ಕಲ್ಮಂಗಿ ಗ್ರಾ.ಪ ಕಛೇರಿಗೆ ಬೀಗ ಕೆಲಸಕ್ಕಾಗಿ ಜನರ ಪರದಾಟ

ಸಿಂಧನೂರು,ಜೂ.೦೩-
ಜನರಿಗೆ ಸದಾ ಹತ್ತಿರ ಇದ್ದು ಸರ್ಕಾರದ ಸೌಲಭ್ಯ ಒದಗಿಸಬೇಕಾದ ಗ್ರಾಮ ಪಂಚಾಯಿತಿಯ ಬಾಗಿಲು ತೆರೆಯದೆ ಬಾಗಿಲು ಮುಚ್ಚಿದ್ದು ಇದರಿಂದ ಸಾರ್ವಜನಿಕರ ಯಾವುದೆ ಕೆಲಸ ಕಾರ್ಯಗಳು ಆಗುತ್ತಿಲ್ಲ ಎಂದು ಸಾರ್ವಜನಿಕರ ಆರೋಪಿಸಿದ್ದಾರೆ.
ತಾಲ್ಲೂಕಿನ ಕಲ್ಮಂಗಿ ಗ್ರಾಮ ಪಂಚಾಯ್ತಿ ಪಿಡಿಒ ಹಾಗೂ ಸಿಬ್ಬಂದಿಗಳು ದಿನಾಲು ಕಛೇರಿಗೆ ಬಂದು ಸಾರ್ವಜನಿಕರ ಕೆಲಸ ಮಾಡುವ ಬದಲು ಪಂಚಾಯಿತಿಗೆ ಬಾರದೆ ಮನೆಯಲ್ಲಿ ಇರುತ್ತಾರೆ ಪಿಡಿಒ ಬಂದರೆ ಮಾತ್ರ ಕಛೇರಿಗೆ ಬರುವ ಇತರ ಸಿಬ್ಬಂದಿಗಳು ಪಿಡಿಒ ಪಂಚಾಯ್ತಿಗೆ ಬಾದರೆ ಇರುವುದರಿಂದ ಸಿಬ್ಬಂದಿಗಳು ಸಹ ಕೆಲಸಕ್ಕೆ ಬಾರದೆ ಗೈರು ಹಾಜರಾದ ಕಾರಣ ಮುಚ್ಚಿದ ಪಂಚಾಯ್ತಿ ಕಛೇರಿಯ ಬಾಗಿಲು ಬೀಗ ಹಾಕಿದ್ದು ಕಂಡು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾ.ಪ ವ್ಯಾಪ್ತಿಯಲ್ಲಿ ಬರುವ ಹಲವು ಗ್ರಾ.ಪಂ.ಗಳಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳು ಆಗುತ್ತಿಲ್ಲ ಕೆಲಸ ಮಾಡಿ ಕೊಡುವಂತೆ ದೂರು ನೀಡಿದರು. ಸಹ ಪಿಡಿಒ ಸರಿಯಾಗಿ ಸ್ಪಂದಿಸುತ್ತಿಲ್ಲ ಕೆಲಸ ಮಾಡಿ ಕೊಡಿ ನಮಗೆ ತೊಂದರೆ ಯಾಗಿದೆ ಎಂದರೆ ಪಿಡಿಒ ಉದ್ಗಟನೆ ತೋರುತ್ತಾರೆ ಪಂಚಾಯ್ತಿಗೆ ಹೋದರೆ ಪಂಚಾಯಿತಿಯಲ್ಲಿ ಇರುವದಿಲ್ಲ ಉಳಿದ ಸಿಬ್ಬಂದಿಗಳಿಗೆ ಹೇಳೋಣ ಎಂದು ಹೋದರೆ ಪಂಚಾಯಿತಿ ಬಾಗಿಲು ಸದಾ ಮುಚ್ಚಿರುತ್ತದೆ ನಮ್ಮ ಕಷ್ಟ ಯಾರ ಮುಂದೆ ಹೇಳೊಣ ಹಳ್ಳಿಗಳಲ್ಲಿ ಗಟಾರ ಸ್ವಚ್ಛತೆ ಮಾಡದೆ ಇರುವುದರಿಂದ ಗಬ್ಬುವಾಸನೆ ಬರುತ್ತಿದೆ ಎಂದು ಚನ್ನಬಸಪ್ಪ ತಂದೆ ಪಂಪಾ ರೆಡ್ಡೆಪ್ಪ ಹತ್ತಿಗುಡ್ಡ ತಮ್ಮ ಅಳನ್ನು ತೊಡಿಕೊಂಡರು.
ಮುಚ್ಚಿದ ಪಂಚಾಯ್ತಿ ಬಾಗಿಲು ತೆಗೆದು ಸಾರ್ವಜನಿಕರ ಕೆಲಸ ಮಾಡುವಂತೆ ಪಿಡಿಒ ಹಾಗೂ ಸಿಬ್ಬಂದಿಗಳಿಗೆ ಕಟ್ಟುನಿಟ್ಟಿನ ಆದೇಶ ಮಾಡುವ ಮೂಲಕ ಕೆಲಸಕ್ಕೆ ಬಾರದೆ ಕಛೇರಿಯ ಬೀಗ ಹಾಕಿ ಸಾರ್ವಜನಿಕರ ಕೆಲಸ ಕಾರ್ಯ ಗಳಿಗೆ ಅಡೆ ತಡೆ ಮಾಡಿದ ಪಿಡಿಒ ಸವಿತಾ ಹಾಗೂ ಇತರ ಪಂಚಾಯ್ತಿ ಸಿಬ್ಬಂದಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಚನ್ನಬಸಪ್ಪ ಹತ್ತಿ ಗುಡ್ಡ ತಾಲುಕಾ ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಗಳಿಗೆ ದೂರು ನೀಡಿ ಒತ್ತಾಯಿಸಿದ್ದಾರೆ.
ತಾಲುಕಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮೀದೇವಿ ಕೂಡಲೆ ಪಂಚಾಯ್ತಿಗೆ ಬೇಟಿ ನೀಡಿ ಅಧಿಕಾರಿಗಳ ಮೇಲೆ ಕ್ರಮ ಕೈಗೊಂಡು ಸಾರ್ವಜನಿಕರ ಕೆಲಸ ಕಾರ್ಯಗಳು ಸುಗಮವಾಗಿ ನಡೆಯುವಂತೆ ಮಾಡಬೇಕು ಎಂದು ಸಾರ್ವಜನಿಕರು ಅಗ್ರಹ ಪಡಿಸಿದ್ದಾರೆ.