ಕಲೆ ಒಂದು ಜನಾಂಗದ ಸಂಸ್ಕøತಿಯ ವಿಕಾಸ: ನಾಡೋಜ್ ಖಂಡೇರಾವ್

ಕಲಬುರಗಿ,ಆ.1:ಕಲೆ ಒಂದು ಜನಾಂಗದ ಸಂಸ್ಕøತಿಯ ಉದ್ಭವ ಮತ್ತು ವಿಕಾಸದೊಂದಿಗೆ ಹÅಟ್ಟಿ ಬೆಳೆಯುತ್ತದೆ. ಹೀಗಾಗಿ ಕಲೆಯ ಇತಿಹಾಸ, ಮಾನವ ಸಂಸ್ಕøತಿಯ ಇತಿಹಾಸವಾಗಿದೆ. ಸಂಸ್ಕøತಿ ಮತ್ತು ಸೌಂದರ್ಯ ಪ್ರಜ್ಞೆ ಇಲ್ಲದ ಯಾವುದೆ. ದೇಶ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿಲ್ಲ. ಸಂಸ್ಕøತಿ ಮತ್ತು ಸೌಂದರ್ಯ ಪ್ರಜ್ಞೆ, ನಾಗರಿಕತೆಯ ಮೂಲವಾಗಿದೆಂದು ನಾಡೋಜ್ ಡಾ. ಜೆ.ಎಸ್. ಖಂಡೇರಾವ್ ಅವರು ಹೇಳಿದರು.
ನಗರದ ಯುವ ಹವ್ಯಾಸಿ ಚಿತ್ರಕಲಾವಿದೆ ಕುಮಾರಿ ವೈಷ್ಣವಿ ಆರ್. ಬಿ. ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ಮನುಷ್ಯ ತನ್ನ ಭಾವನೆಗಳ, ಅನಿಸಿಕೆಗಳ ಅಭಿವ್ಯಕ್ತಿಗಾಗಿ ಕಂಡುಕೊಂಡ ಮೊಟ್ಟ ಮೊದಲನೆಯ ಮಾಧ್ಯಮ ಚಿತ್ರ ಕಲೆಯಾಗಿದೆ. ಈ ಮಾಧ್ಯಮದಿಂದ ಕಲಾವಿದ ತನ್ನ ಆಂತರಿಕ ಇಚ್ಛೆಯನ್ನು ಅಥವಾ ಉದ್ದೇಶವನ್ನು ಪೂರ್ತಿಗೊಳಿಸುವ ಅಥವಾ ಸಾಧಿಸುವ ಪ್ರಯತ್ನ ಮಾಡುತ್ತಾನೆ. ಕಲಾಕೃತಿಯು ಕಲಾವಿದನ ಮನೋಭಾವನೆಯ ಪ್ರತಿಕವಾಗಿರುತ್ತದೆ. ಯಾವುದೆ ಪ್ರಕಾರದ ಕಲಾಕೃತಿ ರಚನೆಗೆ ಜೀವನಾನುಭಾವವೇ ತಳಹದಿ ಯಾಗಿದೆ. ಕಲೆಯು ಒಂದು ಅಲೌಕಿಕ ಅಥವಾ ಪಾಮಾರ್ಥಿಕ ಆನಂದ ಕೊಡುವ ದೃಶ್ಯ ಮಾಧ್ಯವಾಗಿದೆ. ದೃಶ್ಯಕಲೆಯು ಕಣ್ಣಿನಿಂದ ನೋಡಿ, ತಿಳಿದು ಆನಂದಿಸುವ ಮೌನಕಾವ್ಯ ಅಥವಾ ಮೌನ ಭಾಷೆಯಾಗಿದೆ ಎಂದರು.
