ಕಲೆಯ ಉತ್ಸವದ ಅಂತರಾಷ್ಟ್ರೀಯ ಕಾರ್ಯಾಗಾರ

ಕೋಲಾರ, ಅ. ೩೧: ನಗರ ಹೊರವಲಯದ ಶತಶೃಂಗ ಪರ್ವತದಲ್ಲಿನ ತೇರಹಳ್ಳಿ ಆದಿಮ ಸಾಂಸ್ಕೃತಿಕ ಕೇಂದ್ರದದಲ್ಲಿ ನವೆಂಬರ್ ಒಂದರಂದು ಮಂಗಳವಾರ ಬೆಳಿಗ್ಗೆ ೧೦ ಗಂಟೆಗೆ ಆದಿಮ ಸಾಂಸ್ಕೃತಿಕ ಕೇಂದ್ರ ಮತ್ತು ಆರ್‍ಟ್ ಅಂಡ್ ಹ್ಯೂಮ್ಯಾನಿಟಿಸ್ ರಿಸರ್ಚ್ ಸೆಂಟರ್ ನಾಟಿಂಗ್‌ಹ್ಯಾಂ ಟ್ರೆಂಟ್ ಯೂನಿವರ್ಸಿಟಿ ಯು.ಕೆ. ಫಾಲ್ ವ್ಯಾಲರಿವಿಶ್ವವಿದ್ಯಾಲಯ
ಫ್ರಾನ್ಸ್ ಸಹಭಾಗಿತ್ವದಲ್ಲಿ ನಡೆಯುವ ಅಂತರಾಷ್ಟ್ರೀಯ ದಲಿತ ಆದಿವಾಸಿ ಸಾಹಿತ್ಯ ಮತ್ತು ಪ್ರದರ್ಶನ ಕಲೆಯ ಉತ್ಸವದ ಕಾರ್ಯಗಾರವನ್ನು ಆಯೋಜಿಸಲಾಗಿದೆ ಎಂದು ಖ್ಯಾತ ಕವಿ ಮತ್ತು ಸಾಹಿತಿಗಳಾದ ಡಾ.ಮುಡ್ನಾಕೂಡು ಚಿನ್ನಸ್ವಾಮಿ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿನ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ಕಾರ್ಯಗಾರವನ್ನು ಡಾ. ಜುಡಿತ್ ಮಿಸ್‌ರಾಹಿ -ಬರಾಕ್ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಅದಿಮ ಸಾಂಸ್ಕೃತಿ ಕೇಂದ್ರದ ಅಧ್ಯಕ್ಷರಾದ ಎನ್.ಮುನಿಸ್ವಾಮಿ ವಹಿಸಲಿದ್ದಾರೆ ಎಂದರು.
