ಕಲ್ಯಾಣಿಯವರ ಕಾರ್ಯ ಶ್ಲ್ಯಾಘನೀಯ

ಬಾದಾಮಿ,ಏ9: ಬಿರು ಬೇಸಿಗೆಯಲ್ಲಿ ತಂಪೆನೀಸುವ ನೀರನ್ನು ನೀಡುವ ಮೂಲಕ ಸಾರ್ವಜನಿಕರ ನೀರಿನ ದಾಹವನ್ನು ತೀರಿಸುವ ಕೆಲಸವನ್ನು ಕಳೆದ ಕೆಲ ವರ್ಷಗಳಿಂದ ಕಲ್ಯಾಣಿ ಗ್ರೂಪದ ಮಾಲಿಕ ಈರಣ್ಣ ಕಲ್ಯಾಣಿ ಅವರ ಕಾರ್ಯ ಶ್ಲಾಘನೀಯವಾಗಿದೆ ಎಂದು ಪುರಸಭೆ ಸದಸ್ಯರು ಆಗಿರುವ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ನಾಗರಾಜ ಕಾಚಟ್ಟಿ ಹೇಳಿದರು.
ಅವರು ನಗರದ ರಾಮದುರ್ಗ ವೃತ್ತದ ಹತ್ತಿರವಿರುವ ಕಲ್ಯಾಣಿ ಗ್ರೂಪನ ಮಳಿಗೆಯ ಮುಂದೆ ಶುದ್ಧ ಕುಡಿಯುವ ನೀರಿನ ‘ಅರವಟಿಗೆ’ ಗೆ ಚಾಲನೆ ನೀಡಿ ಮಾತನಾಡಿ ಕುಡಿಯುವ ನೀರು ಪ್ರತಿಯೊಬ್ಬ ಮನುಷ್ಯನಿಗೆ ಅಮೃತವಿದ್ದಂತೆ ಹೀಗಾಗಿ ಮಿತವಾಗಿ ಬಳಕೆ ಮಾಡಿ ಪೋಲಾಗದಂತೆ ನೋಡಿಕೊಳ್ಳಬೇಕೆಂದು ಅವರು ಜನರಲ್ಲಿ ಮನವಿ ಮಾಡಿಕೊಂಡರು.
ಈರಣ್ಣ ಕಲ್ಯಾಣಿ ಮಾತನಾಡಿ ಸಾಮಾಜಿಕ ಕಳಕಳಿಯನ್ನು ಇಟ್ಟುಕೊಂಡು ಪ್ರತಿವರ್ಷ ಬೇಸಿಗೆ ಸಮಯದಲ್ಲಿ ಕುಡಿಯುವ ನೀರಿನ ಅರವಟಿಗೆ ಆರಂಭಿಸಿ ಜನರಿಗೆ ಅನಕೂಲ ಮಾಡುತ್ತ ಬಂದಿದ್ದೆವೆ ಎಂದರು. ಚನ್ನಪ್ಪ ಪಟ್ಟಣದ, ರೆಹಮಾನ ಕೆರಕಲಮಟ್ಟಿ, ಗಿರೀಶ ಶೆಟ್ಟರ, ಸಂಗಣ್ಣ ಬಂಗಾರಶೆಟ್ಟರ, ಶಂಕ್ರಪ್ಪ ಅವರಾದಿ, ನಾಗರಾಜ ಕಡಗದ, ಅಶೋಕ ಯಲಿಗಾರ, ಕೆರಿಹೊಲದ, ಗಣೇಶ ಕುಬಸದ, ದೇವಾನಂದ ದೊಡಮನಿ, ಸುರೇಶ ಶಿವಪ್ಪಯ್ಯನಮಠ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.