ಕಲೆ, ಸಾಹಿತ್ಯ, ಹಾಡುಗಾರ, ನೊಂದವರ ಧ್ವನಿಯಾಗಲಿ

ಕೋಲಾರ, ಜೂ.೨೮: ಕಲೆ, ಸಾಹಿತ್ಯ, ಹಾಡುಗಾರ ಯಾವತ್ತು ಜನ ಸಾಮಾನ್ಯರ ನೊಂದವರ ಧ್ವನಿಯಾಗಿ ಇರಬೇಕು ಎಂದು.ಸಾಮಾಜಿಕ ಚಿಂತಕ ,ಹಾಡುಗಾರ ಗೊಲ್ಲಳ್ಳಿ ಶಿವಪ್ರಸಾದ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಆಯೋಜಿಸಿದ್ದ ಕರುನಾಡ ಹಾಡುಗಾರರ ಬಳಗದ ವತಿಯಿಂದ ಗ್ಯಾರಂಟಿ ರಾಮಣ್ಣ ಇವರ ಸಾರಥ್ಯದಲ್ಲಿ ವಿವಿಧ ಜಿಲ್ಲೆಗಳ ಆಸಕ್ತ ಕಲಾವಿದರ ವಾಟ್ಸಾಪ್ ಗ್ರೂಪ್ನ್‌ನ ೫೦೦ನೇ ಸಂಚಿಕೆಯ ರಾಜ್ಯ ಮಟ್ಟದ ಕರುನಾಡ ಕಲಾ ಸಂಗಮ ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು
ಇತ್ತಿಚೀನ ದಿನಮಾನಗಳಲ್ಲಿ ಕಲೆ, ಸಾಹಿತ್ಯವನ್ನು ಹಾಡುಗಾರರು ಬೇಕಾ ಬಿಟ್ಟಿಯಾಗಿ ಬಳಕೆ ಮಾಡುತ್ತಿರುವುದು. ವಿಶಾದನೀಯಾ ಎಂದ ಅವರು ಜನಸಾಮಾನ್ಯರ ಬದುಕನ್ನು ಗಟ್ಟಿಗೊಳಿಸುವ, ಬದಲಾವಣೆ ತರುವ ದೀಸೆಯಲ್ಲಿ ಬಳಕೆಯಾದಗ ಮಾತ್ರ ಕಲೆ, ಸಾಹಿತ್ಯ, ಹಾಡುಗಾರ ಸಾರ್ಥಕತೆಯತ್ತ ಸಾಗಲು ಜಾಗೃತ ಸಮಾಜ ನಿರ್ಮಾಣ ಮಾಡಲು, ಸಂವಿಧಾನದ ಆಶಯಗಳು ಈಡೇರಲು ಸಾಧ್ಯ ನಾವು ನೀವೆಲ್ಲರು ಈ ದಿಕ್ಕಿನಲ್ಲಿ ಸಾಗೋಣ ಎಂದು ತಿಳಿಸಿದರು.
ಹಿರಿಯ ಕವಿ, ಕಲಾವಿದರಾದ ಸಾಂಸ್ಕ್ರತಿಕ ಚಿಂತಕರಾದ ಕೋಟಾಗನಹಳ್ಳಿ ರಾಮಯ್ಯ ಮಾತನಾಡಿ ಇತ್ತೀಚಿಗೆ ಕಲಾವಿದರು ನಾಲ್ಕು ಹಾಡುಗಳನ್ನು ಕಲಿತು ಎಲ್ಲಾ ಕಡೆ ಅವುಗಳನ್ನೇ ಹಾಡುತ್ತಾರೆ ಇವರಿಗೆ ದೊಡ್ಡ ಕಲಾವಿದರ ಪಟ್ಟ, ಪ್ರಶಸ್ತಿಗಳು ಎಂದು ವಿಶಾದ ವ್ಯಕ್ತ ಪಡಿಸಿದ ಅವರು ಕಲೆ, ಸಾಹಿತ್ಯ, ಕಲಾವಿದರು ಹೊಸ, ಹೊಸ ಸಾಹಿತ್ಯ ರಚನೆ ವಿಭಿನ್ನ ಶೈಲಿಯಲ್ಲಿ ಜನ ಸಾಮಾನ್ಯರ ಬದುಕಿನಲ್ಲಿ ಜಾಗೃತ ಗೋಳಿಸುವ ಮೂಲಕ ಬದಲಾವಣೆ ತರುವತ್ತಾ ಸಾಗಬೇಕು. ಆ ಮೂಲಕ ಸಮಾಜದ ಆಸ್ತಿಗಳಾಗಬೇಕು ಎಂದರು.