ಗುಲಬರ್ಗಾ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಕೆ.ಎಸ್. ಮಾಲಿಪಾಟೀಲ್ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದ ಕಲಾವಿದರು ಉತ್ತಮ ಗುಣಮಟ್ಟದ ಕಲಾಕೃತಿಗಳನ್ನು ರಚಿಸುತ್ತಿದ್ದಾರೆ. ಆದರೆ ಇವರು ರಚಿಸಿದ ಕಲಾಕೃತಿಗಳಿಗೆ ಸೂಕ್ತವಾದ ಕಲಾ ಮಾರುಕಟ್ಟೆ ಸಿಗುತ್ತಿಲ್ಲ. ಈ ಭಾಗದ ಶ್ರೀಮಂತ ವರ್ಗದ ಜನರು ಕಲಾಕೃತಿಗಳನ್ನು ಖರೀದಿಸಿ, ಕಲಾವಿದರಿಗೆ ಪ್ರೋತ್ಸಾಹಿಸಬೇಕು ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕøತಿಕ ಸಂಘದ ಅಧ್ಯಕ್ಷ ಬಸವರಾಜ್ ಪಾಟೀಲ್ ಸೇಡಂ ಅವರು ಮಾತನಾಡಿ, ಕಲ್ಯಾಣ ಕರ್ನಾಟಕದ ದೃಶ್ಯಕಲಾ ಪರಂಪರೆಯು ಅತ್ಯಂತ ಉತ್ಕøಷ್ಟವಾಗಿದೆ. ಶ್ರೇಷ್ಠ ಚಿತ್ರಕಲಾವಿದ ಡಾ. ಎಸ್.ಎಂ. ಪಂಡಿತರಿಗೆ ಜನ್ಮ ನೀಡಿದ ಭೂಮಿ ಇದಾಗಿದೆ. ಕಲಬುರಗಿ ನಗರದಲ್ಲಿ ಪ್ರತಿ ತಿಂಗಳಿಗೊಂದು ವಿನೂತನ ಚಿತ್ರಕಲಾ ಪ್ರದರ್ಶನ ನಡೆಯಬೇಕು. ಆ ಪ್ರದರ್ಶನಕ್ಕೆ ಪ್ರಾಯೋಜಕತ್ವ ತಾವು ನೀಡುವುದಾಗಿ ಹೇಳಿದರು.
ಡಾ. ಅಶೋಕ್ ಶೆಟಕಾರ್ ಅವರು ಕಾರ್ಯಕ್ರಮ ನಿರೂಪಿಸಿದರು. ಎಂ.ಎಚ್. ಬೆಳಮಗಿ ಅವರು ಸ್ವಾಗತಿಸಿದರು. ಡಾ. ಪರಶುರಾಮ್ ಪಿ. ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿ.ಎನ್. ಪಾಟೀಲ್ ಅವರು ವಂದಿಸಿದರು. ಚಿತ್ರಕಲಾವಿದ ಬಸವರಾಜ್ ರೇ ಉಪ್ಪಿನ್, ಡಾ. ಎ.ಎಸ್. ಪಾಟೀಲ್, ವ್ಹಿ.ಬಿ. ಬಿರಾದಾರ್, ಡಾ. ಮಲ್ಲಿಕಾರ್ಜುನ್ ಭಾಗೋಡಿ, ನಿಂಗಣ್ಣ ಡಿ. ಕೇರಿ, ಬಸವರಾಜ್ ಕಮಾಜಿ, ವ್ಹಿ. ಶಾಂತರೆಡ್ಡಿ ಮತ್ತು ಅನೇಕ ಕಲಾವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ನಗರದ ಅಂಕುರ ಆರ್ಟ್ ಗ್ಯಾಲರಿ, ದಿ ಆರ್ಟ್ ಇಂಟಿಗ್ರೇಶನ್ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ವೈಷ್ಣವಿ. ಆರ್.ಬಿ. ರಚಿಸಿದ 30ಕ್ಕೂ ಹೆಚ್ಚು ಚಿತ್ರಕಲಾಕೃತಿಗಳು ಐದು ದಿನ, ಅಗಸ್ಟ್ 5ರವರೆಗೆ ಪ್ರದರ್ಶನಗೊಳ್ಳಲಿವೆ.