ಕಲೆ ಉಳಿಸುವುದು, ಬೆಳೆಸುವುದು ಪ್ರೇಕ್ಷಕರ ಕೈಯಲ್ಲಿದೆ:ಅಲ್ಲಮಪ್ರಭು ಪಾಟೀಲ

ಕಲಬುರಗಿ:ಡಿ.25:ಮಾನಸಿಕ ನೆಮ್ಮದಿಗೆ ಕಲೆ, ಸಾಹಿತ್ಯ ಸಂಗೀತ ಪೂರಕ ಹಾಗೂ ಒತ್ತಡದ ಜೀವನದಲ್ಲಿ ನಮಗಿರುವ ಉತ್ತಮ ಹವ್ಯಾಸಗಳು ಪ್ರೇರಕ ಶಕ್ತಿಗಳಾಗಿ ಪಾತ್ರನಿರ್ವಹಿಸುತ್ತೇವೆ. ಇಂದಿನ ದಿನಮಾನಗಳಲ್ಲಿ ಕಲೆಯನ್ನು ನಶಿಸಿ ಹೋಗುತ್ತಿದ್ದು, ಇಂತಹ ಜನಪದ ಕಲೆಯನ್ನು ಉಳಿಸುವುದು, ಬೆಳೆಸುವುದು ಪ್ರೇಕ್ಷಕರ ಕೈಯಲ್ಲಿದೆ ಎಂದು, ವಿಧಾನಸಭಾ ಸದಸ್ಯರಾದ ಅಲ್ಲಮಪ್ರಭು ಪಾಟೀಲ ನಾಟಕ ಉದ್ಘಾಟಿಸಿ ಮಾತನಾಡಿದರು.
ನಮ್ಮ ಭಾಗದಲ್ಲಿ ಕಲೆ, ಸಾಹಿತ್ಯದ ಸೊಗಡು ಶ್ರೀಮಂತವಾಗಿದ್ದು, ಇದನ್ನು ಉಳಿಸಿ ಬೆಳೆಸುವ ಕೆಲಸ ನಿರಂತರವಾಗಿ ನಡೆಯಬೇಕಿದೆ ಅದೆ ಪ್ರಕಾರವಾಗಿ ಬಸವರಾಜ ಕಟ್ಟಿಮನಿ ರಂಗಭೂಮಿ ಕಲಾವಿದರು ಇವರು ಸತತವಾಗಿ ಇಂತಹ ಕಾರ್ಯಕ್ರಮಗಳನ್ನು ಮಾಡುತ್ತಾ ಬರುತ್ತಿದ್ದಾರೆ. ಇಂತಹವರನ್ನು ನಾವು ಪ್ರೋತ್ಸಾಹಿಸಬೇಕು ಎಂದು ಕಾಂಗ್ರೆಸ್ ಪಕ್ಷದ ದುರೀಣರಾದ ನೀಲಕಂಠರಾವ ಮೂಲಗೆ, ಮಾತನಾಡಿದರು.
ಹೈದ್ರಾಬಾದ ಕರ್ನಾಟಕ ಶ್ರೀ ಶಿರಡಿ ಸಾಯಿ ಬಾಬಾ ನಾಟ್ಯ ಸಂಘ(ರಿ) ಬೀದರ ವತಿಯಿಂದ ಸಾಹಿತ್ಯ ಮಂಟಪ, ಕನ್ನಡ ಭವನ ಆವರಣ ಕಲಬುರಗಿಯಲ್ಲಿ ದಿನಾಂಕ: 16.12.2023ರಂದು ಹಮ್ಮಿಕೊಂಡ ಕಲ್ಯಾಣ ಕರ್ನಾಟಕ ನಾಟಕ ಮಹೋತ್ಸವ ಸಾಮಾಜಿಕ ನಾಟಕ “ತಾಯಿಯ ಕರಳು ಅರ್ಥಾರ್ತ, ಸೊಕ್ಕಿನ ಸೊಸೆ” ನಾಟಕ ಉದ್ಘಾಟನಾ ಕಾಂiÀರ್iಕ್ರಮಕ್ಕೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅಧ್ಯಕ್ಷತೆ ವಹಿಸಿದರು.
ಉಚಿತ ನಾಟಕ ಪ್ರವೇಶ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಲ್ಲಿನಾಥ ಪಾಟೀಲ ಕಾಳಗಿ (ಬಿಜೆಪಿ) ಹಿರಿಯ ಮುಖಂಡರು, ಜಿಲ್ಲಾ ಕಸಾಪ ಗೌರವಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಯಶ್ವಂತರಾಯ ಅಷ್ಠಗಿ, ಹವ್ಯಾಸಿ ರಂಗಭೂಮಿ ಕಲಾವಿದರು ರಾಜಕುಮಾರ ಬಿ.ಉದನೂರ, ಬಂಧು ಪ್ರಿಂಟರ್ಸ್ ರಮೇಶ ಜಿ.ತಿಪ್ಪನೂರ, ಕುಸನೂರ ಗ್ರಾ.ಪಂ. ಅಧ್ಯಕ್ಷರು ಕುಪೇಂದ್ರ ಬರಗಾಲಿ, ಹಿರಿಯ ಕವಿಗಳಾದ ಧರ್ಮಣ್ಣ ಹೆಚ್. ಧನ್ನಿ, ಚಂದ್ರಶೇಖರ ಪಾಟೀಲ ಸುಲ್ತಾನಪೂರ, ನವಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷರು ದಯಾನಂದ ಪಾಟೀಲ, ನಾಟಕ ಸಂಘದ ಅಧ್ಯಕ್ಷರಾದ ಬಸವರಾಜ ಕಟ್ಟಿಮನಿ ಇತರರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಉಚಿತ ನಾಟಕ ಪ್ರವೇಶದಲ್ಲಿ ನೂರಾರು ಪ್ರೇಕ್ಷಕರು ನಾಟಕ ನೋಡಿ ಹರ್ಷವ್ಯಕ್ತಪಡಿಸಿದರು.