ಅದಿಮ ಸಾಂಸ್ಕೃತಿ ಕೇಂದ್ರವು ನೆಲ ಸಂಸ್ಕೃತಿಯ ನಡೆಯೊಂದಿಗೆ ಸಮಾನ ನಮಸ್ಕರು ಕೂಡಿ ಕಳೆದ ೧೯೯೫ರಲ್ಲಿ ಪ್ರಾರಂಭಿಸಲಾಯಿತು ಸುಮಾರು ೧೦ ವರ್ಷಗಳ ಅಭಿವೃದ್ದಿಯಲ್ಲಿ ತೊಡಗಿಸಿ ಕೊಂಡು ೨೦೦೬ ರಿಂದ ಸಾಂಸ್ಕೃತಿಕ ಮತ್ತು ಸಾಹಿತ್ಯದ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡಿದೆ. ಪ್ರತಿ ತಿಂಗಳು ಹುಣ್ಣಿಮೆ ಕಾರ್ಯಕ್ರಮದಲ್ಲಿ ನಾಟಕ, ಹಾಡು, ನೃತ್ಯ,ಜನಪದ, ಕಲಾ ಪ್ರಕಾರಗಳ ಪ್ರದರ್ಶನಗಳು ತತ್ವ ಪದಗಳ ಗಾಯನ, ಸಮಾಜದ ತೆರೆಮರೆಯಲ್ಲಿ ಸಮಾಜಮುಖಿಯಾಗಿ ಕೆಲಸ ಮಾಡಿದವರನ್ನು ಗುರುತಿಸಿ ಗದ್ದುಗೆಯ ಗೌರವ ನೀಡಿ ಗೌರವಿಸಲಾಗುವುದು.ಈವರೆಗೆ ಸುಮಾರು ೧೮೫ಕ್ಕೂ ಹೆಚ್ಚು ಹಾಡು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನೆರವೇರಿಸಲಾಗಿದೆ ಎಂದು ತಿಳಿಸಿದರು,
ಪ್ರತಿವರ್ಷದ ಬೇಸಿಗೆಯಲ್ಲಿ ಮೂರರಿಂದ ೯ನೇ ತರಗತಿಯವರೆಗೆ ವ್ಯಾಸಂಗ ಮಾಡುವ ಮಕ್ಕಳಿಗೆ ತರಭೇತಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಬೇಸಿಗೆ ತಂಗ ಶಿಬಿರ ನಡೆಸುತ್ತಿದ್ದು ಸುಮಾರು ೧೫೦ಕ್ಕೂ ಹೆಚ್ಚು ಮಕ್ಕಳು ಭಾಗವಹಿಸುತ್ತಿದ್ದರು, ತರಭೇತಿಯು ೧೫ದಿನಗಳ ನಡೆಯುತ್ತಿತ್ತು, ಈ ರಂಗ ಶಿಬಿರದಲ್ಲಿ ಮಕ್ಕಳಲ್ಲಿರುವ ಸುಪ್ತ ಪ್ರತಿಭೆಗಳಿಗೆ ಸಂಪನ್ಮೂಲ ವ್ಯಕ್ತಿಗಳಿಂದ ಸೂಕ್ತ ತರಭೇತಿ ನೀಡಲಾಗುತ್ತಿತ್ತು, ಶಿಬಿರದಲ್ಲಿ ನಾಟಕ,ಹಾಡು, ಚಿತ್ರಕಲೆ, ಡೊಳ್ಳು ಕುಣಿತ, ಕೋಲಾಟ, ತಮಟೆ,ಕಂಸಾಳೆ, ಮಣ್ಣಿನ ಅಟಿಕೆಗಳ ತಯಾರಿಕೆ,ಪಟಕುಣಿತ, ನಗಾರಿ, ಇನ್ನು ಹಲವಾರು ಕಲಾಪ್ರಕಾರಗಳ ತರಭೇತಿಯನ್ನು ನೀಡಿ ಬುದ್ದ ಪೂರ್ಣಿಮ ದಿನದಂದು ಪ್ರದರ್ಶಿಸಲಾಗುತ್ತಿತ್ತು ಎಂದು ಹೇಳಿದರು,
ಈಗಾ ಆದಿಮ ಕೇಂದ್ರವು ಮತ್ತೂಂದು ಹೆಜ್ಜೆ ಮುಂದೆ ಹೋಗಿದ್ದು ಅಂತಾರಾಷ್ಟ್ರೀಯ ಮಟ್ಟದ ಕಾರ್ಯಕ್ರಮದ ಜೂತೆ ಸಹಬಾಗಿತ್ವವನ್ನು ಪಡೆಯುತ್ತಿದೆ, ಈ ಕಾರ್ಯಕ್ರಮವು ಕಾಗದದ ಮೇಲೆ ಮತ್ತು ರಂಗ ಸಜ್ಜಿಕೆಯ ಮೇಲೆ ಕಾರ್ಯಕ್ರಮದಲ್ಲಿ ಡಾ.ಕೆ.ವಿ. ನೇತ್ರಾವತಿ, ಡಾ.ಪುಷ್ಪಲತಾ ಹೆಚ್.ಎನ್. ಡಾ.ಲಕ್ಷ್ಮೀನಾರಾಯಣಸ್ವಾಮಿ, ಕಾವ್ಯ ಎಂ.ಎನ್. ಮತ್ತು ಭಾರತರಾಜ್ ಆರ್. ಸೇರಿದಂತೆ ೫ ಮಂದಿ ಕವಿಗಳು ಹಾಗೂ ಅಂಜುಲ, ಚಂದ್ರಮ್ಮ, ವಂಶಿ, ಹರ್ಷಿತ ಕುಮಾರ್ ಅದಿಮ, ಕೆ.ವಿ.ನಾಯಕ ಹಂಸ ಕಲಾವಿದರು ಭಾಗವಹಿಸಲಿದ್ದಾರೆ. ಭಾಗವಹಿ
ಲಿದ್ದಾರೆ ಎಂದರು.
