ಕಲ್ಯಾಣಚಾಲುಕ್ಯರ ಕಾಲದ ಚಂಡರಿಕಿ ಕೋಟೆ

ಗುರುಮಠಕಲ್ ಸೆ 24: ತಾಲೂಕು ಕೇಂದ್ರ ಗುರುಮಠಕಲ್ ನಿಂದ ಪೂರ್ವ ಕ್ಕೆ ಸುಮಾರು 6 ಕಿ.ಮಿ.ದೂರದಲ್ಲಿರುವ ಪುಟ್ಟ ಗ್ರಾಮ ಚಂಡರಿಕಿ. ಗ್ರಾಮ ದೇವತೆಯ ದೇವಸ್ಥಾನದ ಮುಂಭಾಗದ ಮಣ್ಣಿನ ರಸ್ತೆಯ ಮೂಲಕ ಸುಮಾರು ಎರಡು ನೂರು ಮೀಟರ್ ಕ್ರಮಿಸಿದಾಗ ಪುರಾತನ ಬೃಹತ್ ಕೋಟೆ ಯೊಂದು ನಮ್ಮನ್ನು ಕೈಬೀಸಿ ಕರೆಯುತ್ತದೆ.ಇದು ಸುಮಾರು 100 ಎಕರೆ ವ್ಯಾಪ್ತಿಯಲ್ಲಿದ್ದು.ನೆಲದಿಂದ ಅರ್ಧ ದವರೆಗೆ ಕಾಡು ಕಲ್ಲು ಹಾಗೂ ಉಳಿದರ್ಧ ಭಾಗ ವನ್ನು ವಿಶೇಷ ಮಣ್ಣಿನಿಂದ ನಿರ್ಮಿಸಿ ಲಾಗಿರುವ ಸುಸಜ್ಜಿತ ವಾದ ಕೋಟೆಯಾಗಿದೆ.
ಕೋಟೆಗೆ ಪೂರ್ವ ದಿಕ್ಕಿನ ಲ್ಲಿ ಪ್ರವೇಶ ದ್ವಾರ ವಿದ್ದು ಉತ್ತರ ದಕ್ಷಿಣ ದಿಕ್ಕುಗಳಲ್ಲಿ ದಿಡ್ಡಿ (ಗುಪ್ತ) ದ್ವಾರ ಗಳಿವೆ. ಕೋಟೆಯಲ್ಲಿ ಇಲ್ಲಿಯವರೆಗೆ ಯಾವುದೇ ಶಾಸನಗಳ ಶೋಧ ವಾಗದಿರುವುದರಿಂದ ಈ ಕೋಟೆಯ ಸಂಪೂರ್ಣ ಇತಿಹಾಸ ವನ್ನು ನಿಖರವಾಗಿ ಅರಿತು ಕೊಳ್ಳಲು ಸಾಧ್ಯವಾಗಿಲ್ಲ. ಬಹುಶಃ ಕಲ್ಯಾಣ ಚಾಲುಕ್ಯರ ಕಾಲದಲ್ಲಿ ನಿರ್ಮಿಸಿರಬಹುದು ಎಂದು ಅಂದಾಜಿಸಲಾಗಿದೆ.ಪ್ರಾಚ್ಯವಸ್ತು ಇಲಾಖೆಯ ವರು ಮುತುವರ್ಜಿ ವಹಿಸಿ ಉತ್ಖನನ ಮಾಡಿದಾಗ ಮಾತ್ರ ನಿಖರವಾದ ಮಾಹಿತಿ ತಿಳಿಯಬಹುದಾಗಿದೆ.
