ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಕೈಗಾರಿಕಾ ನೀತಿ ರೂಪಿಸಲು ವಿಶೇಷ ಸಮಿತಿ ರಚನೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮೇ. 21;ವಾಣಿಜ್ಯ ಮತ್ತು ಕೈಗಾರಿಕಾ ಘಟಕಗಳ ಆಸ್ತಿ ತೆರಿಗೆ, ಎಪಿಎಂಸಿ ಸೆಸ್,   ಕಲ್ಯಾಣ ಕರ್ನಾಟಕ ಭಾಗಕ್ಕೆ ಪ್ರತ್ಯೇಕ ಕೈಗಾರಿಕಾ ನೀತಿ ರಚನೆಗಾಗಿ ಸರ್ಕಾರದ ಜೊತೆ  ಚರ್ಚೆ ನಡೆಸಲು ಏಳು ಜನರ ವಿಶೇಷ ಸಮಿತಿ ರಚನೆಯಾಗಿದೆ.
ರಾಯಚೂರು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ ಪ್ರದೇಶ ಚೇಂಬರ್ ಆಫ್ ಕಾಮರ್ಸ್ ಸಂಸ್ಥೆಗಳ 2 ನೇ  ಸಭೆಯಲ್ಲಿ ಈ ಸಮಿತಿ ರಚಿಸಿದೆ.
 ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಯಶವಂತರಾಜ್ ನಾಗಿರೆಡ್ಡಿ  ಸಮಿತಿಯ ಅಧ್ಯಕ್ಷರಾಗಿದ್ದು, ರಾಮಚಂದ್ರ ಪ್ರಭು, ಮಸ್ಕಿ ನಾಗರಾಜ್, ವೆಂಕಟರೆಡ್ಡಿ, ಅಶೋಕಸ್ವಾಮಿ ಹೇರೂರು, ದೀಪಕ್ ಗಾಲಾ ಮತ್ತು ಅಶ್ವಿನ್ ಕೋತಂಬರಿ ಅವರು ಸಮಿತಿಯ ಸದಸ್ಯರಾಗಿದ್ದಾರೆ.
 ಕಲ್ಯಾಣ ಕರ್ನಾಟಕ ಚೇಂಬರ್‍ನ ಮೂರನೇ ಅಂತರ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗಳ ಪ್ರತಿನಿಧಿಗಳ ಸಭೆಯ ಆತಿಥ್ಯವನ್ನು ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆವಹಿಸಲಿದೆ.
ರಾಯಚೂರಿನ  ಸಭೆಯಲ್ಲಿ ಬೀದರ್, ಕಲ್ಬುರ್ಗಿ, ರಾಯಚೂರು, ಯಾದಗಿರಿ, ಬಳ್ಳಾರಿ – ವಿಜಯನಗರ, ಕೊಪ್ಪಳ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗಳ ಅಧ್ಯಕ್ಷರು, ಸದಸ್ಯರು, ಹೆಚ್ಚುವರಿಯಾಗಿ ರಾಯಚೂರು ರೈಸ್ ಮಿಲ್ಲರ್ಸ್ ಅಸೋಸಿಯೇಷನ್ ಪಾದಾಧಿಕಾರಿಗಳು  ಪಾಲ್ಗೊಂಡಿದ್ದರು