ಕಲೆಯಲ್ಲಿ ನಮ್ಮ ಸಂಸ್ಕøತಿ ಅಡಗಿದೆ


ಹುಬ್ಬಳ್ಳಿ,ಜು.15: ನಶಿಸುತ್ತಿರುವ ಭಾರತೀಯ ಸಂಸ್ಕøತಿ ಮತ್ತು ಜಾನಪದ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಹುಬ್ಬಳ್ಳಿಯ ಪ್ರೇಮ್‍ಜಿ ಫೌಂಡೇಶನ್ ಮಹತ್ವದ ಪಾತ್ರನಿರ್ವಹಿಸುತ್ತಿರುವದು ಶ್ಲಾಘನೀಯ ಎಂದು. ಶಿರಹಟ್ಟಿಯ ಭಾವೈಕ್ಯತೆ ಸಂಸ್ಥಾನಪೀಠದ ಜಗದ್ಗುರು ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿಗಳು ಹೇಳಿದರು.
ಹುಬ್ಬಳ್ಳಿಯ ಪ್ರೇಮ್‍ಜಿ ಫೌಂಡೇಶನ್‍ನಿಂದ ಆಷಾಡ ಮಾಸದ ಕೊನೆಯ ಶುಕ್ರವಾರದ ನಿಮಿತ್ತ ಹಮ್ಮಿಕೊಂಡಿದ್ದ ಮಹಿಳೆಯರಿಗೆ ಉಡಿ ತುಂಬುವದರ ಜೊತೆಗೆ ರಾಷ್ಟ್ರೀಯ ಕಲಾವಿದೆ ಸವಿತಕ್ಕೆ ಅವರ ಉಧೋ ಉಧೋ ಎಲ್ಲವ್ವ ದೇವಿ ಕುರಿತ ಜನಪದ ಹಾಡುಗಳು ಮತ್ತು ಪದ್ಮಶ್ರೀ ಪುರಸ್ಕೃತೆ ಡಾ. ಮಂಜಮ್ಮ ಜೋಗತಿ ಕುರಿತ ಕಲಾವಿದ ಅರುಣಕುಮಾರ ಅಭಿನಯದ ಮಾತಾ ಏಕ ವ್ಯಕ್ತಿ ರಂಗ ಪ್ರಯೋಗ ಕಾರ್ಯಕ್ರಮದ ಸಾನಿಧ್ಯವಹಿಸಿ ಅವರು ಮಾತನಾಡಿದರು.
ಮುಖ್ಯಅತಿಥಿಯಾಗಿ ಪಾಲ್ಗೊಂಡಿದ್ದ ಸ್ವರ್ಣಾ ಸಮೂಹ ಸಂಸ್ಥೆಯ ಮುಖ್ಯಸ್ಥ ಡಾ. ವಿ.ಎಸ್.ವಿ ಪ್ರಸಾದ ಮಾತನಾಡಿ, ಕಲೆಯಲ್ಲಿ ನಮ್ಮ ಸಂಸ್ಕೃತಿ ಅಡಗಿದೆ. ಜನಪದ ಹಾಡುಗಳಲ್ಲಿ ಇರುವ ಒಳತಿರುಳನ್ನು ಅರಿತುಕೊಂಡರೆ ನಮ್ಮ ಪೂರ್ವದ ವಿಷಯ ತಿಳಿಯುತ್ತದೆ. ಜಾನಪದ ಕಲೆ, ಹಾಡುಗಳಿಗೆ ಮತ್ತೊಂದು ಸಾಟಿಯಾಗಲಾರದು. ಆದರೆ ಅವುಗಳನ್ನು ಆಲಿಸುವವರ ಕೊರತೆಯಿಂದ ಮರೆಯಾಗುತ್ತಿವೆಯೇ ಹೊರತು ತಮ್ಮ ಅಸ್ತಿತ್ವ ಕಳೆದುಕೊಂಡಿಲ್ಲ , ಪ್ರೇಮ್‍ಜಿ ಫೌಂಡೇಶನ್ ಸಂಸ್ಥಾಪಕರಾದ ಗುರುರಾಜ ಹೂಗಾರ ಅವರು ಹುಬ್ಬಳ್ಳಿ-ಧಾರವಾಡ ಅವಳಿನಗರದ ಜನತೆಗೆ ಇಂತಹ ಒಳ್ಳೊಳ್ಳೆ ಕಾರ್ಯಕ್ರಮಗಳನ್ನು ನೀಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಅಂತರಾಷ್ಟ್ರೀಯ ಖ್ಯಾತಿಯ ಜಾನಪದ ಕಲಾವಿದೆ ಸವಿತಕ್ಕಾ , ಡಾ. ಮಂಜಮ್ಮ ಜೋಗತಿ , ಹು-ಧಾ ಮೇಯರ್ ವೀಣಾ ಬರದ್ವಾಡ , ಸುಮಧುರ ಫೌಂಡೇಶನ್ ಅಧ್ಯಕ್ಷೆ ಪ್ರೇಮಾ ಹೂಗಾರ , ಡಾ. ವೀಣಾ ಕಾರಟಗಿ , ಭಾನುಮತಿ ಸೇರಿದಂತೆ ಕಾರ್ಯಕ್ರಮಕ್ಕೆ ಆಗಮಿಸಿದಂತ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಿತು.
ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಲೋಚನೇಶ ಹೂಗಾರ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಬಸವೇಶ್ವರ ರೂರಲ್ ಎಜ್ಯುಕೇಶನ್ ಆ್ಯಂಡ್ ಡೆವಲಪಮೆಂಟ್ ಟ್ರಸ್ಟ್ ಮುಖ್ಯಸ್ಥ ಡಾ. ಶರಣಪ್ಪ ಕೊಟಗಿ , ಮೇಯರ್ ವೀಣಾ ಬರದ್ವಾಡ , ಗುರುರಾಜ ಹೂಗಾರ, ಸರ್ವಧರ್ಮಗಳ ಸಮಾಜ ಸೇವಕ ರಮೇಶ ಮಹಾದೇವಪ್ಪನವರ, ಲಿಂಗರಾಜ ಪಾಟೀಲ, ಡಾ. ರಾಮಚಂದ್ರ ಕಾರಟಗಿ, ಡಾ.ವಿಜಯ ಮಹಾಂತೇಶ ಪೂಜಾರ, ಈಶ್ವರಿ ಫೌಂಡೇಶನ್ ಸಂಸ್ಥಾಪಕ ಸಂತೋಷ ವೆರ್ಣೇಕರ, ಪೆÇಲೀಸ್ ಅಧಿಕಾರಿಗಳಾದ ಜೆ.ಎಂ ಖಾಲಿಮಿರ್ಚಿ, ಮಲ್ಲಪ್ಪ ಹೂಗಾರ , ಖ್ಯಾತ ಜಾನಪದ ಗಾಯಕಿ ಸವಿತಕ್ಕಾ, ವಿ. ಎಂ.ಹಿರೇಮಠ, ಪ್ರೇಮಾ ಹೂಗಾರ, ಆನಂದ ಗೋನಾಳ, ಎಚ್.ಎಸ್.ಕಿರಣ, ಡಾ. ರಾಮು ಮೂಲಗಿ , ಗದಿಗೆಯ್ಯ ಹಿರೇಮಠ ಸೇರಿದಂತೆ ಮತ್ತಿತರ ಗಣ್ಯರು ಈ ಸಂದರ್ಭದಲ್ಲಿದ್ದರು.