ಸಿದ್ಧೇಶ್ವರ ದೇವಾಲಯ:
ಚಾಲುಕ್ಯ ವಾಸ್ತುಶಿಲ್ಪದ ಶೈಲಿಯಲ್ಲಿ ರುವ ಸಿದ್ದೇಶ್ವರ ದೇವಾಲಯ ಈ ಕೋಟೆಯ ಲ್ಲಿದ್ದು ಬಹುಶಃ ಇಲ್ಲಿ ವಾಸವಿದ್ದ ರಾಜರ ಕುಲದೇವರಾಗಿ ರಬಹುದು ಅಥವಾ ರಜರು ಈ ದೇವರ ಆರಾಧಕನಾಗಿರಬಹುದು. ದೇವಾಲಯವು ಮುಚ್ಚಿ ಹೋಗಿ ರುವ ಅಧಿಷ್ಠಾನ ದ ಮೇಲೆ ಸ್ಥಂಭ ಗಳ ಭಿತ್ತಿ. ಮುಖಮಂಟಪ. ನಂದಿ ಮಂಟಪ ಸುಖನಾಸಿ . ಗರ್ಭಗೃಹ ಹೊಂದಿದೆ.ಸುಮಾರು ಮೂರರಿಂದ ನಾಲ್ಕು ಅಡಿ ಎತ್ತರವಿರುವ ಬ್ರಹ್ಮ ಲಿಂಗವನ್ನು ಸಿದ್ಧೇಶ್ವರ ಎಂದು ಪೂಜಿಸುತ್ತಾರೆ. ಪುರಾತನ ಲಿಂಗವು ಶಿಥಿಲ ವಾಗಿರುವುದ ರಿಂದ ಅದರ ಸ್ಥಾನದಲ್ಲಿ ಬ್ರಹ್ಮ ಲಿಂಗದ ಪ್ರತಿರೂಪ ವಿಗ್ರಹವನ್ನು ಗ್ರಾಮ ಸ್ಥರು ಪ್ರತಿಷ್ಠಾ ಪಿಸಿದ್ದಾರೆ. ಲಿಂಗದ ವಿಷ್ಣು ಭಾಗದಲ್ಲಿರುವ ಜಲಹರಿ ಭಾಗ ಬಲಭಾಗಕ್ಕಿದೆ. ಪಶ್ಚಿಮಾಭಿಮುಖವಾಗಿ ರುವ ದೇವಾಲಯಗಳಲ್ಲಿ ಇಂತಹ ಬ್ರಹ್ಮ ಲಿಂಗವನ್ನು ಪಂಚಲೋಹಗಳಿಂದ ಮಾಡಿದ ನಾಗಶೇಷ ಆಭರಣದಿಂದ ಅಲಂಕೃತ ಗೊಳಿಸಲಾಗಿದೆ. ಗರ್ಭಗೃಹದ ಗರ್ಭ ಭಿತ್ತಿಯು ಸಾಧಾರಣವಾಗಿ ದ್ದು ದ್ವಾರ ಬಂಧವು ಸೂಕ್ಷ್ಮ ಕೆತ್ತನೆಯಿಂದ ಆಕರ್ಷಿತವಾಗಿದೆ. ಗರ್ಭಗೃಹದ ದ್ವಾರಬಂಧದ ಲಲಾಟದಲ್ಲಿ ಗಜಲಕ್ಷ್ಮೀಉಬ್ಬು ಶಿಲ್ಪ ವಿದೆ.ತ್ರಿಶೂಲ ಹಾಗೂ ಗಧಾದಾರಿ ದ್ವಾರ ಪಾಲಕರಿದ್ದಾರೆ.