ್ಯದ ಹೋರಾಟದ ಅಮೃತ ಹೆಜ್ಜೆಗಳು” ಕೃತಿ ಲೋಕಾರ್ಪಣೆ ಮಾಡಿರುವುದು ಕೂಡ ಪ್ರಗತಿಯ ಸಂಕೇತ ಎಂದು ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಪತಿ ಪ್ರೊ ದಯಾನಂದ ಅಗಸರ ಅವರು ಹೇಳಿದರು.
ಕಲ್ಬುರ್ಗಿ ಆಕಾಶವಾಣಿಯಲ್ಲಿ ಮಾರ್ಚ್ 18 ರಂದು ಆಕಾಶವಾಣಿಯು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ನೇರ ಪ್ರಸಾರದಲ್ಲಿ ಬಿತ್ತರಿಸಿದ ಸ್ವಾತಂತ್ರ ಹೋರಾಟದ ಅಮೃತ ಹೆಜ್ಜೆಗಳು ಸರಣಿಯ 22 ಉಪನ್ಯಾಸಗಳನ್ನು ಒಳಗೊಂಡ ‘ಸ್ವಾತಂತ್ರ್ಯ ಹೋರಾಟದ ಅಮೃತ ಹೆಜ್ಜೆಗಳು’ ಕೃತಿಯನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡುತ್ತಿದ್ದರು. ಕಲ್ಯಾಣ ಕರ್ನಾಟಕ ಭಾಗ ಕೀಳರಿಮೆಯನ್ನು ಬಿಟ್ಟು ಅಭಿವೃದ್ಧಿಯ ಕಡೆಗೆ ಹೆಜ್ಜೆ ಇಡಬೇಕು ಎಂಬ ಚಿಂತನೆಯನ್ನು ಸಾಕಾರಗೊಳಿಸಲು ಇಲ್ಲಿ ಇತಿಹಾಸಕಾರರು, ಚಿಂತನಾಕಾರರು, ಪ್ರಗತಿಶೀಲರು ಮಾಡಿದ ಪ್ರಯತ್ನದ ಭಾಗವಾಗಿ ಇಂದು ಸಾಕಷ್ಟು ಕ್ಷೇತ್ರಗಳಲ್ಲಿ ಅಭಿವೃದ್ಧಿಯನ್ನು ಕಂಡುಕೊಳ್ಳಲಾಗುತ್ತಿದೆ. ಶಿಕ್ಷಣ ಕೃಷಿ ಸಾಹಿತ್ಯ ಸಂಸ್ಕøತಿ ಹೀಗೆ ನಾನಾ ಕ್ಷೇತ್ರಗಳಲ್ಲಿ ಬೆಳವಣಿಗೆ ಸಾಧಿಸಲಾಗುತ್ತಿದ್ದು ಇದೀಗ ಈ ಕೃತಿಯ ಮೂಲಕ ಮತ್ತೊಮ್ಮೆ ಇತಿಹಾಸದ ಪುಟಗಳನ್ನು ದಾಖಲಿಸುವುದರೊಂದಿಗೆ ಈ ಭಾಗದ ದೇಶಪ್ರೇಮ, ಅಭಿವೃದ್ಧಿಯ ಚಿಂತನೆ ದಾಖಲುಗೊಂಡಿದೆ. ಆಕಾಶವಾಣಿಯ ಮೌಲಿಕವಾದ ಕೆಲಸ ಇದಾಗಿದ್ದು ಇದಕ್ಕೆ ಡಾ. ಬಸವರಾಜ ಪಾಟೀಲ್ ಸೇಡಂ ಅವರು ಕೈ ಜೋಡಿಸಿರುವುದು ನಮ್ಮ ಭಾಗಕ್ಕೆ ನೀಡಿದ ದೊಡ್ಡ ಕೊಡುಗೆ ಎಂದು ಹೇಳಿದರು. ಅಭಿವೃದ್ಧಿಯ ಕುರಿತಾಗಿ ಮಾನಸಿಕತೆ ಈಗ ಬದಲಾಗಿದ್ದು ಎಲ್ಲರೂ ಪ್ರಗತಿಯ ದೃಷ್ಟಿಯನ್ನು ಬದಲಾಯಿಸಿಕೊಂಡು ಉತ್ತಮ ಸೃಷ್ಟಿಗೆ ಕಾರಣವಾಗಿರುವುದು ಹೆಮ್ಮೆ ತರುತ್ತಿದೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಮತ್ತು ಸಾಂಸ್ಕøತಿಕ ಸಂಘದ ಅಧ್ಯಕ್ಷರಾದ ಡಾ. ಬಸವರಾಜ್ ಪಾಟೀಲ್ ಸೇಡಂ ಅವರು ಮಾತನಾಡುತ್ತಾ ನಾಯಕತ್ವ ಎಂಬುದು ಕೇವಲ ರಾಜಕೀಯಕ್ಕೆ ಮಾತ್ರ ಸೀಮಿತ ಆಗದೆ ಸುಮಾರು 800 ರಷ್ಟು ಶಾಸ್ತ್ರಗಳಲ್ಲಿ ಅಡಕವಾಗಿರುವ ಎಲ್ಲ ಕ್ಷೇತ್ರಗಳಲ್ಲೂ ನಮ್ಮ ಜನತೆ ನಾಯಕತ್ವವನ್ನು ಬೆಳೆಸಿಕೊಂಡಾಗ ಆ ಮೂಲಕ ಬೆಳವಣಿಗೆ ಮತ್ತು ವಿಶ್ವಮಾನ್ಯತೆ ಪಡೆಯಲು ಸಾಧ್ಯವಾಗುತ್ತದೆ. ಇಂದು ಕಲ್ಯಾಣ ಕರ್ನಾಟಕ ಭಾಗವು ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದು ರಾಷ್ಟ್ರ ಗುರುತಿಸುವಂತಾಗಿz.É ಅಂತಹ ಕಾರ್ಯಗಳನ್ನು ದಾಖಲು ಮಾಡುವಂಥ ಆಕಾಶವಾಣಿಯು ಸಿದ್ಧಪಡಿಸಿದ ‘ಸ್ವಾತಂತ್ರ್ಯ ಹೋರಾಟದ ಅಮೃತ ಹೆಜ್ಜೆಗಳು’ ಕೃತಿ ಕೂಡ ಅದರ ಒಂದು ಭಾಗ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಅಯೋಧ್ಯ ರಾಮಮಂದಿರದ ಶ್ರೀರಾಮ ಮೂರ್ತಿ ನಿರ್ಮಾಣದ ಕೆಲಸಕ್ಕೆ ಶಿಲ್ಪಿ ಮಾನಯ್ಯ ಬಡಿಗೇರ್ ಅವರ ಆಯ್ಕೆ, ಗಣಿತಜ್ಞ ವೇಣುಗೋಪಾಲ ಹೇರೂರು ಹೀಗೆ ಅನೇಕರು ಈ ಭಾಗದ ಹಿರಿಮೆಯನ್ನು ಈಗ ಸಾರುತ್ತಿದ್ದು ಮಹಾನ್ ಪ್ರಶಂಸನೀಯ ವಿಷಯ ಎಂದರು. ಜನಮಾನಸವನ್ನು ಮುಟ್ಟುವ ಪರಿಶುದ್ಧ ಮಾಧ್ಯಮ ಆಕಾಶವಾಣಿ ಎಂಬುದನ್ನು ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರು ಆಯ್ಕೆ ಮಾಡಿಕೊಂಡಿದ್ದು ಅದಕ್ಕಾಗಿ ವಿಕಾಸ ಅಕಾಡೆಮಿ ಕಳೆದ ಹಲವಾರು ವರ್ಷಗಳಿಂದ ಆಕಾಶವಾಣಿಯ ಮೂಲಕ ಅಭಿವೃದ್ಧಿ ಕಾರ್ಯಗಳನ್ನು ಹಾಗೂ ಸಂಸ್ಕøತಿ- ಸಂಸ್ಕಾರ ಪ್ರಚಾರದ ಕಾರ್ಯವನ್ನು ಮಾಡುತ್ತಿದ್ದು ಎಲ್ಲೆಡೆ ಮೆಚ್ಚುಗೆಯ ಮಾತುಗಳು ಲಭಿಸುತ್ತಿವೆ ಎಂದರು. ಇಂದು ಮಾಲ್, ಮೊಬೈಲ್ ಸಾಮಾಜಿಕ ಜಾಲತಾಣಗಳ ಹಾವಳಿಯಿಂದ ಅಪಾಯ ಎದುರಾಗಿದ್ದು ಸಂಸ್ಕøತಿ ಸಂಸ್ಕಾರವನ್ನ ಬೆಳೆಸಲು ನಾವು ಚಿಂತನೆ ನಡೆಸಬೇಕಾಗಿದೆ ಎಂದು ಹೇಳಿದರು. ಈ ಕೃತಿಯ ಸಂಪಾದಕರಾದ ಡಾ. ಸದಾನಂದ ಪೆರ್ಲ ಹಾಗೂ ಉಪನ್ಯಾಸಕರುಗಳು ಮತ್ತು ಕಾರ್ಯಕ್ರಮವನ್ನು ಆಲಿಸಿದ ಕೇಳುಗರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.
