ಕಲ್ಬುರ್ಗಿ ದೇಶದ ಗಮನ ಸೆಳೆದಿರುವ ಕ್ಷೇತ್ರ: ನಾಗೇಂದ್ರ


(ಸಂಜೆವಾಣಿ ವಾರ್ತೆ)
ಗುಲ್ಬರ್ಗ, ಡಿ.21: ಮುಂಬರುವ 2024 ರ  ಲೋಕಸಭಾ ಚುನಾವಣೆಗೆ   ಕಲ್ಬುರ್ಗಿ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳ ಸಭೆ  ಖಾಸಗಿ ಹೊಟೇಲ್ ನಲ್ಲಿ ನಿನ್ನೆ ನಡೆಯಿತು.
ಈ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಿಂದ  ವೀಕ್ಷಕರಾಗಿ ಆಗಮಿಸಿದ್ದ  ಪರಿಶಿಷ್ಟ ಪಂಗಡಗಳ ಕಲ್ಯಾಣ  ಸಚಿವ ಬಿ.ನಾಗೇಂದ್ರ,  ಲೋಕಸಭಾ  ಚುನಾವಣೆಗೆ ಸೂಕ್ತ ಅಭ್ಯರ್ಥಿ ಯನ್ನ ಆಯ್ಕೆ ಮಾಡಲು ರಾಜ್ಯದ 28  ಕ್ಷೇತ್ರಗಳಲ್ಲೂ ಇದೇ ತರಹದ ಪ್ರಕ್ರಿಯೆ ನಡೆಯುತ್ತಿದೆ. ಕೆಪಿಸಿಸಿ ನಿರ್ದೇಶನದ ಮೇರೆಗೆ ಕಲ್ಬುರ್ಗಿ ಲೋಕಸಭಾ ಕ್ಷೇತ್ರದ ವೀಕ್ಷಕರಾಗಿ ಅಗಮಿಸಿ ಅಭಿಪ್ರಾಯಗಳನ್ನ ಸಂಗ್ರಹಿಸಿ ಹೈಕಮಾಂಡ್ ಗೆ ನಾನು ವರದಿ ಸಲ್ಲಿಸಲಿರುವೆ,ಇಲ್ಲಿನ‌ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ಇತರೆ ಶಾಸಕರು ಸಮರ್ಥರಿದ್ದು.  ಹೆಚ್ಚಿನ ಬಹುಮತದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನ ಗೆಲ್ಲಿಸುತ್ತೇರೆಂಬ ವಿಶ್ವಾಸವಿದೆ. ಹಾಗೆಯೇ ದೇಶ ಕಂಡ ಮಹಾನ್ ನಾಯಕರು,ಹಿರಿಯ ಮುತ್ಸದ್ದಿ, ಎಐಸಿಸಿ ಅಧ್ಯಕ್ಷ  ಮಲ್ಲಿಕಾರ್ಜುನ ಖರ್ಗೆ  ಅವರು ಪ್ರತಿನಿಧಿಸುವ ಕ್ಷೇತ್ರ ಇದಾಗಿರುವುದರಿಂದ ಕಲ್ಬುರ್ಗಿ ಇಡೀ ದೇಶದ ಗಮನ ಸೆಳೆದಿದೆ.  ಪ್ರಧಾನಿ ನರೇಂದ್ರ ಮೋದಿಯವರು ಈ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ,ಇಲ್ಲಿ ಪಾಲಿಕೆ ಚುನಾವಣೆ ಗೆದ್ದದ್ದನ್ನೆ ಮದ್ಯಪ್ರದೇಶ ಚುನಾವಣೆಯಲ್ಲಿ ಪ್ರಸ್ಥಾಪಿಸಿದ್ದಾರೆ. ಅಂದರೆ ಖರ್ಗೆ ಅವರ ಕ್ಷೇತ್ರದಲ್ಲೆ ಒಡಕುಂಟು ಮಾಡಲು ಹವಣಿಸುತ್ತಿದ್ದಾರೆ ಹಾಗಾಗಿ ನಾವೆಲ್ಲರು ಒಗ್ಗಟ್ಟಾಗಿ ಮುಂಬರಲಿರುವ ಲೋಕಸಭಾ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕಾಗಿದೆಂದರು.
ಸಭೆಯಲ್ಲಿ   ಸಚಿವರಾದ ಪ್ರಿಯಾಂಕ್ ಖರ್ಗೆ. ಶರಣು ಪ್ರಕಾಶ್ ಪಾಟೀಲ್.
ಶಾಸಕರುಗಳಾದ ಎನಮ.ವೈ.ಪಾಟೀಲ್.ಅಲ್ಲಂ ಪ್ರಭು ಪಾಟೀಲ್.ಖನಿಜ್ ಫಾತೀಮಾ.
ಬಿ.ಆರ್.ಪಾಟೀಲ್.
ತಿಪ್ಪಣ್ಣಪ್ಪ ಕಮಕ್ ನೂರ್. ಪಕ್ಷದ ಜಿಲ್ಲಾ ಅಧ್ಯಕ್ಷ ಜಗದೇವ್ ಗುತ್ತೇದಾರ್,   ಮುಖಂಡರಾದ ಶುಭಾಷ್ ರಾಥೋಡ್ ಸೇರಿದಂತೆ ಇತರರು ಇದ್ದರು.