ಗರ್ಭ ಗೃಹ ಹಾಗೂ ಮುಖಮಂಟಪದ ಮಧ್ಯೆ ಸ್ಥಳಾ ವಕಾಶವಿದ್ದು ಭಕ್ತರು ಕುಳಿತು ಧ್ಯಾನ ಮಾಡಲು ಹಾಗೂ ದೇವರ ಅಲಂಕಾರ ವಸ್ತುಗಳನ್ನು ಇಡುವಂತ್ತಹ ಸ್ಥಳವಾಗಿದ್ದು ಸುಖನಾಸಿ ಎಂದು ಕರೆಯುತ್ತಾರೆ. ಗರ್ಭಗುಡಿ ಮತ್ತು ಸುಖನಾಸಿ ಪ್ರವೇಶಿಸಲು ಇನ್ನೊಂದು ದ್ವಾರವಿದ್ದು ದ್ವಾರದ ಲಲಾಟದಲ್ಲಿ ಬ್ರಹ್ಮ ವಿಷ್ಣು ಮಹೇಶ್ವರ ಉಬ್ಬು ಶಿಲ್ಪಗಳಿವೆ. ತ್ರಿಮೂರ್ತಿಗಳ ಇಕ್ಕೆಲಗಳಲ್ಲಿ ಗಜ ಅಲಂಕೃತ ವಾಗಿರುವ ಶಿಲ್ಪಗಳಿವೆ. ಮುಖ ಮಂಟಪದ ನಾಲ್ಕು ಅಲಂಕೃತ ಸ್ತಂಭಗಳ ಮಧ್ಯದಲ್ಲಿ ಚಿಕ್ಕ ದಾದ ಉಪ ಪೀಠವಿದ್ದು ಅದರ ಮೇಲೆ ಸುಮಾರು ಐದರಿಂದ ಆರು ಅಡಿ ಎತ್ತರದ ವಿಶೇಷ ಕುಸುರಿ ಕಲೆಯಿಂದ ನಿರ್ಮಿಸಲಾದ ನಂದಿ ವಿಗ್ರಹ ವಿದೆ. ನಿಧಿಗಳ್ಳರ ವಿಕೃತ ಕಾರ್ಯದಿಂದಾಗಿ ನಂದಿ ವಿಗ್ರಹ ದ ಕೆಲವು ಭಾಗವನ್ನು ಜಖಂ ಗೊಳಿಸಲಾಗಿದೆ. ಸಿದ್ದೇಶ್ವರ ದೇವಾಲಯ ಕ್ಕೆ ಶಿಥಿಲ ವಾದ ಮುಖ್ಯ ದ್ವಾರ ಮೂಲಕ ಪ್ರವೇಶಿಸಿದಾಗ ನಮಗೆ ಕಾಣಸಿಗುವ ಮೊದಲ ಭಾಗವೇ ಮುಖಮಂಟಪ. ಈ ಮುಖಮಂಟಪವು 16 ಸ್ತಂಭಗಳಿಂದ ನಿರ್ಮಿಸಲಾಗಿದ್ದು. ಈ ಸ್ತಂಭಗಳು ನಾಸಿ ಅಲಂಕಾರ. ಮಧ್ಯೆ ಪಟ್ಟಿ ವೃತ್ತ ವೇತ್ರದಿಂದ ಅಲಂಕೃತ ಗೊಂಡಿವೆ. ದೇವಾಲಯದ ಅಧಿಷ್ಠಾನ ಮಣ್ಣಿನಿಂದ ಮುಚ್ಚಿ ಹೋಗಿದ್ದು. ಗರ್ಭಗುಡಿ ಯ ಮೇಲೆ ವೇಸರ ಶೈಲಿಯಲ್ಲಿ ವಿಶಿಷ್ಟ ವಾದಂತಹ ಶಿಖರ ಕಂಡು ಬರುತ್ತದೆ. ಶಿಖರದ ಮೆಲ್ಭಾಗದಲ್ಲಿ ಗ್ರೀವ. ತುದಿ ಯಲ್ಲಿ ಕಳಶವನ್ನು