ವಿದ್ವಾಂಸರಾದ ಡಾ. ವಾಸುದೇವ ಅಗ್ನಿಹೋತ್ರಿ ಅವರು ಮಾತನಾಡುತ್ತಾ ಗ್ರಂಥದಲ್ಲಿ ಅಡಕವಾಗಿರುವ ಅತ್ಯಮೂಲ್ಯ ವಿಚಾರಧಾರೆಗಳು ಇತಿಹಾಸದ ಸೂಕ್ಷ್ಮ ಒಳನೋಟಗಳು ಕೃತಿಯ ಮಹತ್ವವನ್ನು ಹೆಚ್ಚಿಸಿದೆ ಎಂದು ಹೇಳಿ ಉಪನ್ಯಾಸಕರುಗಳು ಹಾಗೂ ಸ್ವಾತಂತ್ರ್ಯ ಹೋರಾಟಗಾರರು ಮಾಡಿರುವ ಈ ದಾಖಲೆಗಳು ಗ್ರಂಥ ಋಣದೊಂದಿಗೆ ಅಚ್ಚಾಗಿರುವುದು ಇತಿಹಾಸಕ್ಕೆ ನೀಡಿದ ದೊಡ್ಡ ಕೊಡುಗೆ ಎಂದು ಹೇಳಿ ಗ್ರಂಥ ಪರಿಚಯವನ್ನು ಮಾಡಿಕೊಟ್ಟರು. ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಮತ್ತು ಸಾಂಸ್ಕøತಿಕ ಸಂಘದ ಅಧೀನ ಕಾರ್ಯದರ್ಶಿ ಮಲ್ಲಿಕಾರ್ಜುನ ರೆಡ್ಡಿ ಪಾಟೀಲ್ ಅವರು ಸಂಘದ ಕಾರ್ಯ ಚಟುವಟಿಕೆಗಳನ್ನು ವಿವರಿಸಿ ಸಾಂಸ್ಕøತಿಕ ಭಾಗದ ಈ ಕೃತಿ ಜನರ ಕೈಗೆ ತಲುಪಲಿ ಎಂಬುದೇ ಇದರ ಆಶಯ ಎಂದರು ಸಾಹಿತಿ ಡಾ. ಸ್ವಾಮಿರಾವ್ ಕುಲಕರ್ಣಿ ಅವರು ಮಾತನಾಡಿ 22 ಸರಣಿಗಳಲ್ಲಿ ಅತ್ಯಮೂಲ್ಯವಾದ ವಿಚಾರಧಾರೆಗಳನ್ನು, ದೇಶಪ್ರೇಮವನ್ನು ಬಿತ್ತುವ ಮಹಾನ್ ಕಾರ್ಯವನ್ನು ಆಕಾಶವಾಣಿ ಮಾಡಿದೆ. ಈ ಭಾಗದಲ್ಲಿ ಮತ್ತು ಎಲ್ಲ ಕೇಳುಗರಿಗೆ ಸದಭಿರುಚಿಯ ಮತ್ತು ದೇಶಪ್ರೇಮದ ಸಿಂಚನ ಮಾಡಿದೆ. ಈ ಕೃತಿ ಪಠ್ಯಕ್ರಮದ ಪುಸ್ತಕವಾಗಿ ಆಯ್ಕೆ ಹೊಂದಲಿ ಎಂದು ಶುಭ ಹಾರೈಸಿದರು .
ಈ ಸಂದರ್ಭದಲ್ಲಿ ಅತಿಥಿಗಳಾಗಿ ಭಾಗವಹಿಸಿದ ನಿಲಯದ ತಾಂತ್ರಿಕ ವಿಭಾಗದ ಸಹಾಯಕ ನಿರ್ದೇಶಕರಾದ ಶ್ರೀ ಗುರುಮೂರ್ತಿ ಮತ್ತು ನಿವೃತ್ತ ಕಾರ್ಯಕ್ರಮ ನಿರ್ವಾಹಣಾಧಿಕಾರಿ ಅನಿಲ್ ಕುಮಾರ್ ಅವರು ಶುಭ ಹಾರೈಸಿದರು. ಕಾರ್ಯಕ್ರಮ ಮುಖ್ಯಸ್ಥರಾದ ಪ್ರಕಾಶ್ ಮಜುಂದಾರ್ ಅವರು ಅಧ್ಯಕ್ಷತೆ ವಹಿಸಿದ್ದರು ಕಾರ್ಯಕ್ರಮ ನಿರ್ವಹಣಾಧಿಕಾರಿ ಮತ್ತು ಕೃತಿಯ ಸಂಪಾದಕರಾದ ಡಾ. ಸದಾನಂದ ಪೆರ್ಲ ಅವರು ಪ್ರಸ್ತಾವಿಕವಾಗಿ ಮಾತನಾಡಿ ಈ ಕೃತಿ ಯು ಶಾಲೆಯಿಂದ ವಿಶ್ವವಿದ್ಯಾಲಯದವರೆಗೆ ಆಕರ ಗ್ರಂಥವಾಗುವ ಮೌಲಿಕ ಲೇಖನಗಳ ಸಂಗ್ರಹವಾಗಿದ್ದು ಪ್ರಸಾರ ಭಾರತಿಯ ಆಕಾಶವಾಣಿ ಮತ್ತು ದೂರದರ್ಶನ ಕೇಂದ್ರಗಳು ಅಮೃತ ಸ್ವಾತಂತ್ರ್ಯದ ಸಂದರ್ಭದಲ್ಲಿ ವಿಶಿಷ್ಟ ಕಾರ್ಯಕ್ರಮಗಳನ್ನು ರೂಪಿಸಿ ಬಿತ್ತರಗೊಳಿಸುವ ನೆಲೆಯಲ್ಲಿ ಕಲಬುರ್ಗಿ ಆಕಾಶವಾಣಿಯು ನೇರಪ್ರಸಾರದ ಈ ಕೃತಿಯನ್ನು ಅಕ್ಷರ ಲೋಕಕ್ಕೆ ನೀಡಲು ಸಾಧ್ಯವಾಗಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.ನಂತರ ಎಲ್ಲರಿಗೂ ಸ್ವಾಗತ ಕೋರಿದರು.
