ಕಲ್ಯಾಣ ಕರ್ನಾಟಕದಲ್ಲಿ ಬಿಜೆಪಿ 35 ಸ್ಥಾನ


(ಸಂಜೆವಾಣಿ ಪ್ರತಿನಿಧಿಯಿಂದ )
ಬಳ್ಳಾರಿ:ಏ,22-  ಕಲ್ಯಾಣ ಕರ್ನಾಟಕದ 41 ಸ್ಥಾನಗಳಲ್ಲಿ 35 ಸ್ಥಾನಗಳಲ್ಲಿ ಬಿಜೆಪಿ  ಗೆಲುವು ಸಾಧಿಸಲಿದೆಂದು ಬಿಜೆಪಿ ಮುಖಂಡ ಬಿ.ಶ್ರೀರಾಮುಲು ಹೇಳಿದ್ದಾರೆ.
ಅವರು ಇಂದು ನಗರದ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿ.ನಮಗೆ ಪೂರ್ಣ ವಿಶ್ವಾಸವಿದೆ‌. ದೊಡ್ಡ ಸಂಖ್ಯೆಯಲ್ಲಿ ಗೆಲುವು ಸಾಧಿಸುತ್ತೇವೆ.ನೂರಕ್ಕೆ ನೂರರಷ್ಟು ಬಿಜೆಪಿ ಸರ್ಕಾರ ಬರಲಿದೆ, ಗ್ರಾಮೀಣ ಕ್ಷೇತ್ರಕ್ಕೆ ನಾನೇನು ಹೊಸಬ ಅಲ್ಲ. ಜನರಿಗೆ ರಾಮುಲು ಬಗ್ಗೆ ವಿಶ್ವಾಸ, ನಂಬಿಕೆ ಇದೆ. ಎಲ್ಲರನ್ನೂ ವಿಶ್ವಾಸಕ್ಕೆ ತಗೆದುಕೊಂಡು ಹೋಗ್ತಾನೆಂದರು. ಗ್ರಾಮೀಣ ಅಷ್ಟೇ ಅಲ್ಲ‌ಮುಂದಿನ ದಿನಗಳಲ್ಲಿ ರಾಜ್ಯದ  ಬೇರೆ ಕ್ಷೇತ್ರಗಳಿಗೂ ಪ್ರಚಾರಕ್ಕೆ ಹೋಗುವೆ ಎಂದರು.
ಉರಿ ಬಿಸಿಲಿನಲ್ಲೂ ಮುಸ್ಲಿಂ ಬಾಂಧವರು ಒಂದು ತಿಂಗಳು ಕಾಲ ಉಪವಾಸ ಮಾಡಿದ್ದಾರೆ ಅವರ  ಸಂಕಲ್ಪ ಈಡೇರಲಿ, ಸೇವಾ ಮನೋಭಾವನೆಯಿಂದ ದಾನ ಮಾಡಿ, ಧರ್ಮವನ್ನ ಉಳಿಸುವ ಕೆಲಸವನ್ನ ಮುಸ್ಲಿಂ ಸಮುದಾಯ ಮಾಡಿತ್ತಿದೆಂದರು.