ಕಲೆಗೆ ಪ್ರೋತ್ಸಾಹಿಸಲು ಚಂದ್ರಶೇಖರ್ ಪಾಟೀಲ್ ಕರೆ

ರಾಯಚೂರು-ನ-೨೧-ಕಲೆಗೆ ಪ್ರೋತ್ಸಾಹಿಸಲು ಕಲಾರಸಿಕರಿಗೆ ವೀರಶೈವ ಸಮಾಜದ ಜಿಲ್ಲಾಧ್ಯಕ್ಷರಾದ ಚಂದ್ರಶೇಖರ್ ಪಾಟೀಲ್ ಅವರು ಕಲಾ ರಸಿಕರಿಗೆ ಕರೆ ನೀಡಿದರು.
ಅವರು ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ರಂಗಸಿರಿ ಸಾಂಸ್ಕೃತಿಕ ಕಲಾ ಬಳಗ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಟೇಪ್ ಕತ್ತರಿಸುವದರೊಂದಿಗೆ ಉದ್ಗಾಟಿಸಿ ಮಾತನಾಡಿದರು
ಸಿನಿಮಾ ವಾಟ್ಸಪ್ ದಿಂದ ಗ್ರಾಮೀಣ ರಂಗಭೂಮಿ ನಾಟಕಗಳು ನಶಿಸಿ ಹೋಗಃತ್ತೀವೆ ಕಲಾ ರಸಿಕರು ಸಾಂಸ್ಕೃತಿಕಕ್ಕೆ ಪ್ರೋತ್ಸಾಹಿಸಿ ಜೀವಂತ ಇಡಬೇಕೆಂದು ಪಾಟೀಲ್ ಅವರು ತಿಳಿಸಿದರು.
ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮದ ಜೋತಿಯನ್ನು ಎ.ಎ.ಪಿ ಗ್ರಾಮೀಣ ಕ್ಷೇತ್ರದ ಆಕಾಂಕ್ಷಿಗಳಾದ ಡಾ|| ಸುಭಾಷಚಂದ್ರ ಸಂಬಾಜಿ ಹಾಗೂ ಕಾಂಗ್ರೆಸ್ ಪಕ್ಷದ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ಡಾ.ನಾಗವೇಣಿ ಎಸ್ ಪಾಟೀಲ್ ಉದ್ಘಾಟಿಸಿದರೆ ಅಧ್ಯಕ್ಷತೆಯನ್ನು ಹಿರಿಯರಾದ ವಿ.ಎಸ್. ಅಕ್ಕಿ ಅವರು ವಹಿಸಿದ್ದರು.
ವೇದಿಕೆಯ ಮೇಲೆ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷರಾದ ವೀನೋದ ರೆಡ್ಡಿ , ಎ.ಎ.ಪಿ ನಗರಾಧ್ಯಕ್ಷರಾದ ಡಿ.ವೀರೇಶ್ ಕುಮಾರ್ ಕಾರ್ಯಕ್ರಮ ಸಂಯೋಜಕರಾದ ರಂಗಸ್ವಾಮಿ ಇನ್ನಿತರ ಮುಖಂಡರು ಉಪಸ್ಥಿತರಿದ್ದರು. ನಂತರ ಕಲಾವಿದರಿಂದ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ನೆರೆದ ಪೋಷಕರ ಜನಮನ ಸೇರಿಗೊಂಡವು.