ಕಲೆ ಎಂಬುವುದು ಬೆಲೆ ಕಟ್ಟಲಾಗದ ವಸ್ತುವಾಗಿದೆ: ನಮೋಶಿ

ಬೀದರ ಜ.9: ಕಲೆ ಎಂಬುವುದು ಬೆಲೆ ಕಟ್ಟಲಾಗದ ವಸ್ತುವಾಗಿದೆ, ಆಸಕ್ತಿ, ಅಭಿರುಚಿ ಇದ್ದವರಿಗೆ ಮಾತ್ರ ಇದರ ಸವಿ ಸವಿ ಸವಿಯಲು ಸಾಧ್ಯ ಎಂದು ವಿಧಾನ ಪರಿಷತ ಸದಸ್ಯರಾದ ಶಶೀಲ ಜಿ. ನಮೋಶಿ ಹೇಳಿದರು.

ಅವರು ರವಿವಾರ ಬೀದರ ಉತ್ಸವದ ಅಂಗವಾಗಿ ನಗರದ ಚನ್ನಬಸವ ಪಟ್ಟದೇವರು ರಂಗಮಂದಿರ ಆಯೋಜಿಸಿದ ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು

ಬೀದರ ಜಿಲ್ಲೆಯೂ ವಿವಿಧ ಸಂಸ್ಕೃತಿ, ಪರಂಪರೆಯನ್ನು ಹೊಂದಿದ್ದು ಬಿದರಿ ಕಲೆಯೂ ಬೀದರ ಒಡಲಿನಲ್ಲಿ ಅರಳಿದ ಅಧ್ಬುತ ಕಲೆಯಾಗಿದೆ ಇದನ್ನು ಎಲ್ಲರೂ ಸೇರಿ ಉಳಿಸಿ, ಬೆಳೆಸಿಕೊಂಡು ಹೊಗುವುದರ ಜೊತೆಗೆ ಅದನ್ನು ಪೆÇ್ರೀತ್ಸಾಹಿಸಬೇಕೆಂದು ಹೇಳಿದರು.

ಬೀದರ ಜನತೆಯ ಆಹ್ವಾನಕ್ಕೆ ಓಗೋಟ್ಟು ಬೀದರ ಉತ್ಸವಕ್ಕೆ ಆಗಮಿಸಲು ಒಪ್ಪಿಕೊಂಡ ಮುಖ್ಯಮಂತ್ರಿಗಳಿಗೆ ಬೀದರ ಜನತೆಯ ಪರವಾಗಿ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ ಹಾಗೂ ಈ ಉತ್ಸವದಲ್ಲಿ ಹೆಚ್ಚಿನ ಜನರು ಭಾಗವಹಿಸಬೇಕೆಂದು ಹೇಳಿದರು.

ಹಿರಿಯ ಸಾಹಿತಿಗಳಾದ ರಜಿಯಾ ಬಳಬಟ್ಟಿ ಮಾತನಾಡಿ, ಬೀದರ ಜಿಲ್ಲೆಯು ಇತ್ತೀಚಿಗೆ ಕವಿಗಳ ತಾಣವಾಗುತ್ತಿದ್ದು, ಕವಿಗಳು ರಚಿಸುವ ಕಾವ್ಯಗಳು ಶಬ್ದಗಳ ಸಂಗ್ರಹವಾಗದೆ ವಾಸ್ತವದ ಕಾವ್ಯಗಳಾಗಬೇಕು ಎಂದ ಅವರು ಇತ್ತೀಚೆಗೆ ಕಾವ್ಯಗಳಿಗೆ ಕಟ್ಟು ಪಾಡುಗಳು ಹೆಚ್ಚಾಗುತ್ತಿದು, ಅವುಗಳು ನಶಿಸಬೇಕು ಎಂದು ತಮ್ಮ ಆಶಯ ನುಡಿ ವ್ಯಕ್ತಪಡಿಸಿದರು.

ಬೀದರ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಬಾಬು ವಾಲಿ ಮಾತನಾಡಿ, ಈ ಬಾರಿಯ ಉತ್ಸವ ಜನರ ಆಶಯದಂತೆ ನಡೆಯುತ್ತಿರುವ ಉತ್ಸವವಾಗಿದ್ದು, ಬೀದರ ಉತ್ಸವವು ಎಲ್ಲಾ ಜನಪ್ರತಿನಿಧಿಗಳ ಸಹಕಾರದಿಂದ ಯಶಸ್ವಿಯಾಗುತ್ತಿರುವುದಕ್ಕೆ ಮೊದಲ ದಿನ ಉತ್ಸವದಲ್ಲಿ ಸೇರಿದ ಜನರೇ ಸಾಕ್ಷಿ ಎಂದು ಹೇಳಿದರು.

