ಕಲ್ಯಾಣ ಕರ್ನಾಟಕದಲ್ಲಿ ವಿಮೋಚನಾ ಚಳುವಳಿಯ ಕೃತಿ ಮುಖ್ಯಮಂತ್ರಿಗಳಿಂದ ಲೋಕಾರ್ಪಣೆ

ಕಲಬುರಗಿ :ಸೆ.22: ಕಲ್ಯಾಣ ಕರ್ನಾಟಕ ಪ್ರದೇಶದ ಇತಿಹಾಸ ರಚನಾ ಸಮಿತಿಯ ಕಲ್ಯಾಣ ಕರ್ನಾಟಕದ ಬಿಟ್ಟು ಹೋದ 233 ವರ್ಷಗಳ ಇತಿಹಾಸಕ್ಕೆ ಸಂಬಂಧಿಸಿದಂತೆ, ಆಗಿನ ಆಡಳಿತದ, ಸಾಮಾಜಿಕ ವ್ಯವಸ್ಥೆ, ಅಭಿವೃದ್ಧಿ ಕಾರ್ಯಗಳು, ಭಾರತಕ್ಕೆ ಸ್ವತಂತ್ರ ನೀಡುವಾಗ ಬ್ರಿಟಿಷರು ಹಾಕಿರುವ ಅವಾಸ್ತವಿಕ ಷರತ್ತುಗಳು, ಹೈದ್ರಾಬಾದ ರಾಜ್ಯದ ಕೊನೆಯ ನಿಜಾಮ ಮೀರ್ ಉಸ್ಮಾನ ಅಲಿ ಖಾನ್ ಅವರು ಭಾರತದಲ್ಲಿ ವಿಲೀನಕ್ಕೆ ತಿರಸ್ಕರಿಸಿರುವುದು, ದೀರ್ಘ ಕಾಲದ ವಿಮೋಚನಾ ಚಳುವಳಿ, ಸರ್ದಾರ ಪಟೇಲರ ದಿಟ್ಟತನದ ಪೆÇೀಲಿಸ್ ಕಾರ್ಯಾಚರಣೆ, ಅಖಂಡ ಭಾರತದಲ್ಲಿ ಹೈದ್ರಾಬಾದ ಸಂಸ್ಥಾನದಲ್ಲಿ ವಿಲೀನ, ಏಕೀಕರಣ ಚಳುವಳಿ, ಫಜಲ್ ಅಲಿ ವರದಿಯಂತೆ ಕಲ್ಯಾಣ ಕರ್ನಟಕ ಪ್ರದೇಶ ವಿಶಾಲ ಕರ್ನಾಟಕದಲ್ಲಿ ಸೇರಿಕೊಂಡಿರುವ ವಿಷಯಗಳ ಕುರಿತು ಇತಿಹಾಸ ರಚನಾ ಸಮಿತಿ ಈಗಾಗಲೇ ಬರಹಗಳನ್ನು ರಚನೆ ಮಾಡಿದೆ. ಮೊದಲನೇ ಹಂತವಾಗಿ ಕಲ್ಯಾಣ ಕರ್ನಟಕದಲ್ಲಿ ಸ್ವಾಮಿ ರಮಾನಂದ ತೀರ್ಥರ ನೇತೃತ್ವದಲ್ಲಿ, ಆರ್ಯ ಸಮಾಜದ ನೇತೃತ್ವದಲ್ಲಿ, ವಂದೇ ಮಾತರಂ ಚಳುವಳಿಯ ನೇತೃತ್ವದಲ್ಲಿ ಹಾಗೂ ಇನ್ನುಳಿದ ಸಾಮಾಜಿಕ ಸಂಘಟನೆಗಳ ವಿಮೊಚನಾ ಚಳುವಳಿಯ ಕುರಿತು ಕೃತಿಯನ್ನು ರಚನೆ ಮಾಡಿ ಸರಕಾರಕ್ಕೆ ಒಪ್ಪಿಸಿರುವಂತೆ ಸರಕಾರ ಇದಕ್ಕೆ ಸ್ಪಂದಿಸಿ ಬಿಡುಗಡೆಗೆ ಅನುಮೋದನೆ ನೀಡಿತು.
ಇತಿಹಾಸ ಸಮಿತಿಯ ಸದಸ್ಯ ಕಾರ್ಯದರ್ಶಿಗಳಾದ ಲಕ್ಷ್ಮಣ ದಸ್ತಿ ಮತ್ತು ಇತಿಹಾಸ ಸಮಿತಿಯ ಸದಸ್ಯರಾದ ಡಾ. ಮಹಾಬಲೇಶ್ವರಪ್ಪ ರವರು ರಚಿಸಿರುವ ಕಲ್ಯಾಣ ಕರ್ನಾಟಕದಲ್ಲಿ ಹೈದ್ರಾಬಾದ ಕರ್ನಾಟಕ ವಿಮೋಚನಾ ಚಳುವಳಿಯ ಮಹತ್ವದ ಕೃತಿಯನ್ನು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ವತಿಯಿಂದ ಪ್ರಕಾಶನ ಮಾಡಿರುವ ಕೃತಿಯನ್ನು ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವದ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಲೋಕಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಭಗವಂತ ಖೂಬಾ, ಜಿಲ್ಲಾ ಉಸ್ತುವಾರಿ ಸಚಿವರಾದ ಮುರುಗೇಶ ನಿರಾಣಿ, ರಾಜ್ಯದ ಸಚಿವರುಗಳಾದ ಅರಗ ಜ್ಞಾನೇಂದ್ರ, ಮುನಿರತ್ನ, ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷರಾದ ದತ್ತಾತ್ರೇಯ ಪಾಟೀಲ ರೇವೂರ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಅಧ್ಯಕ್ಷರಾದ ಬಸವರಾಜ ಪಾಟೀಲ ಸೇಡಂ, ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಅಧ್ಯಕ್ಷರಾದ, ರಾಜಕುಮಾರ ಪಾಟೀಲ ತೇಲ್ಕೂರ, ನಿಜಗುಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಬಾಬುರಾವ ಚಿಂಚನಸೂರ, ಸಂಸದರಾದ, ಉಮೇಶ ಜಾಧವ, ಶಾಸಕರುಗಳಾದ ಸುಭಾಸ ಆರ್. ಗುತ್ತೇದಾರ, ಬಸವರಾಜ ಮತ್ತಿಮೂಡ, ಡಾ. ಅವಿನಾಶ ಜಾಧವ, ಶಶೀಲ್ ಜಿ. ನಮೋಶಿ, ಬಿ.ಜಿ.ಪಾಟೀಲ್, ನಿಗಮ ಮಂಡಳಿಯ ಅಧ್ಯಕ್ಷರುಗಳಾದ ಚಂದು ಪಾಟೀಲ್, ಧರ್ಮಣ್ಣ ದೊಡ್ಡಮನಿ, ಪ್ರಾದೇಶಿಕ ಅಯುಕ್ತರು ಮತ್ತು ಕಲ್ಯಾಣ ಕರ್ನಾಟಕ ಪ್ರದೇಶದ ಇತಿಹಾಸ ರಚನಾ ಸಮಿತಿಯ ಅಧ್ಯಕ್ಷರಾದ ಕೃಷ್ಣಾ ಭಾಜಪೇಯಿ, ಜಿಲ್ಲಾಧಿಕಾರಿಗಳಾದ ಯಶವಂತ ವಿ. ಗುರುಅಕ್ರ ಸೇರಿದಂತೆ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.