ಕಲ್ಯಾಣಿಯಲ್ಲಿ ಗಣೇಶ ಮೂರ್ತಿ ವಿಸರ್ಜನೆಗೆ ಸಲಹೆ

ಮಾಲೂರು.ಸೆ೧೯:ಗೌರಿ ಗಣೇಶ ಹಬ್ಬದ ಪ್ರಯುಕ್ತ ಪಟ್ಟಣದಲ್ಲಿ ಸಂಘ ಸಂಸ್ಥೆಗಳು ಹಾಗೂ ಮನೆಗಳಲ್ಲಿ ಪ್ರತಿಷ್ಠಾಪಿಸಿರುವ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿಗಳನ್ನು ನಿಸರ್ಜಿಸಲು ಎಪಿಎಂಸಿ ಮಾರುಕಟ್ಟೆ ಹಿಂಭಾಗದಲ್ಲಿರುವ ಮುರಾರಯ್ಯನ ತೋಪಿನಲ್ಲಿ ಕಲ್ಯಾಣಿ ನಿರ್ಮಿಸಲಾಗಿದೆ ಗಣಪತಿ ಮೂರ್ತಿಗಳನ್ನು ಕಲ್ಯಾಣಿಯಲ್ಲಿ ವಿಸರ್ಜನೆ ಮಾಡುವಂತೆ ಪುರಸಭಾ ಮುಖ್ಯ ಅಧಿಕಾರಿ ಎಂ ಆರ್ ಪ್ರದೀಪ್ ಕುಮಾರ್ ತಿಳಿಸಿದ್ದಾರೆ
ಪಟ್ಟಣದಲ್ಲಿ ಸಂಘ ಸಂಸ್ಥೆಗಳು ಹಾಗೂ ಮನೆಗಳಲ್ಲಿ ಪ್ರತಿಷ್ಠಾಪನೆ ಮಾಡಿರುವ ಗಣಪತಿ ಮೂರ್ತಿಗಳನ್ನು ಬಾವಿ ನದಿ ಕೆರೆಗಳಲ್ಲಿ ವಿಸರ್ಜನೆ ಮಾಡುವುದು ಪರಿಸರ ಸಂರಕ್ಷಣೆ ಕಾಯ್ದೆ ೧೯೮೬ರ ಪ್ರಕಾರ ಅಪರಾಧವಾಗಿರುತ್ತದೆ ಆದ್ದರಿಂದ ಗಣೇಶ ಮೂರ್ತಿಗಳನ್ನು ಎಪಿಎಂಸಿ ಮಾರುಕಟ್ಟೆ ಹಿಂಭಾಗದಲ್ಲಿರುವ ಮುರಾರಯ್ಯನ ತೋಪಿನಲ್ಲಿ ಪುರಸಭೆಯು ಕಲ್ಯಾಣ ಯನ್ನು ನಿರ್ಮಿಸಿದೆ ಪುರಸಭೆಯ ಸಿಬ್ಬಂದಿ ಸ್ಥಳದಲ್ಲಿ ಹಾಜರಿರುತ್ತಾರೆ ಗಣಪತಿ ಮೂರ್ತಿಗಳನ್ನು ಕಲ್ಯಾಣಿಯಲ್ಲಿ ವಿಸರ್ಜನೆ ಮಾಡುವಂತೆ ಮನವಿ ಮಾಡಿದ್ದಾರೆ.