ಕಲ್ಯಾಣ ಕರ್ನಾಟಕದಲ್ಲಿ ಜಾನಪದ ಸಂಸ್ಕøತಿ ಅತ್ಯಂತ ಶ್ರೀಮಂತ

ಕಲಬುರಗಿ,ನ.1-ಭಾರತ ದೇಶದಲ್ಲೇ ನಮ್ಮ ಕರ್ನಾಟಕ ಅದರಲ್ಲೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಜಾನಪದ ಸಂಸ್ಕೃತಿ ಅತ್ಯಂತ ಶ್ರೀಮಂತವಾಗಿದೆ ಎಂದು ವಿಶ್ವರಾಧ್ಯಸ್ವಾಮಿ ಬೀದಿಮನಿ ಹೇಳಿದರು.
ನಗರದ ಸೋಗಸನಗೇರಿ ಶೇಖರೋಜಾ ಶಿವಾನುಭವ ಮಂಟಪದಲ್ಲಿ ನಡೆದ ಶ್ರೀ ಗುರು ಶರಣ ಪ್ರಭು ಸಂಗೀತ ಸಾಹಿತ್ಯ ಸಾಂಸ್ಕೃತಿಕ ಸೇವಾ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಕಲ್ಯಾಣ ಕರ್ನಾಟಕ ಜಾನಪದ ಸಂಭ್ರಮ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಲೆ, ಸಂಗೀತ, ಸಾಹಿತ್ಯ, ನೃತ್ಯ ಬದುಕಿನ ಸೂಕ್ಷ್ಮ ಸಂಗತಿಗಳನ್ನು ಜಾನಪದ ಒಳಗೊಂಡಿರುತ್ತದೆ. ಜನತೆಯ ಸರ್ವತೋಕಮುಖ ಅಭವೃದ್ದಿ ಇಲ್ಲಿದೆ. ಜನಪದರ ಬದುಕಿನ ಸಾವಿರಾರು ಸಂಗತಿಗಳು ಜಾನಪದದಲ್ಲಿ ಹಾಸು ಹೊಕ್ಕಾಗಿ ಸೇರುತ್ತದೆ. ಪ್ರಾಯಶಃ ಜಾನಪದದಲ್ಲಿ ವ್ಯಾಪಕ ಮತ್ತು ವಿಶಾಲವಾದ್ದು ಮತ್ತೊಂದಿಲ್ಲ. ದೇವರಲ್ಲಿ ಭಕ್ತಿ ಪ್ರೇಮ ಮನೆಯ ಕುರಿತಾದ ಹೆಮ್ಮೆ ಬಂಜೆಯ ಬೇಸರ ತಾಯಿಯ ವಾತ್ಸಲ್ಯ ತವರಿನ ಹಂಬಲ ಗಂಡನ ಪ್ರೀತಿ ,ಸಿಟ್ಟು ಹೀಗೆ ನೂರೆಂಟು ಬಗೆ ವಿಸ್ವಾಸಲೋಕದ ಚಿತ್ತಾರವೇ ಜಾನಪದವಾಗಿದೆ. ನಮ್ಮ ಕನ್ನಡ ಜಾನಪದ ಸಂಸ್ಕೃತಿಯಲ್ಲಿ ಕಾಣಬಹುದು. ಕನ್ನಡ ಜಾನಪದ ಸಂಸ್ಕೃತಿಯು ಒಂದು ಭಾಗವಾದ ಜಾನಪದ ಗೀತೆಗಳು ಅತ್ಯಂತ ವೈವಿಧ್ಯಮಯವಾಗಿ ಕನ್ನಡನಾಡಿನ ವಿವಿಧ ಪ್ರದೇಶಗಳ ಪ್ರಾದೇಶಿಕ ಸೊಗಡುಗಳನ್ನು ನಮ್ಮ ಮುಂದಿನ ಪೀಳಿಗೆಗೆ ಜೋಪಾನ ಮಾಡಿವೆ ಎಂದರೆ ತಪ್ಪಲ್ಲ. ಇಂದಿನ ಪಾಶ್ಚಾತ್ಯ ಶೈಲಿಯ ಸಂಗೀತದ ಮಧ್ಯೆ ಜಾನಪದ ಗೀತೆಗಳು ತನ್ನ ಹಿಂದಿನ ವೈಭವವನ್ನು ಸ್ವಲ್ಪಮಟ್ಟಿಗೆ ಕಳೆದುಕೊಂಡಿವೆ ಎಂದೆನಿಸಿದರೂ ತನ್ನ ಮೂಲನೆಲೆಯಾದ ಹಳ್ಳಿಗಳಲ್ಲಿ ಇನ್ನೂ ತನ್ನ ನೆಲೆಯನ್ನು ಭದ್ರವಾಗಿಸಿಕೊಂಡಿವೆ ಎಂದರು.
ನಿವೃತ್ತ ಪೆÇಲೀಸ್ ಅಧಿಕಾರಿ ಗುರುಬಸಪ್ಪಾ ಕೋಟಿ, ಚಂದ್ರಶೇಖರ ಬೆಣ್ಣೂರು, ಸುರೇಶ ಹರಸೂರ, ಬಂಡಪ್ಪಾ ಸಿಂದಗಿ, ರಾಜ ಕುಮಾರ ಬಿರಾದಾರ, ಶಿವಕುಮಾರ ಪೊಲೀಸ್ ಪಾಟೀಲ, ವಿನೋದ ಸಂಕಾಣಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಕಾರ್ಯಕ್ರಮದಲ್ಲಿ ಸಂಗಮೇಶ ಮಾಶಾಳ, ಮಹಾಂತಯ್ಯ ಸ್ವಾಮಿ ನಿಂಗದಳ್ಳಿ, ಸಿದ್ಧಲಿಂಗ ಪೂಜಾರಿ, ಮಹಾಂತಯ್ಯ ಸ್ವಾಮಿ ಗೋಟೂರ, ಮಲ್ಕಾಜಪ್ಪಗೌಡ ಆನೂರು, ಸುಗಮಸಂಗೀತ ,ಜಾನಪದ , ತತ್ವಪದಗಳ ಸಾಂಸ್ಕೃತಿಕಾರ್ಯಕ್ರಮ ನಡೆಸಿದರು. ವಾದ್ಯ ಸಹಕಾರದಲ್ಲಿ ಅಣ್ಣಾರಾಯ ಶೇಳಗಿ ಮತ್ತಿಮುಡ, ಶಿವಶರಣಯ್ಯಸ್ವಾಮಿ ನಿಂಗದಳ್ಳಿ, ಶ್ರೀಶೈಲ್ ಕೊಂಡೇದ, ರವಿ ಸ್ವಾಮಿ ಗೋಟೂರ, ಮೌನೇಶ ಪಾಂಚಾಳ ಸಹಕರಿಸಿದರು. ಸಂಸ್ಥೆಯ ಕಾರ್ಯದರ್ಶಿ ನಾಗೇಂದ್ರಪ್ಪ ಎಸ್.ಸಪ್ಪನಗೋಳ ವಂದಿಸಿದರು. ಬಂಡಯ್ಯ ಸ್ವಾಮಿ ಸುಂಟನೂರ ನಿರೂಪಿಸಿದರು.