ಆರ್‍ಟ್ ಅಂಡ್ ಹ್ಯೂಮ್ಯಾನಿಟಿಸ್ ರಿಸರ್ಚ್ ಸೆಂಟರ್ ನಾಟಿಂಗ್‌ಹ್ಯಾಂ ಟ್ರೆಂಟ್ ಯೂನಿವರ್ಸಿಟಿ ,ಯು.ಕೆ ಫಾಲ ವ್ಯಾಲರಿ ವಿಶ್ವವಿದ್ಯಾಲಯ ಫ್ರಾನ್ಸ್ ವಿಶ್ವವಿದ್ಯಾಲಯಗಳು ಕಳೆದ ೨೦೧೫ ರಿಂದ ಹಲವಾರು ದೇಶಗಳಲ್ಲಿ ದಲಿತ ಮತ್ತು ಆದಿವಾಸಿ ಸಾಹಿತ್ಯ ಮತ್ತು ಪ್ರದರ್ಶಿಕ ಕಲೆಗಳನ್ನು ನಡೆಸುತ್ತಾ ಬರುತ್ತಿದೆ.ದಲಿತ ಮತ್ತು ಆದಿವಾಸಿ ಕಲೆಗಳಿಗೆ ವಿಶೇಷ ಒತ್ತು ನೀಡಬೇಕೆಂಬುವುದು ಮುಖ್ಯ ಉದ್ದೇಶವನ್ನು ಹೊಂದಿದ್ದು ಪ್ರಸಕ್ತ ಸಾಲಿನಲ್ಲಿ ದೇಶದ ೪ ಭಾಗಗಳಲ್ಲಿ ಸೆಲಿಬ್ರೆಟಿಂಗ್ ದಲಿತ್ ಅಂಡ್ ಅಡ್‌ವೈಸ್ ಲಿಟರೇಚರ್‍ಸ್ ಅಂಡ್ ಪರ್‌ಫಾರ್ಮಿಂಗ್ ಆರ್ಟ್ಸ್ ಎಂಬ ಹೆಸರಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿ ಕೊಂಡಿದೆ ಎಂದು ತಿಳಿಸಿದರು.
