ಕಲ್ಯಾಣ ಕರ್ನಾಟಕಕ್ಕೆ 371(ಜೆ) ಕಲಂ ಸಮರ್ಪಕವಾಗಿ ಜಾರಿಗೊಳಿಸಲು ಶಾಸಕರಿಗೆ ಕೋರಿಕೆ

ಕಲಬುರಗಿ.ಜೂ 01: ಕಲ್ಯಾಣ ಕರ್ನಾಟಕದಲ್ಲಿ 371(ಜೆ) ಕಲಂನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು ಎಂದು ಅಖಿಲ ಭಾರತ ಯುವಜನ ಫೆಡರೇಷನ್ ಜಿಲ್ಲಾ ಸಮಿತಿ ಅಧ್ಯಕ್ಷ ಹಾಗೂ ನ್ಯಾಯವಾದಿ ಹಣಮಂತರಾಯ್ ಅಟ್ಟೂರ್ ಅವರು ಆಳಂದ್ ಶಾಸಕ ಬಿ.ಆರ್. ಪಾಟೀಲ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೈಬಿಟ್ಟು ಹೋದ ಹಲವಾರು ಯೋಜನೆಗಳನ್ನು ಮರಳಿ ತಂದು ಅಭಿವೃದ್ಧಿಗೊಳಿಸುವ ಮೂಲಕ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಮೇಲೆ ಒತ್ತಡ ತರುವ ಮೂಲಕ ಕಲ್ಯಾಣ ಕರ್ನಾಟಕ ಮಾಡಬೇಕು ಎಂದು ಅವರು ಮನವಿ ಮಾಡಿದರು.
ಹೊಸ, ಹೊಸ ಯೋಜನೆಗಳನ್ನು ಜಾರಿಗೆ ತಂದು ಈ ಭಾಗದ ಯುವಕರಿಗೆ ಉದ್ಯೋಗ ನೀಡಬೇಕು ಎಂದು ಒತ್ತಾಯಿಸಿದ ಅವರು, ಈ ಕುರಿತು ಜಿಲ್ಲೆಯ ಸಚಿವರಿಗೂ, ಆಡಳಿತ ಹಾಗೂ ವಿರೋಧ ಪಕ್ಷಗಳ ಶಾಸಕರಿಗೂ ಸಹ ಮನವಿ ಪತ್ರ ಸಲ್ಲಿಸಿ, ಚಳುವಳಿ ರೂಪಿಸಲಾಗುವುದು. ಆ ನಿಮಿತ್ಯ ಈಗ ಶಾಸಕರಿಗೆ ಮನವಿ ಪತ್ರ ನೀಡಲಾಗಿದೆ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ರಮೇಶ್ ಪಾಟೀಲ್, ರಘುನಂದನ್ ಕುಲಕರ್ಣಿ, ಶರಣು ಕಡಾಳೆ, ರವೀಂದ್ರ ವಗ್ಗಿ, ಬಂಡಪ್ಪ ಚಾಣಕ್ಯ, ಜಿಂದಾವಲಿ ಮುಂತಾದವರು ಪಾಲ್ಗೊಂಡಿದ್ದರು.