ಕಾಣುತ್ತೇವೆ. ಕೋಟೆಯ ಮಹಾ ದ್ವಾರವು ಕಲ್ಲು ಹಾಗೂ ಗಾರೆಯನ್ನು ಬಳಸಿ ನಿರ್ಮಿಸಲಾಗಿದ್ದು ಸುಮಾರು 50 ರಿಂದ 60 ಅಡಿ ಎತ್ತರವಿದೆ. ಪ್ರವೇಶ ದ್ವಾರ ಮುಂಭಾಗದಲ್ಲಿ ಆಂಜನೇಯ. ನಾಗದೇವತೆ ಮತ್ತು ಗಣೇಶನ ವಿಗ್ರಹ ಗಳಿವೆ. ಪ್ರವೇಶ ದ್ವಾರ ಕ್ಕೆ ಹೊಂದಿದ ಭಿತ್ತಿಗೆ ಹೊಂದಿಕೊಂಡು ಚಿಕ್ಕ ಗುಡಿ ಇದ್ದು ಕೋಟೆ ಗೆ ಯಾವುದೇ ಕ್ಷುದ್ರ ಶಕ್ತಿಗಳಿಂದ. ಬರಹುದಾದ ತೊಂದರೆ ಗಳನ್ನು ನಿವಾರಿಸಲು ರಾಜರು ಶಕ್ತಿದೇವತೆಯಾದ ಪೆÇೀಶಮ್ಮ ದೇವಿಯ ನ್ನು ಪ್ರತಿ ಷ್ಠಾಪಿಸಿದ್ದಾರೆ . ಕೋಟೆಯ ಪ್ರವೇಶ ದ್ವಾರ ದ ಎಡಭಾಗದಲ್ಲಿ ಚಿಕ್ಕ ಪ್ರವೇಶ ದ್ವಾರ ವಿದ್ದು ಬಹುಶಃ ಪಹರೆ ಕಾಯುವ ವರು ಈ ದ್ವಾರ ವನ್ನು ಬಳಸುತ್ತಿದ್ದರೆಂದು ಊಹಿಸಬಹುದು. ಕೋಟೆಯ ಪ್ರವೇಶ ದ್ವಾರ ದಿಂದ ಮುಂದೆ ನಡೆದಾಗ ನಮ್ಮ ಎಡಭಾಗದಲ್ಲಿ ಕೋಟೆಯ ಶಕ್ತಿ ದೇವತೆ ಯಾದ ಮಹಿಶಮ್ಮ(ಮಹೇಶ್ವರಿ) ನ ಶಿಥಿಲ ದೇವಾಲಯ ವಿದು ಮೂಲ ವಿಗ್ರಹ ಭಿನ್ನ ವಾಗಿರುವುದ ರಿಂದ ಗ್ರಾಮಸ್ಥರು ಮೂಲವಿಗ್ರಹ ದ ಪ್ರತಿ ರೂಪವನ್ನು ಪ್ರತಿಷ್ಠಾಪಿಸಿದ್ದಾರೆ. ಮೂಲವಿಗ್ರಹ ಕೂಡ ಸ್ಥಳ ದಲ್ಲಿದ್ದು ಕಪ್ಪು ಕಲ್ಲಿನ ಶಿಲ್ಪಿಯು ದೇವಿಯ ಮುಖ ದ ಭಾವ ಭಂಗಿ ಯನ್ನು ಮಾತ್ರ ರಚಿಸಿದ್ದಾನೆ.ಅಗಲವಾದ ಕಣ್ಣುಗಳು ನೀಳವಾದ ಮೂಗು ನಿರ್ಲಿಪ್ತ ಭಾವನೆಯ ನ್ನು ಪುರಾತನ ಶಿಲಾ ವಿಗ್ರಹ ವ್ಯಕ್ತಪಡಿಸುತ್ತದೆ.