ಈ ಕಾರ್ಯಕ್ರಮದಲ್ಲಿ ಎ. ಕೆ ರಾಮೇಶ್ವರ , ಶ್ರೀಮತಿ ಶೀತಲ್ ದೇವಲಗಾವಂಕರ, ಕೈಲಾಸನಾಥ ದೀಕ್ಷಿತ್, ಸುರೇಶ್ ಬಡಿಗೇರ್, ಡಾ. ಗೀತಾ ಪಾಟೀಲ್, ಪ್ರೇಮ ಹೂಗಾರ್,ಭಾರತಿ, ಗುರುಪ್ರಕಾಶ್ ಹೂಗಾರ್, ಶ್ರೀಶೈಲ ಬಿರಾದಾರ್, ಡಾ. ಸುರೇಶ್ ನಂದಗಾ0ವ, ನಿವೃತ್ತ ಡಿವೈಎಸ್ಪಿ ಸೋಮಶೇಖರ್ ಮಠಪತಿ ಶೇಷಮೂರ್ತಿ ಅವಧಾನಿ , ಹೋರಾಟಗಾರ ಸೀತಾರಾಮ ನಾಯಕ, ಶಾಂತಯ್ಯ ಸಂದಿಮಠ, ನ್ಯಾಯವಾದಿ ಬಸಣ್ಣ ಸಿಂಗೆ ಆನಂದ ಸಿ.ಎಸ್ ಡಾ. ಸದಾನಂದ ಪಾಟೀಲ್, ಶ್ರೀಮತಿ ಸಂಧ್ಯಾ ಹೊನ್ನ ಗುಂಟಿಕರ್, ಶರಣು ಪಪ್ಪಾ ಮತ್ತಿತರರು ಹಾಜರಿದ್ದರು,ಶ್ರೀಮತಿ ಮಾಧುರಿ ಕುಲಕರ್ಣಿ ಪ್ರಾರ್ಥನೆ ಗೀತೆ ಹಾಡಿದರು ಹಿರಿಯ ಉದ್ಘೋಷಕಿ ಶ್ರೀಮತಿ ಶಾರದಾ ಜಂಬಲದಿನ್ನಿ ಕಾರ್ಯಕ್ರಮವನ್ನು ನಿರೂಪಿಸಿದರು. ಸಂಗಮೇಶ್, ಪ್ರಭು ನಿಷ್ಠಿ, ಅಶೋಕ್ ಕುಮಾರ್ ಸೋಂ ಕಾ, ಮೊಹಮ್ಮದ್ ಅಬ್ದುಲ್ ರಾವ್ ಡಿ.ಕೆ ಅನುμÁ, ಲಕ್ಷ್ಮಿಕಾಂತ್ ಪಾಟೀಲ್ ,ದತ್ತಾತ್ರೇಯ ಪಾಟೀಲ್, ಗೋವಿಂದ ರಾವ್ ರಾಠೋಡ್, ಶಿವಕುಮಾರ್ ರಾಘವೇಂದ್ರ ಬೋಗ್ಲೆ, ಸುಗುಲರಾಣಿ, ಮಲ್ಲಮ್ಮ ಬುಳ್ಳ, ಶ್ರೀದೇವಿ ,ಪಲ್ಲವಿ ಜಾಗಿರದಾರ್, ಮಾತೋಶ್ರೀ, ಜ್ಯೋತಿ ಸಾಗರ್ ,ಮಧು ದೇಶಮುಖ್, ಮೋಹಿನಿ, ಮಂಜುಳಾ ದೇವಿ ನೆರವಾದರು.