ಕಲೆ ಜೀವಂತವಿರಬೇಕಾದರೆ ಕಲಾವಿದ ಕ್ರಿಯಾಶೀಲರಾಗಿರಬೇಕು : ಡಾ. ಅರುಣಕುಮಾರ

ಹುಮನಾಬಾದ : ಡಿ.4:ಕಲೆ ಜೀವಂತವಿರಬೇಕಾದರೆ ಕಲಾವಿದ ಕ್ರಿಯಾಶೀಲರಾಗಿರಬೇಕು ಅಂದಾಗ. ಕಲೆ ಉಳಿಯುತ್ತದೆ ಎಂದು ಇತಿಹಾಸ ಹಿರಿಯ ಪ್ರಾಧ್ಯಾಪಕ ಡಾ. ಅರುಣಕುಮಾರ ನರೋಣಕರ ಹೇಳಿದರು.
ಹುಮನಾಬಾದ ಪಟ್ಟಣದ ಹೊರವಲಯದ ಶ್ರೀ ವೀರಭದ್ರೇಶ್ವರ ಚಿತ್ರಕಲಾ ಮಹಾವಿದ್ಯಾಲಯದ ಸಭಾ ಮಂಟಪದಲ್ಲಿ Áಕ್ಷಿ ಪ್ರತಿಷ್ಠಾನ, ಜಿಲ್ಲಾ ದಲಿತ ಸಾಹಿತ್ಯ ಪರಿಷತ್ತು, ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು, ಕರ್ನಾಟಕ ಜಾನಪದ ಪರಿಷತ್ತು, ಧರಿನಾಡು ಕನ್ನಡ ಸಂಘ, ಪರಿಪೂರ್ಣ ಚಾರಿಟೆಬಲ್ ಟ್ರಸ್ಟ ಹುಮನಾಬಾದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ ಸಿದ್ರಾಮ ವಾಘಮಾರೆ ಅವರ 60 ನೇ ಯ ಷಷ್ಠ್ಯಬ್ದಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಸಾಹಿತಿ ಡಾ. ಗವಿಸಿದ್ಧಪ್ಪ ಪಾಟೀಲ ರಚಿಸಿದ ಅಂಬೇಡ್ಕರ್ ಬೆಳಕಿನಲ್ಲಿ ಪುಸ್ತಕವನ್ನು ಇದೆ ಸಂಧರ್ಭದಲ್ಲಿ ಲೋಕಾರ್ಪಣೆ ಮಾಡಲಾಯಿತು.
ಸಾಹಿತಿ ಬಸವರಾಜ ದಯಾಸಾಗರ, ಮಹಿಳಾ ಸಾಹಿತಿ ಡಾ. ಜಯದೇವಿ ಗಾಯಕವಾಡ, ಡಾ. ಗವಿಸಿದ್ಧಪ್ಪ ಪಾಟೀಲ, ಉಬಾಮಾ ಮಾತನಾಡಿದರು. ಶ್ರೀ ವೀರಭದ್ರೇಶ್ವರ ಚಿತ್ರಕಲಾ ಮಹಾವಿದ್ಯಾಲಯ ಕಾರ್ಯದರ್ಶಿ ಗುಂಡಪ್ಪ ದೊಡ್ಮನಿ, ಮೊಯಿನುದ್ದಿನ್ ಮೌಂಸ್, ಸಂಗೀತಾ ಬಿ. ದಯಾಸಾಗರ, ಯಂಕಮ್ಮ ವಾಘಮಾರೆ, ಶಿವಕುಮಾರ ಪರೀಟ್, ಮನೋಹರ ಗರೋಡಕರ, ಧನರಾಜ ಮೇತ್ರೆ, ವಿ.ಎನ್.ಜಾಧವ, ಲಕ್ಷೀ ತ್ಯಾಪಿ, ಜಾನಪದ ಪರಿಷತ್ತಿನ ಅಧ್ಯಕ್ಷ ಶರದಕುಮಾರ ನಾರಾಯಣಪೇಟ್ಕರ, ಸಿದ್ಧಾರ್ಥ ಮಿತ್ರಾ, ವಿಜಯಕುಮಾರಿ ಸೇರಿದಂತೆ ಅನೇಕರು ಇದ್ದರು.