ಕೋಟೆಯ ಬಾವಿಗಳು
ರಾಜ ಕುಟುಂಬವೂಂದು ವ್ಯವಸ್ಥಿತವಾಗಿ ವೈ ಭವ ಪೂರಿತವಾಗಿ ವಾಸವಿರಲು ಇರಬಹುದಾದ ಎಲ್ಲಾ ಸೌಲಭ್ಯಗಳನ್ನು ಪುರಾತನ ಬೃಹತ್ ಕೋಟೆಯ ಲ್ಲಿ ಕಾಣಬಹುದಾಗಿದೆ. ಇಲ್ಲಿ ರಾಜ ರಾಣಿ ಹಾಗೂ ಸೈನಿಕರಿಗೆ ಪ್ರತ್ಯೇಕ ವಾದ ಬಾವಿಗಳನ್ನು ನಿರ್ಮಿಸಿ ದ್ದಾರೆ. ಸೈನಿಕರ ಬಾವಿಯು ತೋಪಿನ ಕಟ್ಟಡದ ಹತ್ತಿರ ವಿದ್ದು .ರಾಜರ ಬಾವಿಯ ಹತ್ತಿರ ರಾಜ ಪ್ರಮುಖ ವಿಶ್ರಾಂತಿ ಸಲು ಅಥವಾ ಚದುರಂಗದಂತಹ ಕ್ರೀಡೆಗಳನ್ನು ಆಡಲು ಗಾಡಿಯಿಂದ ಮಂಟಪ ವನ್ನು ನಿರ್ಮಿಸಿ ದ್ದಾರೆ. ರಾಣಿಯ ರ ಬಾವಿಯು ರಾಜ ಕುಟುಂಬದ ವರು ವಾಸ ಮಾಡಿರಬಹುದಾದ ಪ್ರದೇಶದಲ್ಲಿ ಕಂಡುಬರುತ್ತದೆ. ವಿಶೇಷ ವಾಗಿ ರಾಣಿಯ ರು ಬಳಸಿದ ನೀರು ಹೊರ ಹೋಗಲು ಗುಪ್ತವಾದ ಒಳಚರಂಡಿ ವ್ಯವಸ್ಥೆ ಇದೆ. ಕೋಟೆಯ ಲ್ಲಿ ರಾಜ ರು ವಾಸ ಮಾಡಿರಬಹುದಾದ ಸ್ಥಳಗಳು ಮಣ್ಣಿನಿಂದ ಸಂಪೂರ್ಣ ವಾಗಿ ಮುಚ್ಚಲ್ಪಟ್ಟಿವೆ.ಕೋಟೆಯು ತುಂಬಾ ರಕ್ಷಣಾತ್ಮಕ ರೀತಿಯಲ್ಲಿ ನಿರ್ಮಿಸ ಲಾಗಿದ್ದು ಸುಮಾರು 60 ರಿಂದ 70 ಕಡೆ ಸೈನಿಕರು ಪಹರೆ ಕಾಯುವ ಸ್ಥಳ ಗಳನ್ನು ಕೋಟೆಯ ಲ್ಲಿ ಕಾಣಬಹುದು. ಶತ್ರು ಸೈನಿಕರ ಮೇಲೆ ದಾಳಿ ಮಾಡಲು ಬಳಸುವಂತಹ ತೋಪನ್ನು ಈಗಲೂ ಇಲ್ಲಿ ಕಾಣಬಹುದು. ಸುದೀರ್ಘ ಇತಿಹಾಸ ಹಲವು ಕೂತೂಹಲ ಗಳನ್ನು ಕೋಟೆಯು ತನ್ನೊಡಲಲ್ಲಿ ಇಟ್ಟು ಕೊಂಡಿದ್ದು ಕೋಟೆ ಯನ್ನು ಸುತ್ತಾಡುತ್ತಿರುವಾಗ ಪ್ರತಿ ಕಲ್ಲುಗಳು ಮೂಕವಾಗಿ ನಮಗೆ ಏನೋ ಸಂದೇಶ ನೀಡುತ್ತಿವೆ ಎಂದು ಭಾವನೆ ಮೂಡುತ್ತದೆ. ಸಮಯ ಮಾಡಿಕೊಂಡು ಒಮ್ಮೆ ಯಾದರು ಐತಿಹಾಸಿಕ ಕೋಟೆ ಗೆ ಭೇಟಿ ನೀಡಿ ಪುರಾತನ ಶಿಲ್ಪಗಳ ಮಾತಿಗೆ ಕಿವಿಯಾಗಿ.

ಚಂದ್ರಕಾಂತ.ಸಿ.ಆರ್.ಪಿ. ಚಪೇಟ್ಲಾ. (ತಾಲೂಕು ಗುರುಮಠಕಲ್)