ಕಲ್ಯಾಣ ಕರ್ನಾಟಕಕ್ಕಾದ ಅನ್ಯಾಯ ಸರಿಪಡಿಸಿ

ಕಲಬುರಗಿ ಮಾ 23: ಕಲ್ಯಾಣ ಕರ್ನಾಟಕ ಭಾಗಕ್ಕೆ ದೊರಕಬೇಕಿದ್ದ ಏಮ್ಸ್, ರೈಲ್ವೆ ವಿಭಾಗೀಯ ಕಚೇರಿ, ತೊಗರಿ ತಾಂತ್ರಿಕ ಪಾರ್ಕ ಸೇರಿದಂತೆ ಅನೇಕ ಯೋಜನೆಗಳು ಸ್ಥಳಾಂತರ ಇಲ್ಲವೇ ರದ್ದಾಗಿರುವದಿಂದ ಕಲ್ಯಾಣ ಕರ್ನಾಟಕ ಭಾಗಕ್ಕೆ ಅನ್ಯಾಯವಾಗಿದೆ.ಆದ್ದರಿಂದ ಕೇಂದ್ರ ಮತ್ತು ರಾಜ್ಯ ಸರಕಾರಗಳು ಅನ್ಯಾಯ ಸರಿಪಡಿಸುವಂತೆ ಆಗ್ರಹಿಸಿ,ಕನ್ನಡ ಸೈನ್ಯ ಸಂಘಟನೆಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಸಂಘಟನೆ ಅಧ್ಯಕ್ಷ ಸೋಮನಾಥ ಕಟ್ಟಿಮನಿ,ಡಾ ರಾಜಶೇಖರ ಕಟ್ಟಿಮನಿ,ಬಸವರಾಜ ಕೆಕೆ,ಸುನೀಲ, ಶರಣ ಪಾಟೀಲ, ರಾಹುಲ್ ಕೆ.ಕಾಶೀನಾಥ ಬಿಕೆ ಸೇರಿದಂತೆ ಹಲವರಿದ್ದರು.