ಕಲೋತ್ಸವದಲ್ಲಿ ತೃತೀಯ ಸ್ಥಾನ

ಕಲಬುರಗಿ, ನ 9: ಜಿಲ್ಲಾ ಪಂಚಾಯತ್,ಶಾಲಾಶಿಕ್ಷಣ ಇಲಾಖೆ, ಸಮೂಹ ಸಂಪನ್ಮೂಲ ಕೇಂದ್ರ ಎಂ ಬಿ. ನಗರ ಕಲಬುರ್ಗಿ ಉತ್ತರ ವಲಯ ವತಿಯಿಂದ ಇತ್ತೀಚೆಗೆ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮದಲ್ಲಿ ವಿಕಾಸ್ ಇಂಗ್ಲಿಷ್ ಮೀಡಿಯಂ ಸ್ಕೂಲಿನ 8 ನೇ ತರಗತಿಯ ವಿದ್ಯಾರ್ಥಿನಿ ಸ್ಪೂರ್ತಿ ಶಿವಕುಮಾರ್ ಅವರು ಭಾವಗೀತೆಯಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.