ಕಲೆ,ಸಾಹಿತ್ಯ, ಸಂಸ್ಕøತಿಯ ತವರೂರು ಕನ್ನಡ ನಾಡು

ಚಿತ್ತಾಪುರ:ನ.2: ದೇಶದಲ್ಲಿಯೇ ವಿಶಿಷ್ಟವಾದ ಮೆರುಗನ್ನು ಹೊಂದಿರುವ ಹಾಗೂ ದೇಶದ ಕೆಲ ಸಾಹಿತ್ಯ ಮತ್ತು ಸಂಸ್ಕೃತಿಯ ತವರೂರು ಎನಿಸಿಕೊಂಡಿರುವ ಕನ್ನಡ ನಾಡು ನುಡಿಯ ಸೇವೆಗಾಗಿ ಸದಾ ಸಿದ್ದರಾಗಿರೋಣ ಎಂದು ಕರವೇ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ್ ಅಲ್ಲೊರಕರ್ ಹೇಳಿದರು.

ಪಟ್ಟಣದ ಕರ್ನಾಟಕ ರಕ್ಷಣಾ ವೇದಿಕೆಯ ಮುಂದೆ ಹಮ್ಮಿಕೊಂಡಿದ್ದ 65ನೇ ಕನ್ನಡ ರಾಜ್ಯೋತ್ಸವ ಧ್ವಜಾರೋಹಣ ಕಾರ್ಯಕ್ರಮ ಸರಳವಾಗಿ ನೆರವೇರಿಸಿ ಮಾತನಾಡಿದ ಅವರು ಇಂತಹ ಪುಣ್ಯಭೂಮಿಯಲ್ಲಿ ನಾವೆಲ್ಲರೂ ಜನಿಸಿರುವುದು ನಮ್ಮ ಪುಣ್ಯವಾಗಿದೆ ಆದ್ದರಿಂದ ನಮ್ಮ ಸೇವೆ ಸದಾ ನಾಡು-ನುಡಿಗಾಗಿ ಮೀಸಲಿಡೋಣ ಎಂದರು.

ಈ ಸಂದರ್ಭದಲ್ಲಿ ರೈತ ಘಟಕದ ಜಿಲ್ಲಾಧ್ಯಕ್ಷ ಸುರೇಶ್ ಗುತ್ತೇದಾರ್, ಸಂಜೆವಾಣಿ ಪತ್ರಕರ್ತರಾದ ಜಗದೇವ ಕುಂಬಾರ, ಈರಣ್ಣ ಕಂಕನಹಳ್ಳಿ, ಸಂತೋಷ್ ಕಂಕನಹಳ್ಳಿ, ಸೇರಿದಂತೆ ಇತರರಿದ್ದರು.