ಕಲ್ಬುರ್ಗಿ ಶಾಸಕರಿಗೆ ಮಂತ್ರಿ ಸ್ಥಾನ ನೀಡಲು ಆಗ್ರಹ

ಕಲಬುರಗಿ:ಮೇ.18:2023 ವಿಧಾನಸಭಾ ಚುನಾವಣೆಯಲ್ಲಿ ಕಲ್ಬುರ್ಗಿ ಜಿಲ್ಲೆಗೆ ಹೆಚ್ಚು ಶಾಸಕರು ಆಯ್ಕೆ ಆಗುವ ಮುಖಾಂತರ ಕಾಂಗ್ರೆಸ್ ಗೆ ಹೆಚ್ಚಿನ ಬಲ ಬಂದಿದ್ದು ಕಲ್ಬುರ್ಗಿ ಜಿಲ್ಲೆಯವರಿಗೆ ಮಂತ್ರಿ ಸ್ಥಾನ ನೀಡಿದರೆ ಕಲ್ಬುರ್ಗಿ ಸಮಗ್ರ ಅಭಿವೃದ್ಧಿ ಸಾಧ್ಯ ಎಂದು
ವಿಶ್ವಕರ್ಮ ಯುವ ಜಾಗೃತಿ ವೇದಿಕೆ ಅಧ್ಯಕ್ಷರಾದ ಶ್ರೀ ಮಾರುತಿ ಕಮ್ಮಾರ್ ಅವರು
ಕಾಂಗ್ರೆಸ್ ವರಿಷ್ಠರಲ್ಲಿ ಮನವಿ ಮಾಡಿಕೊಂಡಿದ್ದಾರೆ
ಕಳೆದ ಬಿಜೆಪಿ ಅವಧಿಯಲ್ಲಿ ಕಲ್ಬುರ್ಗಿ ಜಿಲ್ಲೆಯಿಂದ ಐದು ಶಾಸಕರು ಆಯ್ಕೆ ಆಗಿದ್ದರೂ ಕೂಡ ಒಬ್ಬರಿಗೂ ಸಚಿವ ಸ್ಥಾನ ನೀಡಿರಲಿಲ್ಲ
ಹೀಗಾಗಿ ಕಲ್ಬುರ್ಗಿ ಅಭಿವೃದ್ಧಿಯಲ್ಲಿ ಕುಂಟಿ ತೊಗೊಂಡಿದ್ದು ಹಾಗೂ ಕಲ್ಯಾಣ ಕರ್ನಾಟಕ ಹಿಂದುಳಿದ ಪ್ರದೇಶವಾಗಿರುತ್ತದೆ. ಫ್ಯಾಕ್ಟರಿ ತರಬೇಕು ಇಲ್ಲಿನ ಜನರಿಗೆ ಮತ್ತು ಡಿಗ್ರಿ ಮುಗಿಸಿದ ಯುವಕರಿಗೆ ಅನುಕೂಲವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.