ಕಲೆ ನಿಂತ ನೀರಲ್ಲ, ಜುಳು ಜುಳು ಹರಿಯುವ ತ್ವರೆ, ನದಿ

ಮಂಡ್ಯ : ಜು.17:- ಕಲೆ ನಿಂತ ನೀರಲ್ಲ, ಜುಳು ಜುಳು ಹರಿಯುವ ತ್ವರೆ, ನದಿ. ಎಷ್ಟು ದೂರ ಹರಿದೆನೆಂಬುದರ ಭಾವವಿಲ್ಲದೆ ಮುಂದೆ ಮುಂದೆ ಸಾಗುತ್ತಲೇ ಇರುತ್ತದೆ. ಕಲೆ ಕಲ್ಪನಾತೀತವಾದದ್ದು ಎಂದು ಮೃದಂಗ ವಿದ್ವಾನ್ ಎಸ್. ಸುದರ್ಶನ್ ಅಭಿಪ್ರಾಯಿಸಿದರು.
ಗುರುದೇವ ಲಲಿತ ಕಲಾ ಅಕಾಡೆಮಿ ಕುಠೀರದಲ್ಲಿ ನಡೆದ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಲೆಯನ್ನು ಹೇಳಿಕೊಡುವ ಗುರುವಿಗೂ ಅಷ್ಟೇ ಮಹತ್ವವಿದೆ ಎಂದು ಹೇಳಿದರು.
ಪ್ರತಿಯೊಬ್ಬರಿಗೂ ವಿದ್ಯೆಯ ದಾಹ ಇರುತ್ತೆ. ಇದರೊಂದಿಗೆ ದಾಹ ಇರಬೇಕು. ದಾಹ ಇದ್ದರೆ ಮಾತ್ರ ನೀರು ಕುಡಿಯಲು ಸಾಧ್ಯ. ಇಂತಹ ದಾಹದ ಬಗೆಗಳು ಬೇರೆ ಬೇರೆಯದ್ದಾಗಿರಬಹುದು. ಆದರೆ ಕಲಿಕೆ ಮಾತ್ರ ಗುರುವಿನಿಂದಲೇ ಸಾಗಬೇಕು ಎಂದು ಉದಾಹರಣೆ ಸಮೇತ ವಿವರಿಸಿದರು.
ಗುರು ಎಂದರೆ ಯಾರು, ಏಕೆ ಅವನ ಬಳಿಗೆ ಹೋಗಬೇಕು ಎಂಬಿತ್ಯಾದಿ ಪ್ರಶ್ನೆಗಳು ನಮ್ಮನ್ನು ಕಾಡದಿರದು. ನಾನು ನನ್ನ ಗುರುವಿನ ಬಳಿ 48 ವರ್ಷಗಳ ಕಾಲ ಅಭ್ಯಾಸ ಮಾಡಿz್ದÉೀನೆ. ಈ ಬಗ್ಗೆ ಹಲವಾರು ಮಂದಿ ಪ್ರಶ್ನೆಯನ್ನೂ ಮಾಡಿದ್ದಾರೆ. ಗುರುವಿನ ಸೇವೆ ಮಾಡುವುದು ಎಲ್ಲರಿಗೂ ಸಿಗುವುದಿಲ್ಲಘಿ. ಅದೊಂದು ತಪಸ್ಸುಘಿ. ತಪಸ್ಸಿನ ಮಾದರಿಯಲ್ಲೇ ಗುರುವಿನ ಸೇವೆ ಮಾಡಿ ಕಲಿಕೆಯನ್ನೂ ಮುಂದುವರಿಸಬೇಕು. ಹಾಗಾದಾಗ ಮಾತ್ರ ನಮ್ಮಲ್ಲಿನ ಅಜ್ಞಾನ ತೊಡೆದು ಜ್ಞಾನದ ದೀವಿಗೆ ಬೆಳಗುತ್ತದೆ. ಚಿಕ್ಕ ವಯಸ್ಸಿನಲ್ಲೇ ಒಳ್ಳೆಯ ಗುರುವಿನ ಸಾನಿಧ್ಯ ದೊರೆತರೆ ಆತ ಖಂಡಿತ ದೊಡ್ಡ ಕಲಾಕಾರನಾಗಿವುದರಲ್ಲಿ ಸಂಶಯವಿಲ್ಲ ಎಂದು ಹೇಳಿದರು.
ಇಂತಹ ಗುರುವನ್ನು ಸೇವಿಸುತ್ತಲೇ ಕಲೆಯೊಳಗೆ ಹೊಕ್ಕರೆ ನಮ್ಮನ್ನು ನಾವು ಮರೆಯುತ್ತೇವೆ. ಕಲೆಗೆ ಎಲ್ಲವನ್ನೂ ಮರೆಸುವ ಶಕ್ತಿ ಇದೆ. ಸಾಧನೆ ಮಾಡುವುದಷ್ಟೇ ನಮ್ಮ ಕೆಲಸವಾಗಬೇಕು. ಆಗ ಮಾತ್ರ ಕಲೆ ಒಲಿಯುತ್ತದೆ ಎಂದು ತಿಳಿಸಿದರು.
