ಕಲ್ಮಠದ ಮಹಾಸ್ವಾಮಿಗಳಿಗೆ ಅನಾರೋಗ್ಯ ಖಾಸಗಿ ಆಸ್ಪತ್ರೆಗೆ ದಾಖಲು

ಮಾನ್ವಿ,ಮಾ. ೧೭ – ರಾಜ್ಯದ ಸುಪ್ರಸಿದ್ಧ ಸಾವಿರಾರು ಭಕ್ತ ಕುಟುಂಬಸ್ಥರನ್ನು ಹೊಂದಿರುವ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆಗೈದು ಲಕ್ಷಾಂತರ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿರುವ ಶಿಕ್ಷಣ ಪ್ರೇಮಿಗಳು ಹಾಗೂ ಧರ್ಮ ಕಾರ್ಯದ ಮುಂಚೂಣಿ ಮಹಾಸ್ವಾಮಿಗಳಾದ ಶ್ರೀ ಷ ಬ್ರ ಡಾ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳಿಗೆ ಕಳೆದ ನಾಲ್ಕೈದು ದಿನಗಳಿಂದ ಅನಾರೋಗ್ಯ ಕಾಡುತ್ತಿದ್ದು ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅನೇಕ ಗಣ್ಯರು ಆಗಮಿಸಿ ಪೂಜ್ಯರ ಆರೋಗ್ಯ ವಿಚಾರಣೆ ಮಾಡುತ್ತಿದ್ದಾರೆ.
ಪಟ್ಟಣದಲ್ಲಿ ಕಲ್ಮಠದ ಮಠ ಸಹಯೋಗದೊಂದಿಗೆ ಪ್ರಾಥಮಿಕ, ಪ್ರೌಢ, ಕಾಲೇಜು, ಆಯುರ್ವೇದ ಕಾಲೇಜು ನಿರ್ಮಾಣ ಮಾಡಿ ಸಾವಿರಾರು ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿರುವ ಇವರಿಗೆ ಕಳೆದ ವಾರದಿಂದ ಉಸಿರಾಟದ ತೊಂದರೆ, ಹೃದಯ ಸಂಬಂಧಿ ಕಾಯಿಲೆಗೆ ತುತ್ತಾಗಿ ರಾಯಚೂರಿನ ಬೆಟ್ಟದೂರು ಆಸ್ಪತ್ರೆಯಲ್ಲಿ ಕಳೆದ ಎರಡು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು ಆದರೆ ಅವರಿಗೆ ಮಠದ ಭಕ್ತಾದಿಗಳ ಬೇಟಿ ಮಾಡುವ ಉದ್ದೇಶದಿಂದ ಮಾನ್ವಿಗೆ ಆಗಮಿಸಿದ್ದಾರೆ ಆದರೆ ನಿನ್ನೆ ರಾತ್ರಿ ತೀವ್ರ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾತಿ ಚಿಕಿತ್ಸೆ ಪಡೆಯುತ್ತಿರುವ ವಿಷಯ ತಿಳಿದು ಶಾಸಕ ವೆಂಕಟಪ್ಪ ನಾಯಕ, ಮಾಜಿ ಶಾಸಕ ಜಿ. ಹಂಪ್ಪಯ್ಯ ನಾಯಕ, ಬಳಗನೂರು ಶ್ರೀಗಳು, ರಾಯಚೂರಿನ ಶ್ರೀಗಳು, ನಿಲೋಗಲ್ ಶ್ರೀಗಳು, ತೆಕ್ಕಲಕೊಟ್ಟೆ ಶ್ರೀಗಳು, ಶಂಕ್ರಯ್ಯ ಸ್ವಾಮಿ ಸುವರ್ಣಗಿರಿ ಮಠ, ಡಾ ಚಂದ್ರಶೇಖರಯ್ಯ ಸ್ವಾಮಿ ವೈದ್ಯಕೀಯ ಅಧಿಕಾರಿಗಳು, ಕಲ್ಮಠ ಶಾಲೆ ಕಾಲೇಜಿನ ಸಿಬ್ಬಂದಿಗಳು, ಕುಟುಂಬಸ್ಥರು, ಸೇರಿದಂತೆ ಸಾವಿರಾರು ಭಕ್ತರು ಆಗಮಿಸುತ್ತಿದ್ದಾರೆ.