ಕಲೆಯನ್ನೇ ಬದುಕಾಗಿಸಿಕೊಂಡವರ ಜೀವನ ಸಂಕಷ್ಟದಲ್ಲಿ ;ಮಂಜುನಾಥ

ಕುಕನೂರು ಮಾ 14 :ಪೂರ್ವಜರು ಬಿಟ್ಟು ಹೋದ ಜಾನಪದ ಕಲೆಯನ್ನೇ ಬದುಕಾಗಿಸಿಕೊಂಡ ಸಾಕಷ್ಟು ಕಲಾವಿದರ ಕುಟುಂಬಗಳು ಸಂಕಷ ಜೀವನ ಸಾಗಿಸುತ್ತಿದ್ದಾರೆ ಎಂದು ಕನ್ನಡ ಜಾನಪದ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಮಂಜುನಾಥ ಗೊಂಡಬಾಳ ಅಭಿಪ್ರಾಯಪಟ್ಟರು
ಪಟ್ಟಣದ ಶ್ರೀಇಟಗಿ ಭೀಮಾಂಬಿಕಾ ಮಠದ ಆವರಣದಲ್ಲಿ ಕನ್ನಡ ಜಾನಪದ ಪರಿಷತ್ ತಾಲೂಕು ಘಟಕದಿಂದ ಕನ್ನಡ ಜಾನಪದ ಪರಿಷತ್ ಸಂಸ್ಥಾಪನಾ ದಿನ ಹಾಗೂ ಶಿವರಾತ್ರಿಯ ನಿಮಿತ್ತ ಜನಪದ ಭಜನಾ ಮಹಾಮೇಳದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ,ಮೂಲ ಜನಪದ ಕಲೆಗಳಲ್ಲಿ ಒಂದಾಗಿರುವ ಭಜನೆಯು ನಮ್ಮ ಉತ್ತರ ಕರ್ನಾಟಕದ ಭಾಗದಲ್ಲಿ ಅತಿಹೆಚ್ಚು ಕಾಣುತೇವೆ ಪ್ರತಿ ಗ್ರಾಮಗಳಲ್ಲಿ ಎರಡರಿಂದ ಮೂರು ಭಜನಾ ತಂಡಗಳು ಇರುತ್ತವೆ ಪ್ರತಿ ಹಬ್ಬ ,ಅಮವಾಸ್ಯೆ, ಶಿವರಾತ್ರಿ ,ಶ್ರಾವಣ ಸಂದರ್ಭದಲ್ಲಿ ಹಾಗೂ ಶೋಕದ ಕಾರ್ಯಕ್ಕೆ ಹಾಗೂ ಮಳೆ ಬಾರದಿದ್ದರೆ ಸಮಾಜಕ್ಕೆ ಕಂಟಕ ಎದರಾದರೆ ಭಜನೆ ಮಾಡುವುದರ ಮುಖಾಂತರ ಸಂಕಷ್ಟವನ್ನು ದೂರ ಮಾಡುವ ಮನೋಭಾವನೆ ಬೆಳೆಸುವ ಮಹತ್ತರ ಕಲೆ ಭಜನೆ,ಭಜನೆ ತಂಡಗಳ ಕಲಾವಿದರ ಶ್ರೇಯೋಭಿವೃದ್ಧಿಗೆ ಹಲವಾರು ಯೋಜನೆಗಳನ್ನು ಸರ್ಕಾರ ಹಾಕಿಕೊಳ್ಳಬೇಕು ಜೊತೆಗೆ ಇಂಥಹ ಹಲವಾರು ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ ಗ್ರಾಮೀಣ ಭಾಗದ ಪ್ರತಿಭಾನ್ವಿತ ಕಲಾವಿದರನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವ ಕಾರ್ಯ ಮಾಡಬೇಕು ಎಂದರು.
