ಕಲೆ ಜಗತ್ತಿನ ಅದ್ಭುತ ಶಕ್ತಿ

ಕಲಬುರಗಿ,ಅ.30-ಕಲೆ ಜಗತ್ತಿನ ಅದ್ಭುತ ಶಕ್ತಿಗಳಲ್ಲಿ ಒಂದು, ಸಂಗೀತದಿಂದ ಮನಷ್ಯ ಆರೋಗ್ಯವಾಗಿರುತ್ತಾನೆ, ಮನಸ್ಸನ್ನು ಸಂಗೀತದಿಂದ ನಿಯಂತ್ರಣದಲ್ಲಿಡಲು ಸಾದ್ಯ, ಮನಸ್ಸು ಉಲ್ಲಾಸವಾಗಿಡಬಹುದು ಎಂದು ಶರಣೆ ಜಯಶ್ರೀ ಚಟ್ನಳ್ಳಿ ಹೇಳಿದರು.
ನಗರದ ಶಿವಾಜಿನಗರದ ಬಸವಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ಸದ್ಗುರು ಕಲಾ ಸಂಸ್ಥೆ ಮತ್ತು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಸುಗುಮ ಸಂಗೀತೋತ್ಸವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ ಅವರು, ಕಲಬುರಗಿ ಜಿಲ್ಲೆಯಲ್ಲಿ ನಿರಂತರವಾಗಿ ಕಾರ್ಯಕ್ರಮಗಳು ನಡೆಯುತ್ತಿರುವುದು ತುಂಬಾ ಶ್ಲಾಘನೀಯ ಕಲಬುರಗಿ ಜಿಲ್ಲೆಯು ಸಾಂಸ್ಕೃತಿಕ ನಗರವಾಗುತ್ತಿದೆ ಎಂದು ಹೇಳಿದರು.
ಸಂಸ್ಥೆಯ ಅಧ್ಯಕ್ಷÀ ಶಿವಲಿಂಗಪ್ಪ ಕೆಂಗನಾಳ ಅಧ್ಯಕ್ಷವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಅನೇಕ ಗಣ್ಯ ವ್ಯಕ್ತಿಗಳು ಭಾಗವಹಿಸಿದ್ದರು. ಮಾಲಿಂಗಯ್ಯ ಸ್ಥಾವರಮಠ, ಸಂಗಮೇಶ ನೀಲ, ಚನ್ನಬಸವ ನಾಗಲಿಂಗಯ್ಯ ಸ್ಥಾವರಮಠ, ಶ್ರೀದೇವಿ ಕುಮಾರ್ ಪಾಟೀಲ್ ಮೌನೇಶ್ ವಿಶ್ವಕರ್ಮ ಸಂತೋಷ್ ಕುಮಾರ್ ಅಲ್ಲದೆ ಅನೇಕ ಕಲಾವಿದರು ಉಪಸ್ಥಿತರಿದ್ದರು.