ಕಲ್ಯಾಣ ಕರ್ನಾಟಕಕ್ಕೆ ಉಪ ಮುಖ್ಯಮಂತ್ರಿ ಸ್ಥಾನ ಹಾಗೂ ಉನ್ನತ ಮಟ್ಟದ ಸಚಿವ ಸ್ಥಾನ ನೀಡಲು: ಒತ್ತಾಯ

ಸೇಡಂ, ಮೇ,18 : ಈಗಾಗಲೇ ಹಿಂದುಳಿದ ಪ್ರದೇಶ ಎಂದು ಹಣೆಪಟ್ಟಿಯನ್ನು ಹೊತ್ತಿರುವಂತ ಈ ಕಲ್ಯಾಣ ಕರ್ನಾಟಕ ಭಾಗದ ಏಳಿಗೆ ಆಗಬೇಕಾದರೆ ಹಳ್ಳಿ, ತಾಲೂಕುಗಳು, ಅಭಿವೃದ್ಧಿ ಹೊಂದಬೇಕಾದರೆ ನಮ್ಮ ಭಾಗದ ನಾಯಕರು ಉನ್ನತ ಮಟ್ಟದ ಸಚಿವ ಸ್ಥಾನಗಳಲ್ಲಿ ಇರಬೇಕಾದ ಅನಿವಾರ್ಯತೆ ಇದೆ, ಹಾಗಾಗಿ ಇಡೀ ಕಲ್ಯಾಣ ಕರ್ನಾಟಕದ ಭಾಗದಲ್ಲಿ ಅತಿಹೆಚ್ಚಿನ ಮತಗಳ ಅಂತರದಿಂದ ವಿಜಯಶಾಲಿ ಆಗಿರುವಂತ ನಮ್ಮ ನೆಚ್ಚಿನ ನಾಯಕರಾದ ಬಡವರ ಬಂಧು, ದೀನದಲಿತರ ಆಶಾಕಿರಣ, ಸಮ ಸಮಾಜದ ಕನಸುಗಾರರೂ, ಬಸವ ತತ್ವ ಪ್ರಿಯರು ಆಗಿರುವಂತಹ ಡಾ.ಶರಣಪ್ರಕಾಶ್ ಪಾಟೀಲ್ ಸಾಹೇಬ್ರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸತೀಶ್ ಎಸ್ ಪಾಟೀಲ್ ದುದನಿ ಅವರು ರಾಜ್ಯ ಹಿರಿಯ ಕಾಂಗ್ರೆಸ್ ನಾಯಕರಿಗೆ ಆಗ್ರಹಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ಕಳೆದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಡಾ.ಸಾಹೇಬರು ವೈದ್ಯಕೀಯ ಸಚಿವರಾಗಿದ್ದಾಗ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಒಳ್ಳೆ ಕೆಲಸಗಳನ್ನು ಮಾಡಿ ಹೆಸರುವಾಸಿಯಾಗಿದ್ದಾರೆ, ಹಾಗೂ ಬಡ ವಿದ್ಯಾರ್ಥಿಗಳು ವೈದ್ಯರಾಗುವುದಕ್ಕು ಕಾರಣರಾಗಿರುತ್ತಾರೆ. ಯಾವುದೇ ಇಲಾಖೆ ಕೊಟ್ಟರು ಸೂಸೂತ್ರವಾಗಿ ಕೆಲಸ ಮಾಡುವ ಅರ್ಹತೆಯನ್ನು ಹೊಂದಿರುವ ನಾಯಕರಾಗಿದ್ದು ಹಾಗಾಗಿ ಡಾ. ಶರಣಪ್ರಕಾಶ್ ಪಾಟೀಲ್ ಸಾಹೇಬ್ರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಲೇಬೇಕು ಎಂದು ಒತ್ತಾಯಿಸಿದ್ದಾರೆ.