ಪ್ರವಚನಕಾರ ಕಲ್ಲಯ್ಯ ಕಲ್ಲೂರ್ ಅವರು ಮಾತನಾಡಿ ,ಜನಪದ ಕಲೆ ಉಳಿಸಿ ಬೆಳೆಸುವ ಜವಾಬ್ದಾರಿ ಸಾರ್ವಜನಿಕರ ಮೇಲಿದೆ ಸಾಕಷ್ಟು ಜನಪದ ಕಲಾವಿದರಿಗೆ ಸಹಾಯ ಸಹಕಾರ ನೀಡುವುದರ ಜೊತೆಗೆ ವೇದಿಕೆಗಳನ್ನು ಕಲ್ಪಿಸಿ ಬೆಳವಣಿಗೆಗೆ ದಾರಿದೀಪವಾಗಬೇಕು ,ಕಠಿಣ ಪರಿಶ್ರಮ ನಿರಂತರ ಅಭ್ಯಾಸದಿಂದ ಮಾತ್ರ ಸಂಗೀತ ಉಳಿಯಲು ಸಾಧ್ಯ ಸಂಗೀತದ ಪಾಂಡಿತ್ಯ ಪಡೆದುಕೊಂಡು ಉಳಿಸಿ ಬೆಳೆಸುವ ಇನ್ನೊಬ್ಬರಿಗೆ ಕಲಿಸುವ ಮನೋಭಾವನೆಯನ್ನು ಕಲಾವಿದರು ಬೆಳೆಸಿಕೋಳಬೇಕು ಎಂದರು.
ಕನ್ನಡ ಜಾನಪದ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಕಾರ್ಯಕ್ರಮ ಆಯೋಜಕ ಮುರಾರಿ ಭಜಂತ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು ಡಾ. ಬಸವರಾಜ ಬಣ್ಣದಬಾವಿ ಎಸ್ ಎಸ್ ಹಿರೇಮಠ ಬಸವರಾಜ ಜಂಗಲಿ ಆರ್ ಪಿ ರಾಜೂರು ಮಾತನಾಡಿದರು
ಈ ಸಂದರ್ಭದಲ್ಲಿ ದುರ್ಗಾದೇವಿ ಚಲವಾದಿ ಭಜನಾ ಸಂಘ ಹಾಗೂ ಗಾಳೆಮ್ಮ ದೇವಿ ಬಾಪೂಜಿ ಭಜನಾ ಸಂಘದಿಂದ ಭಜನಾ ಮೇಳದಿಂದ ಸಂಗೀತದ ರಸದೌತಣವನ್ನು ಉಣಬಡಿಸಿದರು ಕಲಾ ತಂಡ ಸದಸ್ಯರಿಗೆ ಸನ್ಮಾನಿಸಿ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು
ಈ ಸಂದರ್ಭದಲ್ಲಿ ಗಂಗಾವತಿಯ ಎಲ್ ಐ ಸಿ ವ್ಯವಸ್ಥಾಪಕ ಶಂಕರ್ ಕಲ್ಮನಿ ಪತ್ರಕರ್ತ ರುದ್ರಪ್ಪ ಭಂಡಾರಿ ಬಸವರಾಜ ಕಿತ್ತೂರು ಸುಭಾಸ ಭಜಂತ್ರಿ ರಮೇಶ್ ಗಜಕೋಶ್ ಲಕ್ಷ್ಮಣ್ಣ ಕಂಬಳಿ ರಾಮಣ್ಣ ಕಂಬಳಿ ಶಿವಪ್ಪ ಆದಿ ಕಾರ್ಯಕ್ರಮವನ್ನು ನಿರೂಪಿಸಿದರು ಅಕ್ಷತಾ ಬಣ್ಣದಬಾವಿ ಪ್ರಾರ್ಥಿಸಿದರು ಮುಕುಂದ್ ಭಜಂತ್ರಿ ಸ್ವಾಗತಿಸಿದರು