ಕಲೆ ಸಂಸ್ಕೃತಿ ಉಳುವಿಗೆ ಶ್ರಮಿಸಬೇಕು: ಹನುಮಂತಪ್ಪ


(ಸಂಜೆವಾಣಿ ವಾರ್ತೆ)
ಬಳ್ಳಾರಿ:ಜು,27- ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ನಗರದ  ಕೆಎಚ್ ಬಿ ಕಾಲೊನಿ ಗಾಂಧಿನಗರ  ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಇತ್ತೀಚೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಿಂದ ಸಂಗೀತ ಕಲಾ ಟ್ರಸ್ಟ್  ಸುಗಮ ಸಂಗೀತ ಕಾರ್ಯಕ್ರಮ ಹಮ್ಮಿಕೊಂಡಿತ್ತು.
ಕಾರ್ಯಕ್ರಮವನ್ನು  ಉದ್ಘಾಟಿಸಿದ ಮಹಾನಗರ ಪಾಲಿಕೆಯ ಸದಸ್ಯ ಹನುಮಂತಪ್ಪ ಕೆ. ಮಾತನಾಡಿ, ಇಂತಹ ಕಾರ್ಯಕ್ರಮಗಳ ಮೂಲಕ ನಮ್ಮ ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಬೇಕು ಎಂದರು. 
ಅತಿಥಿಗಳಾಗಿ ಜನಪದ ಕಲಾವಿದ ಯಲ್ಲನಗೌಡ ಶಂಕರಬಂಡೆ,  ರವಿಕುಮಾರ್ ಸಿ ಆರ್ ಪಿ  ಕಪ್ಪಗಲ್ ವಲಯ,  ಅಕ್ಷಯ ಟ್ರಸ್ಟ್ ನ ಅಧ್ಯಕ್ಷ ಸುಂಕಪ್ಪ, ಶಿಕ್ಷಕ ಷರೀಪ್ ಅವರು ಭಾಗವಹಿಸಿದ್ದರು .
ಶಾಲೆಯ ಮುಖ್ಯೋಪಾಧ್ಯ  ಮಲ್ಲಿಕಾರ್ಜುನ ಅಧ್ಯಕ್ಷತೆವಹಿಸಿ,  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಈ ಕಾರ್ಯಕ್ರಮ ಹಮ್ಮಿಕೊಂಡಿರುವುದು  ತುಂಬಾ ಸಂತೋಷದ ವಿಷಯ ಜೊತೆಗೆ ಕಲೆ ಮತ್ತು ಸಂಸ್ಕೃತಿಯನ್ನು ಪೋಷಿಸಿ ಬೆಳೆಸುತ್ತಿರುವ ಕಾರ್ಯ ಶ್ಲಾಘನೀಯ ಎಂದರು .
ಸಹನಾ ಅವರು ಸುಗಮ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ತಬಲಾಸಾಥಿ ಯೋಗೀಶ್ ಸಂಗನಕಲ್ಲು, ಹಾರ್ಮೋನಿಯಂ ಶಿವಕುಮಾರ್ ನೀಡಿದರು. ಸಂಗೀತ ಕಲಾ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಕೆ. ಮಾರೀಚ  ಸ್ವಾಗತಿಸಿ ವಂದಿಸಿದರು.