ಬೀದರ ಉತ್ಸವದ ಅಂಗವಾಗಿ 25 ಕ್ಕೂ ಹೆಚ್ಚು ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಂಡ್ಡಿದ್ದು, ಅವುಗಳು ಸಹ ಜನರ ಸಹಕಾರದಿಂದ ಯಶಸ್ವಿಯಾಗುತ್ತಿವೆ ಹಾಗೂ ಬೀದರ ಉತ್ಸವ ಅಂಗವಾಗಿ ಹಮ್ಮಿಕೊಂಡಿದ ಪಾರಂಪರಿಕ ನಡಿಗೆಯಲ್ಲಿ ಸುಮಾರು 25 ಸಾವಿರ ಜನ ಸೇರಿದ್ದು ಬೀದರ ಉತ್ಸವಕ್ಕೆ ಬೀದರ ಜನರಲ್ಲಿ ಇರುವ ಆಸಕ್ತಿ ತೋರಿಸುತ್ತದೆ ಎಂದು ಹೇಳಿದರು.

ಬೀದರ ಜಿಲ್ಲಾ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಡಾ. ಜಗನ್ನಾಥ ಹೆಬ್ಬಾಳೆ ಮಾತನಾಡಿ, ಜನರ ಮನಸ್ಸಿಗೆ ಹಿತ ನಿಡುವ ಹಾಗೂ ಜ್ಞಾನವನ್ನು ವೃದ್ಧಿಸುವ ಕಾವ್ಯಗಳು ಕವಿಗಳಿಂದ ಹೊರಹೊಮ್ಮಬೇಕು ಎಂದು ಹೇಳಿದರು.

ಕಾರ್ಯಕ್ರದಲ್ಲಿ ಸ್ಥಳಿಯ ಸಾಹಿತಿಗಳು ಕವನ ವಾಚಿಸಿದರು, ಜಮ್ಮು ಕಾಶ್ಮೀರ ನೃತ್ಯ ತಂಡದಿಂದ ಸೂಫಿ ನೃತ್ಯ, ಮಧ್ಯಪ್ರದೇಶ ತಂಡದಿಂದ ನವರಾತ್ರಿ ಉತ್ಸವ, ಹರಿಯಾಣ ತಂಡದಿಂದ ಕೊರಿ ನೃತ್ಯ ಪ್ರದರ್ಶಿಸಿದರು ಹಾಗೂ ಸ್ಥಳಿಯ ಕಲಾ ತಂಡಗಳಿಂದ ಸಂಗೀತ ಮತ್ತು ಸಂಸ್ಕೃತಿಕ ಕಾರ್ಯಕ್ರಮ ಜರುಗಿದವು.

ಈ ಸಂದರ್ಭದಲ್ಲಿ ಹಿರಿಯ ಸಾಹಿತಿಗಳಾದ ಎಂ. ಜಿ. ಗಂಗನಪಳ್ಳಿ, ಡಾ. ಎಂ. ಜಿ. ದೇಶಪಾಂಡೆ, ಡಾ. ಸೋಮನಾಥ ಯರವಾಳ, ಶಿವಕುಮಾರ ನಾಗವಾರ, ನಿವೃತ್ತ ಪ್ರಾಚಾರ್ಯರಾದ ಮುಹಮ್ಮದ್ ನಿಜಾಮುದ್ದಿನ್, ಮರಾಠಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ. ಜಿ ಮೂಳೆ, ಕವಿಗೋಷ್ಠಿ ಆಯೋಜನಾ ಸಮಿತಿ ಸಂಚಾಲಕರಾದ ಡಾ. ಬಸವರಾಜ ಬಲ್ಲೂರ, ಸಂಗೀತ ನೃತ್ಯೋತ್ಸವ ಸಾಂಸ್ಕೃತಿಕ ಕಾರ್ಯಕ್ರಮ ಸಂಚಾಲಕ ಸಿದ್ರಾಮ ಶಿಂಧೆ, ಮೆರವಣಿಗೆ ಸಮಿತಿ ಅಧ್ಯಕ್ಷರಾದ ವಿರೂಪಾಕ್ಷ ಗಾದಗಿ, ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷ ವಿಜಯಕುಮಾರ ಸೊನಾರೆ, ರಾಜಕುಮಾರ ಹೆಬ್ಬಾಳೆ ಸೇರಿದಂತೆ ಇತರರಿದ್ದರು. ಜಗದೇವಿ ಯದ್ಲಾಪೂರೆ ನಿರುಪಿಸಿದರು, ಕವಿಗೋಷ್ಠಿ ಆಯೋಜನಾ ಸಮಿತಿ ಸಂಚಾಲಕರಾದ ಡಾ.ಸಂಜುಕುಮಾರ ಅತಿವಾಳೆ ಸ್ವಾಗತಿಸಿದರು, ಡಾ. ಶಾಮರಾವ ನೆಲವಾಡೆ ವಂದಿಸಿದರು.