ಕಲೆಯನ್ನು ಉಳಿಸಿ ಪಸರಿಸಲು ನಿರಂತರ ಶ್ರಮ ಅಗತ್ಯ.


ಸಂಜೆವಾಣಿ ವಾರ್ತೆ
ಸಂಡೂರು: ಮೇ: 30 ಜಾನಪದ ಸೊಗಡು ಗ್ರಾಮೀಣಾ ಭಾಗದಲ್ಲಿ ಹೆಚ್ಚಾಗಿ ಕಂಗೊಳಿಸುತ್ತಿದ್ದು ಪಟ್ಟಣದಲ್ಲಿ ಜಾನಪದ ಸೊಗಡು ಪಸರಿಸಬೇಕಾಗಿದೆ. ಜಾನಪದ ಅಳಿವಿನ ಅಂಚಿನಲ್ಲಿ ಸಾಗುತ್ತಿದ್ದು ಜಾನಪದ ಕಲೆಯನ್ನು ಅಳಿಸದೇ ಉಳಿಸಲು ಅವಿರತ ಶ್ರಮ ಅತಿ ಅವಶ್ಯ., ಗ್ರಾಮೀಣ ಹಾಗೂ ಪಟ್ಟಣದ ಜನರು ಜಾನಪದ ಕಲೆಯನ್ನು ಉಳಿಸಲು ಒಂದಾದರೆ ಮಾತ್ರ ಯಶಸ್ಸು ಸಾಧ್ಯ.  ಇಲ್ಲವಾದಲ್ಲಿ ಫಲಿತಾಂಶ ಶೂನ್ಯವೆಂದು ಹಿರಿಯ ಬಯಲಾಟ ಕಲಾವಿದ ಶಿವಮೂರ್ತಿಯವರು ತಿಳಿಸಿದರು.
ಅವರು ಸಂಡೂರು ತಾಲೂಕಿನ ತೋರಣಗಲ್ಲು ಗ್ರಾಮದಲ್ಲಿ 2ನೇ ವಾರ್ಡನಲ್ಲಿ ಶಂಕರಲಿಂಗ ಕೃಪಾಪೋಷಿತ ನಾಟಕ ಮಂಡಳಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಳ್ಳಾರಿ ಇವರ ಸಹಯೋಗದಲ್ಲಿ ಇತ್ತೀಚಿಗೆ ಏರ್ಪಡಿಸಿದ್ದ ಶಿವಜಲಂಧರ ಅರ್ಥಾತ್ ಸುಂದೋಪ ಸುಂದರ ಎನ್ನುವ ಪೌರಾಣಿಕ ಬಯಲಾಟಕ್ಕೆ ಚಾಲನೆ ನೀಡಿ ಮಾತನಾಡಿದರು. ಅವರು ಮುಂದುವರೆದು ಗ್ರಾಮೀಣ ಜನರು ಜೀವನಾಡಿ ಬಯಲಾಟ, ಗಂಡು ಮೆಟ್ಟಿನ ಕಲೆಯ ಉಳಿವಿಗೆ ನಾಡಿನ ಲೇಕಕರು, ಚಿಂತಕರು, ಹಾಗೂ ಬಯಲಾಟ ಕಲಾಸಕ್ತರು ಶ್ರಮಿಸಬೇಕಾಗಿದೆ. ಅಲ್ಲದೆ ರಾಜ್ಯ ಸರ್ಕಾರ ಸಹ ಕಲೆಗೆ ಅಗತ್ಯ ಅನುದಾನ ಮೀಸಲು ಇಡುವುದರ ಜೊತೆಗೆ ಬಯಲಾಟದ ಕಲಾ ಪೋಷಣೆಗೆ ಮುಂದಾಗಬೇಕಾಗಿದೆ. ಎಂದು ತಿಳಿಸಿದರು.
ಪಾತ್ರಗಳು : ಟಿ.ಜಿ. ಸಿದ್ದಾರ್ಥ ( ಬಾಲಕೃಷ್ಣ) ಎಸ್. ಪಂಪಾಪತಿ ( ದೇವೇಂದ್ರ) ಕೆ. ಎರಿಸ್ವಾಮಿ ( ಸಾರಥಿ) ವಿ.ಎಂ. ಶಿವಮೂರ್ತಿ ( ಜಲಂಧರ) ವಿ.ನಾಗಪ್ಪ ಸ್ವಾಮಿ ( ರಾಹು) ಗಾಳಿ ಪಂಪಾಪತಿ ( ಕೇತು) ವಿ. ಸಂತೋಷ್‍ಕುಮಾರ್ ( ವಿಷ್ಣು) ವಿ. ಬಸವರಾಜ (ಪರಮೇಶ್ವರ) ಜಿ.ಸಣ್ಣ ರುದ್ರಗೌಡ ( ಸಂದೋಪ) ಟಿ.ಜೆ. ಸಉರೇಶ್ ( ಸುಂದರ), ಉಮಾ ಅಂಕಮನಾಳ್ ( ವೃಂದ), ಸುಮಾ ಕೂಡ್ಲಿಗಿ ( ತಿಲೋತ್ತಮೆ) ಶಶಿಕಲಾ ವಿರೂಪಾಪುರ ( ರಂಭೆ) ಈ ಎಲ್ಲಾ ಪಾತ್ರ ಧಾರಿಗಳು ಜನರ ಮನಸ್ಸನ್ನು ಆಕರ್ಷಿಸಿ ರಂಜಿಸಿದರು.
ಬಯಲಾಟದ ಮಾಸ್ಟರ್ ತಿಮ್ಮಾರೆಡ್ಡಿ ಸಹ ನಿರ್ದೇಶಕ ವೀರೇಶ್, ತಬಲಾ ನಾಗೇಶ್ ರಿದಂ ಪ್ಯಾಡ್, ಕರಿಬಸವನಗೌಡ, ಸಾಋಥಿ ಯಲ್ಲಪ್ಪ ಕೊಳಗಲ್ಲು ಹಿನ್ನಲೆ ಗಾಯಕರು ದೊಡ್ಡ ಬಸಪ್ಪ, ಯರ್ರಿಸ್ವಾಮಿ, ರುದ್ರಪ್ಪ ಕಾರ್ಯಕ್ರಮವನ್ನು ಅಚ್ಚು ಕಟ್ಟಾಗಿ ನಿರ್ವಹಿಸಿದರು. ಹೇಮರಡ್ಡಿ ಕಾರ್ಯಕ್ರಮವನ್ನು ನಿರೂಪಿಸಿದರು.

One attachment • Scanned by Gmail

ReplyForward