ಕಲ್ಯಾಣ ಕರ್ನಾಟಕದಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಳಕ್ಕೆ ಆದ್ಯತೆ

ಕಲಬುರಗಿ,ಮಾ.08: ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಹೆಚ್ಚಳಕ್ಕಾಗಿ ಸರ್ವ ರೀತಿಯ ಪ್ರಯತ್ನ ಮಾಡಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಕಲಬುರ್ಗಿ ವಿಭಾಗದ ಸಹ ನಿರ್ದೇಶಕರಾದ ಶ್ರೀಮತಿ ಅಮಿತಾ ಯರಗೊÃಳಕರ ತಿಳಿಸಿದರು
ಕಲ್ಬುರ್ಗಿ ಆಕಾಶವಾಣಿಯಲ್ಲಿ ಮಾರ್ಚ್ 8 ರಂದು ಜೊತೆ ಜೊತೆಯಲಿ ನೇರ ಫೋನಿನ ಸಂವಾದದಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಹೇಳಿದರೆ ಪ್ರಶ್ನೆಗಳಿಗೆ ಉತ್ತರಿಸಿ ಫಲಿತಾಂಶ ಹೆಚ್ಚಳಕ್ಕಾಗಿ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ 15 ಅಂಶಗಳನ್ನು ಅನುಸರಿಸಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲಾಗಿದೆ ಎಂದು ಹೇಳಿದರು ಈ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಬಳ್ಳಾರಿಯ 68 ಕೇಂದ್ರಗಳಲ್ಲಿ 23,444, ಬೀದರ್ 108 ಕೇಂದ್ರಗಳಲ್ಲಿ 28,093, ಕಲ್ಬುರ್ಗಿಯ 168 ಕೇಂದ್ರಗಳಲ್ಲಿ 46,406 ಕೊಪ್ಪಳದ 79 ಕೇಂದ್ರಗಳಲ್ಲಿ 25,103, ರಾಯಚೂರಿನ 111 ಕೇಂದ್ರಗಳಲ್ಲಿ 32,086, ವಿಜಯನಗರದ 73 ಕೇಂದ್ರಗಳಲ್ಲಿ 21,934 , ಯಾದಗಿರಿಯ 70 ಕೇಂದ್ರಗಳಲ್ಲಿ 18,284 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುತ್ತಿದ್ದು ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಒಟ್ಟು 677 ಕೇಂದ್ರಗಳಲ್ಲಿ 1,95,350 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದರು.
ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಭಯಮುಕ್ತ ವಾತಾವರಣದಲ್ಲಿ ಪರೀಕ್ಷೆಗಳನ್ನು ಬರೆದು ಈ ಭಾಗದಲ್ಲಿ ಉತ್ತಮ ಫಲಿತಾಂಶವನ್ನು ದಾಖಲು ಮಾಡುವಂತೆ ಡಿಡಿಪಿಐ (ಯೋಜನೆ)ಯ ವೆಂಕಟೇಶ್ ಎಸ್ ಪಟಗಾರ ಹೇಳಿದರು. ಎಸ್ ಎಸ್ ಎಲ್ ಸಿ ನೋಡಲ್ ಅಧಿಕಾರಿ ರಮೇಶ್ ಜಾನಕರ ಅವರು ಮಾತನಾಡಿ ಇಲಾಖೆಯು ವಿದ್ಯಾರ್ಥಿಗಳಿಗೆ ಪರೀಕ್ಷೆಗಾಗಿ ಎಲ್ಲಾ ಹಂತದ ಸಿದ್ಧತೆಗಳನ್ನು ಪೂರ್ಣಗೊಳಿಸಿದ್ದು ವಿದ್ಯಾರ್ಥಿಗಳು ಪುನರ್ಮನನ ಮಾಡಿ ಪರೀಕ್ಷೆಗೆ ಹಾಜರಾಗಿ ಉತ್ತಮ ಫಲಿತಾಂಶವನ್ನು ದಾಖಲಿಸಬೇಕು ಎಂದು ಶುಭ ಹಾರೈಸಿದರು. ವಿಷಯ ತಜ್ಞರಾಗಿ ಭಾಗವಹಿಸಿದ ಸಂತೋಷ (ವಿಜ್ಞಾನ), ದತ್ತಾತ್ರೇಯ (ಇಂಗ್ಲಿಷ್), ಬಂದೇನವಾಜ್ (ಗಣಿತ) ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು. ಸಂವಾದದಲ್ಲಿ ಚಿಟಗುಪ್ಪದ ಧನರಾಜ್ ಮಾನ್ವಿ ತಾಲೂಕಿನ ಅಂಬರೀಶ್, ದೇವದುರ್ಗ ತಾಲೂಕಿನ ಶ್ರೀಲತಾ , ಸುರಪುರದ ರಾಘವೇಂದ್ರ ಭಕ್ರಿ, ರಾಯಚೂರು ಗುಡಂಗಲ್ಲಿನ ಸಹನಾ, ರಾಯಚೂರು ಕರ್ನಾಟಕ ಪಬ್ಲಿಕ್ ಶಾಲೆಯ ಅಮರೇಶ್, ಸಿಂಧನೂರಿನ ರವಿ ಇಟಗಾದ ಭವಾನಿ, ಕೊರವಾರದ ರಾಯಚೂರಿನ ತುಳಸಿ, ಕಲ್ಬುರ್ಗಿಯ ಸುರೇಖಾ ಮತ್ತು ಮಹಮ್ಮದಾಲಿ ಪಾಲ್ಗೊಂಡರು. ಈ ಕಾರ್ಯಕ್ರಮವನ್ನು ಡಾ. ಸದಾನಂದ ಪೆರ್ಲ ನಡೆಸಿಕೊಟ್ಟರು. ಸಂಗಮೇಶ್ ಮತ್ತು ಮಧು ದೇಶಮುಖ್ ನೆರವಾದರು. ಅನುಷಾ ಡಿ.ಕೆ ಅವರು ತಾಂತ್ರಿಕ ನೆರವು ನೀಡಿದರು.