ಭಾರತದ ಪ್ರಮುಖ ನಗರವಾದ ಹೈದರಾಬಾದ್, ಚನ್ನೈ, ರಾಂಚಿ ಹಾಕೂ ಕರ್ನಾಟಕದ ಕೋಲಾರದ ಅದಿಮ ಸಾಂಸ್ಕೃತಿಕ ಕೇಂದ್ರದಲ್ಲಿ ಆಯೋಜಿಸಿದೆ. ಇದರ ನೇತ್ರತ್ವವನ್ನು ಡಾ.ಜುಡಿತ್ ಮಿಸ್ ರಾಹಿ-ಬರಾಕ್ ಮತ್ತು ಗೇಬ್ರಿಯಲ್ ಮ್ಯಾಕ್ ಕ್ಯಾಮ್ಲೆ-ಲಾಂಜರ್ ವಹಿಸಿದ್ದಾರೆ. ಇವರೊಂದಿಗೆ ಚಿಂತಕರಾದ ದು.ಸರಸ್ವತಿ ಭಾಗವಹಿಸಲಿದ್ದಾರೆ ಎಂದು ವಿವರಿಸಿದರು,
ಆದಿಮ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷರಾದ ಎನ್. ಮುನಿಸ್ವಾಮಿ ಮಾತನಾಡಿ ಸಾಂಸ್ಕೃತಿ ಬದುಕು ಮತ್ತು ಚಟುವಟಿಕೆಗಳ ಅಧ್ಯಾಯದ ಸ್ಥಿತಿಗತಿಗಳ ವಿಚಾರಗಳ ವಿನಿಮಯವು ಮೂಲ ಉದ್ದೇಶವನ್ನು ಹೊಂದಿರುವ ಕಾರ್ಯಕ್ರಮವಾಗಿದೆ. ಸಾಂಸ್ಕೃತಿಕ ಎಂಬುವುದು ಸದ್ದಿಲ್ಲದೆ ಸಿಡಿಯುವ ಸಿಡಿ ಮದ್ದುಗಳನ್ನು ಕಟ್ಟುವುದಾಗಿದೆ. ಭಾರತವು ಯಾಜಮಾನಿಕ ಸಂಸ್ಕೃತಿಯು ಅನಾದಿ ಕಾಲದಿಂದಲೂ ಅಳವಡಿಸಿ ಕೊಂಡು ಬಂದಿರುವ ಬಗ್ಗೆ ವಿಚಾರಗಳ ಬಗ್ಗೆ ಅರಿವು ಮೋಡಿಸುವುದಾಗಿದೆ ಎಂದು ತಿಳಿಸಿದರು,
ಡಾ.ಜುಡಿತ್ ಮಿಸ್ ರಾಹಿ-ಬರಾಕ್ ಮತ್ತು ಖ್ಯಾತ ರಂಗ ಕಾಲಾವಿದೆ ದು.ಸರಸ್ಪತಿ ಮಾತನಾಡಿ ಣಾರತದ ಅದಿವಾಸಿಗಳ ಮತ್ತು ದಲಿತರ ಬಗ್ಗೆ ವಿಚಾರಧಾರೆಗಳು, ದಲಿತ ಚಳುವಳಿಗಳು ಸಾಂಸ್ಕೃತಿಕ ತಾನವಾಗಿರುವ ಈ ನೆಲದ ಸಂಸ್ಕೃತಿಗಳ ಚಟುವಟಿಕೆಗಳ ಪರಸ್ಪರ ವಿಚಾರಗಳು ಪರಿಚಯಿಸುವಂತ ಸ್ನೇಹಮಯ ಜ್ಞಾನಾಭಿವೃದ್ದಿಯ ಕಾರ್ಯಕ್ರಮವಾಗಿದೆ. ವಿವಿಧ ರಾಜ್ಯ ಮತ್ತು ದೇಶಗಳ ಸಾಂಸ್ಕೃತಿಗಳನ್ನು ವಿನಿಮಯ ಮಾಡಿಕೊಳ್ಳುವಂತ ಕಾರ್ಯಕ್ರಮವಾಗಿದೆ ಎಂದರು,
ಪತ್ರಿಕಾಗೋಷ್ಠಿಯಲ್ಲಿ ಆದಿಮ ಸಾಂಸ್ಕೃತಿಕ ಕೇಂದ್ರದ ಕಾರ್ಯದರ್ಶಿ ಕೊಮ್ಮಣ್ಣ ಮತ್ತು ಟ್ರಸ್ಟಿ ಹ,ಮಾ.ರಾಮಚಂದ್ರ ಉಪಸ್ಥಿತರಿದ್ದರು,