ಕಲ್ಬುರ್ಗಿಗೆ ಏಮ್ಸ್ ಬೇಡಿಕೆ, ಬಾಬುರಾವ್ ಖಂಡನೆ

ರಾಯಚೂರು,ಜೂನ್.೦೭-
ಕಲ್ಬುರ್ಗಿ ಜಿಲ್ಲೆಗೆ ಏಮ್ಸ್ ಬೇಕು ಎಂದು ವೈದ್ಯಕೀಯ ಶಿಕ್ಷಣ ಮಂತ್ರಿ ಶರಣ ಪ್ರಕಾಶ ಪಾಟೀಲ್ ಕೇಳಿರುವುದು ಖಂಡನೀಯ ಎಂದು ಎಪಿಎಂಸಿ ಮಾಜಿ ಉಪಾಧ್ಯಕ್ಷ, ಬಿಜೆಪಿ ಉಪಾಧ್ಯಕ್ಷ ಬಾಬುರಾವ್ ಎಂದು ಹೇಳಿದರು.
ಏಮ್ಸ್ ರಾಯಚೂರ ಜಿಲ್ಲೆಗೆ ಸಿಗಬೇಕು.
ಬಹು ದಿನದ ಬೇಡಿಕೆ ಮತ್ತು ಹೋರಾಟ ಮಾಡಲಾಗಿದೆ. ಏಮ್ಸ್ ರಾಯಚೂರ ಜಿಲ್ಲೆಗೆ ಏಕೆ ಸಿಗಬೇಕು ಎಂಬ ಬಲವಾದ ಕಾರಣಗಳು ಮತ್ತು ಮಾಹಿತಿಯನ್ನು ಸರ್ಕಾರಕ್ಕೆ ಕೊಡಲಾಗಿದೆ. ಇಷ್ಟಿದ್ದರೂ, ಸಚಿವ ಶರಣ ಪ್ರಕಾಶ ಪಾಟೀಲ್ ಅವರು ಕಲ್ಬುರ್ಗಿಗೆ ಕೇಳುತ್ತಿರುವುದು ಸರಿಯಾದ ನಿಲುವಲ್ಲ.ಈಗಾಗಲೇ ರಾಯಚೂರನಿಂದ ಕೈತಪ್ಪಿ ಐಐಟಿ ಧಾರವಾಡಕ್ಕೆ ಹೋಯಿತು. ರಾಷ್ಡ್ರೀಯ ಜವಳಿ ಪಾರ್ಕ ಕಲ್ಬುರ್ಗಿ ಪಾಲಾಯಿತು.ಈಗ ಏಮ್ಸ್ ರಾಯಚೂರಗೆ ನ್ಯಾಯಯುತವಾಗಿ ಸಿಗಲೇಬೇಕು. ಇಲ್ಲಿ ನೀತಿ ಆಯೋಗದ ಪ್ರಕಾರ, ನಂಜುಂಡಪ್ಪ ವರದಿ ಅನುಸಾರ ಸಂವಿಧಾನ ಪರಿಚ್ಛೇದ ೩೭೧(ರಿ) ಪ್ರಕಾರ ರಾಯಚೂರ ಜಿಲ್ಲೆಗೆ ಸಿಗಬೇಕು.
ಈ ನಿಟ್ಟಿನಲ್ಲಿ ಹಿಂದುಳಿದ ರಾಯಚೂರ ಜಿಲ್ಲೆಯಿಂದ ಸಣ್ಣ ನೀರಾವರಿ ಸಚಿವರಾದ ಎನ್.ಎಸ್.ಬೋಸರಾಜ ಅವರು ಈ ವಿಷಯದಲ್ಲಿ ಅತೀವ್ ಮುತೂವರ್ಜಿ ವಹಿಸಬೇಕು.ಹಲವಾರು ವರ್ಷಗಳ ಅನುಭವ ಬಳಸಿಕೊಂಡು ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕಿ ಏಮ್ಸ್ ರಾಯಚೂರುಗೆ ಮಂಜೂರಾಗುವಂತೆ ನೋಡಿಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.