ಗುರುವಂದನೆ ಸ್ವೀಕರಿಸಿದ ನಾಟ್ಯ ವಿದೂಷಿ ಡಾ. ಚೇತನಾ ಪಿ.ಎಂ. ರಾಧಾಕೃಷ್ಣ ಮಾತನಾಡಿ, ಅನುಭವ ಜೀವನದ ಪಾಠ ಕಲಿಸುತ್ತೆಘಿ. ಗುರು ಎಂದರೆ ಆಧ್ಯಾತ್ಮ ವಿದ್ಯೆಯನ್ನು ಕಲಿಸುವ ವ್ಯಕ್ತಿ ಎಂದು ಭಾವಿಸಲಾಗುತ್ತೆ. ಆಧ್ಯಾತ್ಮ ಸಾಧನೆ ಎಂದರೆ ನಾವು ನಮ್ಮ ಮನಸ್ಥಿತಿಯನ್ನು ಪರಮಾತ್ಮನಲ್ಲಿ ವಿಲೀನಗೊಳಿಸುವುದು ಎಂದರ್ಥ. ಸಂಸಾರದಲ್ಲಿ ಇದ್ದರೂ ನಿರ್ಲಿಪ್ತವಾಗಿ ಸಂತೋಷ ಪಡೆದುಕೊಳ್ಳುವ ಸ್ಥಿತಿ. ಬೇರೆ ಬೇರೆ ಮನಸ್ಥಿತಿಯನ್ನು ತಡೆಯುವುದು ತುಂಬಾ ಕಷ್ಟ ಎಂದು ಹೇಳಿದರು.
ದೇವಸ್ಥಾನಕ್ಕೆ ಹೋಗುವುದು ಆಧ್ಯಾತ್ಮಿಕ ಸಾಧನೆಗೆ ಎಂಬುದು ಯಾರಿಗೂ ತಿಳಿಯುವುದಿಲ್ಲಘಿ. ನಮ್ಮ ಮನಸ್ಸನ್ನು ನಿರ್ಲಿಪ್ತತೆಯತ್ತ ಕರೆದೊಯ್ಯುವಂತೆ ದೇವರಲ್ಲಿ ಬೇಡುವುದು, ದೇವಾಲಯದಲ್ಲಿ ಮನಸ್ಸನ್ನು ಶಾಂತ ರೀತಿಯಲ್ಲಿ ಇರುವ ಹಾಗೆ ಮಾಡೆಂದು ದೇವರಲ್ಲಿ ಬೇಡುವುದು. ಅದನ್ನು ಹಾಗೇಯೇ ಉಳಿಸಿಕೊಂಡು ಜೀವನದಲ್ಲಿ ಸಾಧನೆ ಮಾಡುವುದನ್ನು ಕಲಿಯಬೇಕು ಎಂದು ಸಲಹೆ ನೀಡಿದರು.
ನೃತ್ಯಘಿ, ಸಂಗೀತಕ್ಕೂ ಸಹ ಇಂತಹುz್ದÉೀ ಶಕ್ತಿ ಇರುತ್ತೆಘಿ. ನೃತ್ಯ ಮಾಡುತ್ತಲೇ ಅವರು ತಮ್ಮನ್ನು ತಾವು ಮರೆಯುತ್ತಾರೆ. ಜೊತೆಗೆ ನೋಡುವವರೂ ಸಹ ಇದೇ ರೀತಿ ಅನುಭೂತಿಯನ್ನು ಹೊಂದಿರುತ್ತಾರೆ. ಸಂಗೀತದಲ್ಲೂ ಇಂತಹುz್ದÉೀ ಸ್ಥಿತಿಯನ್ನು ತಲುಪಿದ್ದನ್ನು ಕಂಡಿz್ದÉೀವೆ. ಪಾಶ್ಚಿಮಾತ್ಯ ಸಂಗೀತದಲ್ಲಿ ಇಂತಹ ಸ್ಥಿತಿಗೆ ಹೋಗಲು ಸಾಧ್ಯವಿಲ್ಲ ಎಂದು ಉದಾಹರಣೆ ಸಮೇತ ವಿವರಿಸಿದರು.
ಪೂಜಾ ವಿಧಾನದಲ್ಲೂ ಇದೇ ರೀತಿಯ ಆಧ್ಯಾತ್ಮಿಕತೆ ತಲುಪುವತ್ತ ಸಾಗುತ್ತೇವೆ. ಕೆಲವರು ಅದರಲ್ಲೇ ಸಾಧನೆ ಮಾಡಿ ಮೈಮರೆಯುತ್ತಾರೆ. ಇನ್ನು ಕೆಲವರು ತೋರಿಕೆಗೆ ಮಾತ್ರ ಪೂಜಾ ಕಾರ್ಯದಲ್ಲಿ ತೊಡಗಿಕೊಳ್ಳುತ್ತಾರೆ. ಸಾಧನೆ ಮಾಡಿದರೆ ಮಾತ್ರ ಪರಮಾತ್ಮನ ಸಾನ್ನಿಧ್ಯ ಪಡೆಯಲು ಸಾಧ್ಯ ಎಂದು ಅಭಿಪ್ರಾಯಿಸಿದರು.
ಗುರುದೇವ ಲಲಿತ ಕಲಾ ಅಕಾಡೆಮಿ ವ್ಯವಸ್ಥಾಪಕ ಪಿ.ಎಂ.ರಾಧಾಕೃಷ್ಣ ಸಮಾರಂಭದಲ್ಲಿ ಭಾಗವಹಿಸಿದ್ದರು. ಇದೇ ವೇಳೆ ವಿದ್ಯಾರ್ಥಿಗಳು ನೃತ್ಯ ಪ್ರದರ್ಶನ ನೀಡಿದರು.