ಜನವಾದಿ ಮಹಿಳಾ ಸಂಘಟನೆಯ ರಾಜ್ಯಾಧ್ಯಕ್ಷೆ ಗೀತಾ ಮಾತನಾಡಿ ಕಲೆ ಮತ್ತು ಸಾಹಿತ್ಯಕ್ಕೆ ದೊಡ್ಡ ಮಹತ್ವವಿದೆ. ಸಮಾಜದಲ್ಲಿ ನಡೆಯುವ ಅವ್ಯವಸ್ಥೆಗಳ ಮೇಲೆ ಗಮನಹರಿಸಿ ಬಯಲಿಗೆ ತರಬೇಕು. ಜಾಗೃತ ಸಮಾಜ ನಿರ್ಮಾಣ ಮಾಡಬೇಕು ಎಂದ ಅವರು ಶತಶತಮಾನಗಳಿಂದ ನೊಂದವರು, ಶೋಷಿತರು, ಬಡವರು, ಹಿಂದುಳಿದವರು, ಅಲ್ಪಸಂಖ್ಯಾತರು, ದೀನದಲಿತರು ಬೆಲೆ ಏರಿಕೆ, ಕೋರೋನದಂತ ರೋಗಗಳಿಂದ ತತ್ತರಿಸಿ ಹೋಗಿ ಬದುಕು ಭಾದೆ ಬಿದ್ದಿದೆ ಈಗಿನ ಸಿದ್ದರಾಮಯ್ಯ ಸರ್ಕಾರ ಕೆಲವು ಬಡವರ ಪರವಾದ ಉಚಿತ ಭಾಗ್ಯಗಗಳನ್ನು ನೀಡಿ ಬದುಕು ಸುಧಾರಿಸಲು ನೆರವಾದರೆ ಕೆಲವರು, ಉಳ್ಳವರು ಗೇಲಿಮಾಡುತ್ತಾರೆ ಇದು ಖಂಡನೀಯ ಎಂದ ಅವರು ಇಂದು ಮಹಿಳೆಯರು ಎಲ್ಲಾ ಅವಕಾಶಗಳನ್ನು ಬಳಸಿಕೊಂಡು ಮುಂದೆ ಬರಬೇಕು ಎಂದು ತಿಳಿಸಿದರು.
ಹಾಸನ, ಹಾವೇರಿ, ಬೆಳಗಾವಿ, ಚಿಕ್ಕೋಡಿ, ಬೆಂಗಳೂರು, ಕೋಲಾರ ಜಿಲ್ಲೆಗಳಿಂದ ಬಂದ ಕಲಾವಿದರು ವಿವಿಧ ವೈವಿಧ್ಯಮಯ ಸಾಂಸ್ಕ್ರತಿಕ ಕಾರ್ಯಕ್ರಮ ನೀಡಿದರು. ಪ್ರಾರ್ಥನೆ ಜಯಶ್ರೀ, ಸ್ವಾಗತ ಬಳಗದ ಕಾರ್ಯದರ್ಶಿ ವಸಂತ ಕುಮಾರ್, ನಿರೂಪಣೆ ಸುಜಾತ, ಡಾ.ಗುರುಮಾಂತಯ್ಯ ಆರಾಧ್ಯಮಠ, ವಂದನಾರ್ಪಣೆ ಚಿಕ್ಕರೆಡ್ಡೆಪ್ಪ, ಕೋಲಾರ. ಕಾರ್ಯಕ್ರಮ ನೀಯೋಜಕರು ವಿ.ಚಿಕ್ಕರೆಡ್ಡಪ್ಪ ಕಲಾವಿದರು ನಿಸರ್ಗ ಸಂಗೀತ ಮತ್ತು ಸಾಂಸ್ಕೃತಿಕ ಕಲಾ ಸಂಸ್ಥೆ (ರಿ) ಹಾಗೂ ಆರ್.ಅಂಬುಜ ಧರಣಿ ಸಾಂಸ್ಕೃತಿಕ ಕಲಾ ಬಳಗ (ರಿ) ಬೆಂಗಳೂರು ಕಾರ್ಯಕ್ರಮ ನಡೆಸಿಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರುನಾಡ ಹಾಡುಗಾರರ ಬಳಗದ ಅಧ್ಯಕ್ಷ ಹಾವೇರಿಯ ವೀರಯ್ಯ ಸಂಕಿನ ಮಠ ವಹಿಸಿದ್ದರು. ವೇದಿಕೆಯಲ್ಲಿ ಪತ್ರಕರ್ತ ಗಣೇಶ್, ಜಿಲ್ಲಾ ಬೀದಿ ನಾಟಕ ಸಂಘದ ಅಧ್ಯಕ್ಷ ಕಲಾವಿದ ದೊಡ್ಡಮಲೆ ರವಿ, ಸಮಾಜ ಸೇವಕಿ ಶಾಂತಮ್ಮ, ಇನ್ನು ಮುಂತಾದವರು ಭಾಗವಹಿಸಿದ್ದರು.