ಕಲ್ಯಾಣದಲ್ಲಿ ತಾಲೂಕು ಆಡಳಿತದಿಂದಛತ್ರಪತಿ ಶಿವಾಜಿ ಮಹಾರಾಜ ಜಯಂತಿ

ಬಸವಕಲ್ಯಾಣ:ಫೆ.20: ಛತ್ರಪತಿ ಶಿವಾಜಿ ಮಹಾರಾಜರ ಆದರ್ಶ ವಿಚಾರಗಳು ಪ್ರತಿ ಮನೆ-ಮನಗಳಿಗೆ ತಲುಪಿಸುವ ಕೆಲಸ ನಡೆಯಬೇಕು ಎಂದು ಶಾಸಕ ಶರಣು ಸಲಗರ ಹೇಳಿದರು.
ತಾಲೂಕು ಆಡಳಿತದಿಂದ ನಗರದ ಬಿಕೆಡಿಬಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಿವಾಜಿ ಮಹಾರಾಜರ ಅವರ ಚರಿತ್ರೆ, ಆದರ್ಶವನ್ನು ಮಕ್ಕಳಿಗೆ, ಮುಂದಿನ ಪಿಳಿಗೆಗೆ ತಿಳಿಸಿಕೊಡುವ ಮೂಲಕ ಅವರಲ್ಲಿ ಸ್ಪೂರ್ತಿ ತುಬುವ ಕೆಲಸ ಅತ್ಯಾವಶ್ಯಕವಾಗಿದೆ ಎಂದರು.
ಪೌರಾಯುಕ್ತ ಮನೋಜಕುಮಾರ ಕಾಂಬಳೆ, ಕೆಕೆಎಂಪಿ ತಾಲೂಕು ಅಧ್ಯಕ್ಷ ವಿ.ಟಿ.ಸಿಂಧೆ ಉಪಸ್ಥಿತರಿದ್ದರು. ತಹಸೀಲ್ದಾರ ಶಾಂತಗೌಡ ಬಿರಾದಾರ ಸ್ವಾಗತಿಸಿದರು. ಶಿವಕುಮಾರ ಜಡಗೆ ನಿರೂಪಿಸಿದರು.
ಕಲ್ಯಾಣದಲ್ಲಿ ಭವ್ಯ ಮೆರವಣಿಗೆ
ಬಸವಕಲ್ಯಾಣ: ಛತ್ರಪತಿ ಶಿವಾಜಿ ಮಹಾರಾಜರ ಜಯಂತೋತ್ಸವದ ನಿಮಿತ್ತ ತಾಲೂಕು ಆಡಳಿತ ಹಾಗೂ ಮರಾಠಾ ಸಮಾಜದಿಂದ ನಗರದ ಕೋಟೆಯಿಂದ ಗಾಂಧಿ, ಬಸವ, ಅಂಬೇಡ್ಕರ್ ವೃತ್ತಗಳ ಮೂಲಕ ಮುಖ್ಯರಸ್ತೆ ಮಾರ್ಗವಾಗಿ ಶಿವಾಜಿ ಪಾರ್ಕ್ ವರೆಗೆ ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರದ ಭವ್ಯ ಮೆರವಣಿಗೆ ಸಾಂಸ್ಕøತಿಕ ವೈಭವದೊಂದಿಗೆ ಜರುಗಿತು. ಪ್ರಮುಖ ವೃತ್ತಗಳಲ್ಲಿ ಮಹಾತ್ಮರ, ಮಹಾಪುರುಷರ ಮೂರ್ತಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು.
ಶಾಸಕ ಸಲಗರ, ಮಾಜಿ ಶಾಸಕ ಎಂ.ಜಿ.ಮುಳೆ, ಮಾಜಿ ಎಂಎಲ್ಸಿ ವಿಜಯಸಿಂಗ್, ತಹಸೀಲ್ದಾರ ಶಾಂತಗೌಡ ಬಿರಾದಾರ, ಪೌರಾಯುಕ್ತ ಮನೋಜಕುಮಾರ ಕಾಂಬಳೆ, ಧನರಾಜ ತಾಳಂಪಳ್ಳಿ, ಶಾಂತಪ್ಪ ಪಾಟೀಲ್, ವಿಟಿ ಸಿಂಧೆ, ಅನೀಲಕ ಭೂಸಾರೆ, ಸಿಪಿಐ ಅಲಿಸಾಬ, ಸಿಪಿಐ ಕೃಷ್ಣಕುವiರ ಪಾಟೀಲ್ , ಪಿಎಸ್‍ಐ ಅಂಬ್ರಿಷ್ ವಾಘಮೋಡೆ, ರವೀಂದ್ರ ಬೋರಾಳೆ, Àದೀಪಕ ಗಾಯಕವಾಡ, ಯುವರಾಜ ಭೆಂಡೆ, ಬಾಬುರಾವ ಹಿಂಸೆ, ಮಾಧವರಾವ ಹಾಸೂರೆ, ಅಜಿಕ್ಯ ಮುಳೆ, ಸೂರ್ಯಕಾಂತ ಚಿಲ್ಲಾಬಟ್ಟೆ, ರಾಜು ಪಾಟೀಲ್, ಕೃಷ್ಣಾ ಗೋಣೆ, ಸಂದೀಪ ಬುಯೆ, ರಾಜು ಭೋಸಲೆ, ಸದಾನಂದ ಬಿರಾದಾರ,, ಶಂಕರ ನಾಗದೆ ಪ್ರಮುಖರು ಅಧಿಕಾರಿಗಳು ಭಾಗವಹಿಸಿದ್ದರು.
ಶರಣು ಸಲಗರ, ವಿಜಯಸಿಂಗ್ ಪ್ರಮುಖರೊಂದಿಗೆ ಜೋರ್ದಾರ ಡ್ಯಾನ್ ಮಾಡುವ ಮೂಲಕ ಯುವಕರಿಗೆ ಜೋಷ್ ತುಂಬಿದ್ದು, ಗಮನ ಸೆಳೆಯಿತು